ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಷಮಾಪಣೆಯಿಂದ ಶಿಕ್ಷೆಗೆ ಮುಕ್ತಿ ಸಿಗುವುದೇ?

ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು ತಪ್ಪುಗಳಿಗೆ ಶಿಕ್ಷೆ ಇರುವುದಿಲ್ಲವಾದುದರಿಂದ ಅವುಗಳಿಗೆ ಕ್ಷಮಾಪಣೆ ಸಾಕಾಗುತ್ತದೆ.

Image

ಅಬೋಟ್ಟಾಬಾದ್

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು - ೫೬೦೦೫೦
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೧

ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು.

ಎಚ್ ಡಿ ದೇವೇಗೌಡ ಅವರಿಗೆ ಜನುಮದಿನದ ಶುಭಾಶಯ ಕೋರುತ್ತಾ...

ಶ್ರೀ ಎಚ್ ಡಿ ದೇವೇಗೌಡ 92, ನಾಟ್ ಔಟ್ ಅವರು ಶತಕವನ್ನು ಬಾರಿಸಲಿ ಎಂದು ಹಾರೈಸುತ್ತಾ… ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೆ ಏರುವುದು ಎಷ್ಟು ಸೋಜಿಗವೋ, ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ.

Image

ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?

ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು ಅದ್ಭುತ ಕ್ಷಣ. ನನ್ನ ಮುಖದ ಸೌಂದರ್ಯವನ್ನು ನೋಡಿ ನನ್ನ ಹಿಂದೆ ಎಲ್ಲರೂ ಬರಲೇಬೇಕಿತ್ತು.

Image

ಕಲಿಕೆಯ ಹಾದಿ ದಿಕ್ಕು ತಪ್ಪದಿರಲಿ...

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು ಗೌಣವಾಗಿ ಬಿಟ್ಟದ್ದಂತೂ ಸತ್ಯ. ಈ ಮಧ್ಯೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿಯಾಗಿದೆ.

Image

ಭಾಕರ್ ವಾಡಿ

Image

ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ ಲಟ್ಟಿಸಿ, ಎಣ್ಣೆ ಸವರಿ, ಮಸಾಲೆ ಪುಡಿಯನ್ನು ಸಮನಾಗಿ ಹರಡಿ.

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು - ೧ ಕಪ್, ಕಡಲೆ ಹಿಟ್ಟು - ೧ ಕಪ್, ಅಕ್ಕಿ ಹಿಟ್ಟು - ೧ ಕಪ್

ಮಸಾಲೆಗೆ: ಕೊತ್ತಂಬರಿ - ೩ ಚಮಚ, ಜೀರಿಗೆ - ೨ ಚಮಚ, ಶಾಜೀರಿಗೆ - ೨ ಚಮಚ, ಅರಸಿನ - ಅರ್ಧ ಚಮಚ, ಎಳ್ಳು - ೨ ಚಮಚ, ಮೆಣಸಿನ ಹುಡಿ - ೧ ಚಮಚ, ಒಣಕೊಬ್ಬರಿ ತುರಿ - ೪ ಚಮಚ, ಬಡೆಸೋಪು - ೧ ಚಮಚ, ದಾಲ್ಚಿನ್ನಿ - ೧, ಸಣ್ಣ ತುಂಡು ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಳೆಗಾಲದ ಆರಂಭದಲ್ಲಿ ನನ್ನಪ್ಪನ ನೆನೆಯುತ್ತಾ...

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇಂದಿಗೂ ಅನುಭವವೇ ಆಗಿಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೯೭೦)- ಅಧಿಕಾರ

ಅಧಿಕಾರ ಯಾರದ್ದು? ಹಾಗೆ ಸುಲಭದಲ್ಲಿ ಅಧಿಕಾರ ಸಿಗೋದಿಲ್ಲ. ಅದನ್ನ ಪಡೆದುಕೊಳ್ಳಬೇಕು. ಅದಕ್ಕೆ ಒಂದಷ್ಟು ಅರ್ಹತೆಗಳು ಇರಬೇಕು. ಆ ಮರದಲ್ಲಿರುವ ಹಣ್ಣುಗಳನ್ನು ಹಕ್ಕಿಗಳು ಬಂದು ತಿನ್ನುತ್ತವೆ. ಅರ್ಧಂಬರ್ಧ ತಿಂದ ಹಣ್ಣುಗಳು ನೆಲಕ್ಕುರುಳಿದರೆ, ದನಗಳು ಕೆಲವನ್ನು ತಿಂದರೆ, ಹುಳಗಳು ಇನ್ನು ಕೆಲವನ್ನು ತಿನ್ನುತ್ತಿವೆ.

Image

ಜೇನು ತಿನ್ನುವ ಓತಿಕ್ಯಾತ (ಭಾಗ 2)

ಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ. ಇಷ್ಟು ಸಿಕ್ಕಿತಂತೆ ಎಂದು ಹೇಳಿದ. ನಮಗೋ ಹಣ ಸಿಗುತ್ತಲೇ ಇರಲಿಲ್ಲ.

Image