ಪುಸ್ತಕ ಸಂಪದ

  • ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು ವಿಶೇಷವಲ್ಲವೇ.. ಎಂದು. ಐತಿಚಂಡ ರಮೇಶ್ ಉತ್ತಪ್ಪ ಒಬ್ಬ ವಿಸ್ಮಯ ಬರಹಗಾರ. ಅವರು ಪ್ರಾಣಿಗಳನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರನ್ನೂ ನೋಡಲಿಲ್ಲ. ಒಂದು ಆನೆಯ ಅಥವಾ ಯಾವುದೇ ಪ್ರಾಣಿಯನ್ನು ಗಮನಿಸಿ ಅದರ ಸ್ವಭಾವವನ್ನು…

  • ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ ವಾಗ್ಮಿಯಾಗಿರುವ ಇವರು ಸಾಹಿತ್ಯದಲ್ಲೂ ಕೃಷಿ ಮಾಡಿ ಸಮರ್ಥರು ಎನಿಸಿಕೊಂಡಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಬರೆಯಬಲ್ಲ ಈಕೆ ಸ್ವಪ್ನ ಸುಂದರಿ ಕವನ ಸಂಕಲನದ ಮೂಲಕ ಕೃತಿಕಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸಂತಸದ ವಿಚಾರ. ಬಹಳಷ್ಟು ವರ್ಷಗಳಿಂದ ಬರೆಯುತ್ತಿದ್ದರೂ 2023 ರಲ್ಲಷ್ಟೇ ಇವರ ಚೊಚ್ಚಲ ಕೃತಿ ಪ್ರಕಟಗೊಂಡಿದ್ದು ತಡವಾದರೂ ಸಾಹಿತ್ಯ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸಿತು. ಇವರ ಪತಿ ಶ್ರೀ ಕೃಷ್ಣ ಭಟ್ ರವರು ಕೂಡಾ ರಾಜ್ಯ…

  • ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ. ಭಾರತ ಯಾವೆಲ್ಲಾ ವಿಷಯಗಳಲ್ಲಿ ಬದಲಾಗಿ, ವಿಶ್ವದ ಭೂಪಟದಲ್ಲಿ ತನ್ನದೇ ಆದ ಉನ್ನತ ಸ್ಥಾನವನ್ನು ಹೇಗೆ ಅಲಂಕರಿಸಿದೆ ಎನ್ನುವುದನ್ನು ತಿಳಿಸಲು ಯೂಟ್ಯೂಬರ್ ಹಾಗೂ ಉದಯೋನ್ಮುಖ ಲೇಖಕರಾದ ರಾಹುಲ್ ಅಶೋಕ್ ಹಜಾರೆ ಇವರು ‘ಅಮೃತ ಕಾಲ' ಎನ್ನುವ ಬಹಳ ಸೊಗಸಾದ, ಮಾಹಿತಿಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. 

    ರಾಹುಲ್ ಹಜಾರೆಯವರು ತಮ್ಮ ಮಾತಿನಲ್ಲಿ “ ಈ ಕಾಲ ಅಕ್ಷರಶಃ ‘ಅಮೃತ ಕಾಲ'.…

  • ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ ಯಾವುದೇ ಮುನ್ನುಡಿ, ಬೆನ್ನುಡಿ ಇಲ್ಲ. ನೇರವಾಗಿ ಬರಹಗಳನ್ನೇ ಪ್ರಕಟ ಮಾಡಿದ್ದಾರೆ. 

    ಮೊದಲ ಲೇಖನವೇ ‘ಜಾಗರ : ಇದು ಪ್ರತಿಸ್ಪಂದನೆಯ ಮೊಳಕೆ’ ಇದನ್ನು ಬರೆದಿದ್ದಾರೆ ಅಶ್ವಿನ್ ಲಾರೆನ್ಸ್ ಅವರು. ಅವರು ಈ ಲೇಖನದಲ್ಲಿ “ಸಾಹಿತ್ಯ ಎಂಬುದು ಸಾಮಾಜಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲದ ಪಾಂಡಿತ್ಯ ಪ್ರದರ್ಶನ ಹಾಗೂ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಜನರನ್ನು ತಲುಪಿ ಪ್ರಚಲಿತದ ಅವರ ನೋವುಗಳನ್ನು…

  • ‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದಾಗ ಮನು ಮತ್ತು ಮೀನು, ಅಕ್ಬರ್-ಬೀರಬಲ್, ತೆನಾಲಿರಾಮ, ಪಂಡಿತ ತಾರಾನಾಥ, ಪುಣ್ಯಕೋಟಿ, ಈ ರೀತಿಯ ಹಲವು ಸ್ವಾರಸ್ಯಕರ ಕಥೆಗಳ ಹೆಸರು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುತ್ತಿದ್ದ ಛಾಯಾಚಿತ್ರಗಳಿಗೆ ಹೆಚ್ಚು ಆಕರ್ಷಿತನಾಗುತ್ತಿದ್ದರಿಂದ ಶಿಕ್ಷಕರು ಹೇಳಿಕೊಡುವ ಮುನ್ನವೇ ಈ ಎಲ್ಲಾ ಕಥೆಗಳನ್ನು ಓದಿ ಮುಗಿಸಿಬಿಟ್ಟಿರುತ್ತಿದ್ದೆ ಎನ್ನುವುದಕ್ಕಿಂತ ಕಲ್ಪಿಸಿಕೊಂಡು ನೋಡುವುದಕ್ಕೆ ಶುರುಮಾಡಿದೆ.…

  • ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-ಸಹನೀಯ ನುಡಿಗಳು ಮಡುಗಟ್ಟಿವೆ. ಈ ಕೃತಿಯಲ್ಲಿ ಆತ್ಮಚರಿತ್ರೆ, ಕಥನ, ಕಾವ್ಯ, ಮೌಖಿಕ ನುಡಿಗಾರಿಕೆ ವ್ಯಕ್ತಿಚಿತ್ರ, ಹೀಗೆ ಎಲ್ಲ ಅಂಶಗಳೂ ಗಟ್ಟಿಮೇಳದಂತೆ ಮೇಳೈಸಿ ತಮ್ಮದೇ…

  • ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.

    ಯಾವುದೇ ಸಮಾಜದಲ್ಲಿ ವ್ಯಕ್ತಿಗಳ ನೀತಿ-ನಡತೆಯು ಆ ಸಮಾಜದ ಸಹಜೀವನ, ಶಾಂತಿ ಹಾಗೂ ನೆಮ್ಮದಿಗೆ ಕಾರಣವಾಗುತ್ತದೆ. ಇವುಗಳನ್ನು ಬಾಲ್ಯದಲ್ಲಿಯೇ ರೂಪಿಸುವುದು ಬಹಳ ಅಗತ್ಯ ಮತ್ತು ಇದು ನಿರಂತರವಾಗಿ ನಡೆಯಬೇಕಾದ ಕಾಯಕ. 1950-60ರ ದಶಕದ ವರೆಗೆ ನಮ್ಮ ದೇಶದ ಶೇಕಡಾ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದರು. ಅಲ್ಲೆಲ್ಲ ಕೂಡುಕುಟುಂಬಗಳಲ್ಲಿ ಜನರ ಬದುಕು. ಆ ಕುಟುಂಬಗಳ ಅಜ್ಜ-ಅಜ್ಜಿಯರು, ಹಿರಿಯರು ಮಕ್ಕಳಿಗೆ ದಿನದಿನವೂ ಕತೆಗಳನ್ನು ಹೇಳುತ್ತಿದ್ದರು:…

  • ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಸಾಹಿತಿ, ಕವಿ ಆಗಿರುವ ಡಾ. ಸುರೇಶ ನೆಗಳಗುಳಿ ಅವರು ಬರೆದ ಮುಕ್ತಕಗಳ ಸಂಕಲನ ‘ಧೀರತಮ್ಮನ ಕಬ್ಬ'. ಇದು ಮೂರನೇ ಸಂಪುಟ. ನೆಗಳಗುಳಿ ಅವರ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ. ಅದರಲ್ಲಿ “ಡಾ. ಸುರೇಶ ನೆಗಳಗುಳಿ ಅವರ ಮುಕ್ತಕಗಳು ಡಿ.ವಿ.ಜಿ.ಯವರನ್ನು ಹೋಲುವ ನೀತಿಬೋಧಕ ರಚನೆಗಳಾಗಿವೆ. ‘ಧೀರತಮ್ಮ'ನನ್ನು ಉದ್ದೇಶಿಸಿ ಹೇಳುವ ವಿನ್ಯಾಸದಲ್ಲಿ ರಚನೆಯಾಗಿರುವ ಮುಕ್ತಕಗಳಲ್ಲಿ ಬದುಕಿನ ಬಹು ಮಗ್ಗುಲಿನ ಅಪಾರ ಅನುಭವಗಳನ್ನು ಕಾಣಬಹುದು. ಗಳಿಸಿದ ಅನುಭವಗಳ ಬಗ್ಗೆ ಹೃದಯದಿಂದ ಚಿಂತಿಸಿ ಭಾವಪೋಷಕರಾಗಿ ಬರೆಯಲ್ಪಟ್ಟಿರುವ ಈ ಮುಕ್ತಕಗಳು ಅದಮ್ಯ ಜೀವನೋತ್ಸಾಹ ಮತ್ತು ಜೀವಪ್ರೀತಿಯಿಂದ ಓದುಗರನ್ನು ಸೆಳೆದು ಮುದ ನೀಡುವ ಓದಿನ…

  • ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ. ಇಂದು ನಾಡಿನಾದ್ಯಂತ ಕನ್ನಡ ನಾಡಿನ ಲೇಖಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇಲ್ಲಿ ಇವರು ಬರೆದಿರುವ ಆಧುನಿಕ ವಚನ ಜನರ ಜೀವನದ ವಿವಿಧ ಸ್ತರಗಳನ್ನು ಪರಿಚಯಿಸುತ್ತದೆ. ಆ ಮೂಲಕ ತಿಳುವಳಿಕೆಯ ಪಾಠವನ್ನು ಜನರಿಗೆ ನೀಡಿದ್ದಾರೆ. ವೈವಿಧ್ಯಮಯವಾದ ಆಧುನಿಕ ವಚನ ಸಂಕಲನವನ್ನು ನಾಡಿನ ಜನ ಪಡೆದು ಓದಿ ಅದರಲ್ಲಿನ ಜ್ಞಾನವನ್ನು…

  • 'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ ಇನ್ನೊಂದು ಲೋಕವನ್ನು ಸೃಷ್ಟಿಸುತ್ತಾನೆ. ಇಲ್ಲ ಕವಿತೆಯೆಂಬುದು ಕವಿಯ ಇಹ-ಪರಗಳನ್ನು ತೆರೆದಿಡುವ ಲೋಕ. ಹೀಗಾಗಿಯೇ ಬರೆಯುವ ಸಂದರ್ಭದಲ್ಲಿ ಕವಿಗೂ, ಕವಿತೆಗೂ ಕಾಲದೇಶಗಳ ಚೌಕಟ್ಟಿರುತ್ತದೆ. ನಿಜವಾದ ಕವಿತೆ ಈ…