ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಂಗಟ್ಟೆ ಹಕ್ಕಿಗಳ ವಿಸ್ಮಯ ಲೋಕ !

ಹಾರ್ನ್ ಬಿಲ್ ಹಕ್ಕಿಗಳು (ಮಂಗಟ್ಟೆ ಹಕ್ಕಿ) ಈ ಬಾರಿ ಬೇಸಿಗೆಯಲ್ಲಿ ತಮ್ಮ ಗೂಡು ಕಟ್ಟುವ ತಾಣಗಳ ಬಳಿ ಇನ್ನೂ ಬಂದಿಲ್ಲ ಗೂಡು ಕಟ್ಟಲು ಪ್ರಾರಂಭಿಸಿಲ್ಲ’ ಎಂಬ ವರದಿಯನ್ನು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದೆ. ಹಾರ್ನ್ ಬಿಲ್ ಗೂಡು ಅಂದ ತಕ್ಷಣ ಕೆಲವು ವರ್ಷಗಳ ಹಿಂದೆ ಜೂನ್ ತಿಂಗಳಿನಲ್ಲಿ ಹಳಿಯಾಳದಲ್ಲಿ ಭಾಗವಹಿಸಿದ ತರಬೇತಿ ಒಂದು ನೆನಪಾಯಿತು.

Image

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 2)

ನೀರಿನ ಪಾತ್ರೆಗಳಾಗಿ ಜನರ ಬದುಕು ಕಟ್ಟಿಕೊಟ್ಟ ಈ ಬಾವಿಗಳು ನೀರಿಲ್ಲದೇ ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಈ ಬಾವಿಯಲ್ಲೇ ವಿವಿಧ ಜಾತಿಯ ಗಿಡ ಗಂಟೆಗಳು ಬೆಳೆದು ಅಕ್ಷರಶಃ ಗೂಬೆಗಳ ವಾಸಸ್ಥಾನ ಗಳಾದವು. ನಾನು ನನ್ನ ತಮ್ಮ ಬಾಲ್ಯದ ದಿನಗಳಲ್ಲಿ ಗೂಬೆಗಳ ನೋಡಲೆಂದೇ ಈ ಪಾಳು ಬಾವಿಗಳಿಗೆ ಬೇಟಿಕೊಟ್ಟು ಅವುಗಳ ಬೆಕ್ಕಿನಂತಹ ಮುಖವನ್ನು ನೋಡುವುದೇ ನಮಗೆ ಸಂಭ್ರಮವೆನಿಸುತ್ತಿತ್ತು.

Image

ಅರ್ಜುನ

ಪುಸ್ತಕದ ಲೇಖಕ/ಕವಿಯ ಹೆಸರು
ಐತಿಚಂಡ ರಮೇಶ್ ಉತ್ತಪ್ಪ
ಪ್ರಕಾಶಕರು
ಅಕ್ಷರ ಮಂಟಪ ಪ್ರಕಾಶನ, ಹಂಪಿನಗರ, ಬೆಂಗಳೂರು -೫೬೦೧೦೪
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು..

ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು...

ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ - ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು ಆಶ್ಚರ್ಯ ಪಟ್ಟರೆ, ಕೆಲವರು ನೋವು ಪಡ್ತಾರೆ. ನಾವು ಎಲ್ಲರಿಗೂ ಒಂದೇ ತೆರನಾಗಿರುವುದಿಲ್ಲ.

Image

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)

ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ, ಇಳಿಯಲು ಹತ್ತಲು ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು.. ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು.

Image