ಪುಸ್ತಕ ಸಂಪದ

  • ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು. ಈ ಕಾರಣದಿಂದಲೇ ಅವರ ಕೃತಿಗಳನ್ನು ಓದುವಾಗ ನಮಗೆ ಖುದ್ದು ಆ ಜಾಗಗಳಲ್ಲಿ ಓಡಾಡಿದ ಅನುಭವವಾಗುತ್ತದೆ. ಘಟನೆಗಳು ನಮ್ಮ ನಡುವೆಯೇ ನಡೆದಂತಾಗುತ್ತದೆ. ಇದು ಮೆಹೆಂದಳೆ ಅವರ ಬರವಣಿಗೆಯ ಶಕ್ತಿ.

    ಉಗ್ರಗಾಮಿಗಳ ಬಗ್ಗೆ, ಉಗ್ರವಾದದ ಬಗ್ಗೆ ಮೆಹೆಂದಳೆಯವರು ‘ಅಬೋಟ್ಟಾಬಾದ್'…

  • ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ. ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ ಪ್ರೀತಿಯ ಹಂಬಲದಿಂದ ಹುಟ್ಟಿದ ಕವಿತೆಗಳಂತೆ ಕಂಡರೂ ಆ ಸೀಮಿತ ನೆಲೆಗೆ ನಿಲ್ಲದೆ ವಿಶ್ವಪ್ರೀತಿಯ ನೆಲೆಗೆ ವಿಸ್ತಾರಗೊಳ್ಳುವುದು ಇಲ್ಲಿನ ಕವಿತೆಗಳ ವಿಶೇಷ. ಕವಿಗೆ ಪ್ರೀತಿ ಎಂದರೆ 'ಬೆಳಕು'. ಆ ಬೆಳಕಿನ ಹುಡುಕಾಟ,…

  • ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ ಪತ್ರಿಕೆಯ ಸಂಪಾದಕರೂ, ಗಿರೀಶ್ ತಾಳಿಕಟ್ಟೆ ಅವರ ‘ಬಾಸ್’ ಆಗಿರುವ ನಿವೃತ್ತ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ ಅವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ. ನಮ್ಮ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ “ ಪತ್ರಕರ್ತ ಗಿರೀಶ್ ತಾಳಿಕಟ್ಟೆಯವರು ಆರಕ್ಷಕ ಲಹರಿ ಮಾಸಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಪೋಲೀಸ್ ಫೈಲ್ಸ್' ಎಂಬ ಅಂಕಣದ ಬರಹಗಳು ಈಗ ಕೃತಿಯ ರೂಪ ಪಡೆದು ಓದುಗರ ಕೈಸೇರುತ್ತಿರುವುದು ಖುಷಿಯ ವಿಚಾರ. ಬೇರೆ ಬೇರೆ ಕಾಲಘಟ್ಟದಲ್ಲಿ, ಜಗತ್ತಿನ ಬೇರೆ ಬೇರೆ…

  • ಪ್ರತಿಯೊಂದು ಪುಸ್ತಕಕ್ಕೆ ‘ಮುನ್ನುಡಿ' ಇರಬೇಕು ಎನ್ನುವುದು ಅಘೋಷಿತ ನಿಯಮ. ಆದರೆ ಈ ಮುನ್ನುಡಿಗಳನ್ನೇ ಸಂಗ್ರಹ ಮಾಡಿ ಅದರದ್ದೇ ಆದ ಒಂದು ಸಂಕಲನ ಮಾಡಬಹುದು ಎನ್ನುವ ದಿವ್ಯ ಯೋಚನೆ ಹೊಳೆದದ್ದು ಸಾಹಿತಿ ಎಂ ಎಸ್ ಆಶಾದೇವಿಯವರಿಗೆ. ಮುನ್ನುಡಿ ಬರೆಯುವುದೇ ಒಂದು ಕಲೆ. ಮುನ್ನುಡಿ ಬರೆಯುವ ಒಂದು ಅಪರೂಪದ ಸಾಹಿತಿಗಳ ವರ್ಗವೇ ಇದೆ. ಅವರ ಮುನ್ನುಡಿ ಓದಿದರೆ ಪುಸ್ತಕವನ್ನು ಕೂಡಲೇ ಓದಿ ಮುಗಿಸಬೇಕೆಂಬ ಹೆಬ್ಬಯಕೆ ಆಗುತ್ತದೆ. ಹಾಗಿರುತ್ತದೆ ಅವರ ಮುನ್ನುಡಿಯ ಪ್ರಭಾವ. ಅಂತಹ ಲೇಖಕರಲ್ಲಿ ಆಶಾ ದೇವಿಯವರೂ ಒಬ್ಬರು. ಅವರು ತಾವು ಬರೆದ ಹಲವಾರು ಮುನ್ನುಡಿಗಳನ್ನು ಸಂಗ್ರಹ ಮಾಡಿ ಮತ್ತೆ ಅದಕ್ಕೊಂದು ‘ಮುನ್ನುಡಿ' ಬರೆದಿದ್ದಾರೆ. ಅವರು ತಮ್ಮ ‘ಪ್ರಸ್ತಾವನೆ'ಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ... 

  • ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು ವಿಶೇಷವಲ್ಲವೇ.. ಎಂದು. ಐತಿಚಂಡ ರಮೇಶ್ ಉತ್ತಪ್ಪ ಒಬ್ಬ ವಿಸ್ಮಯ ಬರಹಗಾರ. ಅವರು ಪ್ರಾಣಿಗಳನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರನ್ನೂ ನೋಡಲಿಲ್ಲ. ಒಂದು ಆನೆಯ ಅಥವಾ ಯಾವುದೇ ಪ್ರಾಣಿಯನ್ನು ಗಮನಿಸಿ ಅದರ ಸ್ವಭಾವವನ್ನು…

  • ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ ವಾಗ್ಮಿಯಾಗಿರುವ ಇವರು ಸಾಹಿತ್ಯದಲ್ಲೂ ಕೃಷಿ ಮಾಡಿ ಸಮರ್ಥರು ಎನಿಸಿಕೊಂಡಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಬರೆಯಬಲ್ಲ ಈಕೆ ಸ್ವಪ್ನ ಸುಂದರಿ ಕವನ ಸಂಕಲನದ ಮೂಲಕ ಕೃತಿಕಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸಂತಸದ ವಿಚಾರ. ಬಹಳಷ್ಟು ವರ್ಷಗಳಿಂದ ಬರೆಯುತ್ತಿದ್ದರೂ 2023 ರಲ್ಲಷ್ಟೇ ಇವರ ಚೊಚ್ಚಲ ಕೃತಿ ಪ್ರಕಟಗೊಂಡಿದ್ದು ತಡವಾದರೂ ಸಾಹಿತ್ಯ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸಿತು. ಇವರ ಪತಿ ಶ್ರೀ ಕೃಷ್ಣ ಭಟ್ ರವರು ಕೂಡಾ ರಾಜ್ಯ…

  • ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ. ಭಾರತ ಯಾವೆಲ್ಲಾ ವಿಷಯಗಳಲ್ಲಿ ಬದಲಾಗಿ, ವಿಶ್ವದ ಭೂಪಟದಲ್ಲಿ ತನ್ನದೇ ಆದ ಉನ್ನತ ಸ್ಥಾನವನ್ನು ಹೇಗೆ ಅಲಂಕರಿಸಿದೆ ಎನ್ನುವುದನ್ನು ತಿಳಿಸಲು ಯೂಟ್ಯೂಬರ್ ಹಾಗೂ ಉದಯೋನ್ಮುಖ ಲೇಖಕರಾದ ರಾಹುಲ್ ಅಶೋಕ್ ಹಜಾರೆ ಇವರು ‘ಅಮೃತ ಕಾಲ' ಎನ್ನುವ ಬಹಳ ಸೊಗಸಾದ, ಮಾಹಿತಿಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. 

    ರಾಹುಲ್ ಹಜಾರೆಯವರು ತಮ್ಮ ಮಾತಿನಲ್ಲಿ “ ಈ ಕಾಲ ಅಕ್ಷರಶಃ ‘ಅಮೃತ ಕಾಲ'.…

  • ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ ಯಾವುದೇ ಮುನ್ನುಡಿ, ಬೆನ್ನುಡಿ ಇಲ್ಲ. ನೇರವಾಗಿ ಬರಹಗಳನ್ನೇ ಪ್ರಕಟ ಮಾಡಿದ್ದಾರೆ. 

    ಮೊದಲ ಲೇಖನವೇ ‘ಜಾಗರ : ಇದು ಪ್ರತಿಸ್ಪಂದನೆಯ ಮೊಳಕೆ’ ಇದನ್ನು ಬರೆದಿದ್ದಾರೆ ಅಶ್ವಿನ್ ಲಾರೆನ್ಸ್ ಅವರು. ಅವರು ಈ ಲೇಖನದಲ್ಲಿ “ಸಾಹಿತ್ಯ ಎಂಬುದು ಸಾಮಾಜಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲದ ಪಾಂಡಿತ್ಯ ಪ್ರದರ್ಶನ ಹಾಗೂ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಜನರನ್ನು ತಲುಪಿ ಪ್ರಚಲಿತದ ಅವರ ನೋವುಗಳನ್ನು…

  • ‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದಾಗ ಮನು ಮತ್ತು ಮೀನು, ಅಕ್ಬರ್-ಬೀರಬಲ್, ತೆನಾಲಿರಾಮ, ಪಂಡಿತ ತಾರಾನಾಥ, ಪುಣ್ಯಕೋಟಿ, ಈ ರೀತಿಯ ಹಲವು ಸ್ವಾರಸ್ಯಕರ ಕಥೆಗಳ ಹೆಸರು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುತ್ತಿದ್ದ ಛಾಯಾಚಿತ್ರಗಳಿಗೆ ಹೆಚ್ಚು ಆಕರ್ಷಿತನಾಗುತ್ತಿದ್ದರಿಂದ ಶಿಕ್ಷಕರು ಹೇಳಿಕೊಡುವ ಮುನ್ನವೇ ಈ ಎಲ್ಲಾ ಕಥೆಗಳನ್ನು ಓದಿ ಮುಗಿಸಿಬಿಟ್ಟಿರುತ್ತಿದ್ದೆ ಎನ್ನುವುದಕ್ಕಿಂತ ಕಲ್ಪಿಸಿಕೊಂಡು ನೋಡುವುದಕ್ಕೆ ಶುರುಮಾಡಿದೆ.…

  • ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-ಸಹನೀಯ ನುಡಿಗಳು ಮಡುಗಟ್ಟಿವೆ. ಈ ಕೃತಿಯಲ್ಲಿ ಆತ್ಮಚರಿತ್ರೆ, ಕಥನ, ಕಾವ್ಯ, ಮೌಖಿಕ ನುಡಿಗಾರಿಕೆ ವ್ಯಕ್ತಿಚಿತ್ರ, ಹೀಗೆ ಎಲ್ಲ ಅಂಶಗಳೂ ಗಟ್ಟಿಮೇಳದಂತೆ ಮೇಳೈಸಿ ತಮ್ಮದೇ…