ಈಗಿನಂತೆ 2 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಭಾಷೆ ಮತ್ತು ಬರೆವಣಿಗೆ
ಮಹೇಶ ಭೋಗಾದಿ's picture
21
Mar
2006
ಪುಟ
ಭಾಷೆಯೆಂದರೇನೆಂದು ಯಾರನ್ನಾದರು ಕೇಳಿ, ಅವರು ತಮ್ಮ ತಮ್ಮ ವಿಚಾರ-ಧಾರೆಗನುಗುಣವಾಗಿ ಉತ್ತರಿಸುವರು. ಈ ಪ್ರಶ್ನೆಗೆ ಕೆಳಗಿನವಂತೆ ಕೆಲವುತ್ತರಗಳು ಸಾಮಾನ್ಯವಾಗಿ ದೊರೆಯುವುವು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,356
ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?
harshavardhan v.sheelavant's picture
harshavardhan v. sheelavant
31
May
2010
ಪುಟ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,103
ಅದು ಪಾದದೆಚ್ಚರ, ಇದು ಪದದೆಚ್ಚರ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
29
Dec
2009
ಪುಟ

  ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,185
’ಸಂಪದ’-ಸಂಕಲ್ಪ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
29
Jan
2010
ಪುಟ

’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,108
ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು
palachandra's picture
ಪಾಲಚಂದ್ರ
14
Dec
2011
ಬ್ಲಾಗ್ ಬರಹ

 ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

...
ಪ್ರತಿಕ್ರಿಯೆಗಳು: 10
ಹಿಟ್ಸ್ : 203
ಜ್ಞಾನದೇವ ಮತ್ತು ಆಳಂದಿ
Rohit's picture
ರೋಹಿತ್ ರಾಮಚಂದ್ರಯ್ಯ
12
Jun
2006
ಬ್ಲಾಗ್ ಬರಹ
ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ...
ಪ್ರತಿಕ್ರಿಯೆಗಳು: 3
ಹಿಟ್ಸ್ : 2,332
ಭ್ರಷ್ಟಾಚಾರವೂ.. ನಾವೂ..
avikamath77's picture
ಅವಿನಾಶ್ ಕಾಮತ್
20
Apr
2011
ಬ್ಲಾಗ್ ಬರಹ

ಮೊನ್ನೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಲೋಕಪಾಲ್ ಬಿಲ್ ಗಾಗಿ ಆಮರಣ ಉಪವಾಸದ ಸತ್ಯಾಗ್ರಹ ಕೈಗೊಂಡರು. ಇಡೀ ದೇಶ ಅವರ ಸಮರ್ಥನೆಗೆ ನಿಂತುಕೊಂಡಿತು....

ಪ್ರತಿಕ್ರಿಯೆಗಳು: 13
ಹಿಟ್ಸ್ : 1,066
ಕಲಾಲೋಕದಲ್ಲಿ ಕಳೆದ ಕಾಲ...
vinutha.mv's picture
ವಿನುತ ಎಮ್.ವಿ.
02
Feb
2010
ಬ್ಲಾಗ್ ಬರಹ

"ಯಾರ್ರೀ ಶಿವಾನಂದ (?!) ಇಲ್ಲೇ ಇಳೀರಿ, ಮುಂದಕ್ಕೆ ಹೋಗಲ್ಲ, ಬ್ಲಾಕ್ ಮಾಡಿದಾರೆ" ಕಂಡಕ್ಟರ್ ಕೂಗಿದಾಗ ದಡಬಡನೆ ಇಳಿದೆ! ರಸ್ತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,102
ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ
anilkumar's picture
ಎಚ್.ಎ. ಅನಿಲ್ ಕುಮಾರ್
13
Jul
2011
ಲೇಖನ

 (೪)

 
ಸ್ಥಿರಚಿತ್ರಣ ಅಥವ ಸ್ಟಿಲ್...
ಪ್ರತಿಕ್ರಿಯೆಗಳು: 1
ಹಿಟ್ಸ್ : 298
ಚಿತ್ರರಚನೆಯು ತರ್ಕವೆಂಬ ನಂಬಿಕೆ ರೂಪದ ತರ್ಕದೊಳಗಿನ ನಂಬಿಕೆಯೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯
anilkumar's picture
ಎಚ್.ಎ. ಅನಿಲ್ ಕುಮಾರ್
24
Jun
2010
ಪುಟ

(೫೮)

     "ಚಿತ್ರಕಲೆ ಕಲಿಸುವುದೆಂದರೆ...

ಪ್ರತಿಕ್ರಿಯೆಗಳು: 1
ಹಿಟ್ಸ್ : 851

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಅಂದಿನ ಆಂಧ್ರ

ಅಂದಿನ ಆಂಧ್ರ

ಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ, ಗುಂಟೂರಿನತ್ತ ಸಾಗಿದ್ದೆ.

ಸುಮಾರು ಸಾವಿರ ಕಿಲೋಮೀಟರ್ ದೂರದ ಗುಂಟೂರನ್ನು ಅಪರಾಹ್ನ ತಲಪಿದಾಗ ಗೆಳೆಯ ನೆಟ್ಟಾರ್ ಎದುರಾದರು. ಅವರ ಜೊತೆ ದಕ್ಷಿಣ ಕನ್ನಡದವರ ಹೋಟೆಲಿಗೆ ಹೋಗಿ, ಬಿಸಿಬಿಸಿ ಇಡ್ಲಿ ತರಿಸಿದೆ - ಜೊತೆಯಲ್ಲೇ ಸಾಸರ್ ತುಂಬಾ ಚಟ್ನಿ. ತಕ್ಷಣವೇ ಬಕೆಟ್‍ನಲ್ಲಿ ಸಾಂಬಾರು ತಂದ ಸರ್ವರ್ "ಸಾಂಬಾರ್, ಸಾಂಬಾರ್" ಎನ್ನುತ್ತಾ ಬಕೆಟಿಗೆ ಸೌಟು ಬಡಿದು ಸದ್ದು ಮಾಡಿದ. "ಇದೇನು?" ಎಂದು ನೆಟ್ಟಾರರನ್ನು ಕೇಳಿದೆ. ಕೂಡಲೇ ಆ ಸರ್ವರ್ 'ಓ, ನೀವು ಮಂಗಳೂರಿನವರಾ" ಅಂತಂದು ನಗುತ್ತಾ ಅತ್ತ ಹೋದ. "ಇಲ್ಲಿನ ಕ್ರಮ ಹೀಗೆ. ಒಂದು ಇಡ್ಲಿ ತಿನ್ನಲು ಇಲ್ಲಿನವರಿಗೆ ಒಂದು ಸಾಸರ್ ಚಟ್ನಿ ಮತ್ತು ನಾಲ್ಕು ಸೌಟು ಸಾಂಬಾರ್ ಬೇಕಾಗುತ್ತದೆ" ಎಂದು ನೆಟ್ಟಾರರಿಂದ ವಿವರಣೆ. ಚಟ್ನಿಯಲ್ಲಿ ಇಡ್ಲಿ ಅದ್ದಿ ಬಾಯಿಗಿಟ್ಟೆ. ಬಾಯೊಳಗೆ ಬೆಂಕಿಯಿಟ್ಟಾಂತಾಯಿತು; ಉರಿ ತಡೆಯಲಾಗದೆ "ಹೋ" ಎಂದೆ. "ಮಾರಾಯರೇ, ಹೇಳಲು ಮರೆತೇ ಹೋಯ್ತು.  ಇಲ್ಲಿನ ಚಟ್ನಿ ಉರಿ ಖಾರ, ಹಾಗೆಲ್ಲಾ ತಿನ್ನಬೇಡಿ" ಎಂದು ಎಚ್ಚರಿಸಿದರು ನೆಟ್ಟಾರ್. ಎರಡು ಲೋಟ ನೀರು ಕುಡಿದರೂ ತಗ್ಗದ ಉರಿ. ಅನ್ನನಾಳಕ್ಕೇ ಕಿಚ್ಚಿಟ್ಟ ಅನುಭವ. "ಮಜ್ಜಿಗೆ, ಮಜ್ಜಿಗೆ" ಎಂದು ಕೂಗಿ ನೆಟ್ಟಾರ್ ಮಜ್ಜಿಗೆ ತರಿಸಿದರು. ಐಸ್ ಹಾಕಿದ್ದ ಮಂದ ಮಜ್ಜಿಗೆ. ನಿಧಾನವಾಗಿ ಹೀರಿದೆ. ರುಚಿಯಾಗಿತ್ತು. ಇನ್ನೊಂದು ಗ್ಲಾಸ್ ಮಜ್ಜಿಗೆ ತರಿಸಿ ಸವಿದೆ. ಮರುದಿನದಿಂದ ಪ್ರತಿದಿನವೂ ಬೆಳಿಗ್ಗೆ ಇಡ್ಲಿ ಜೊತೆ ಎರಡು ಗ್ಲಾಸ್ ಮಜ್ಜಿಗೆ ಕುಡಿಯತೊಡಗಿದೆ. ಗುಂಟೂರಿನ ಚಟ್ನಿಯ ಸಹವಾಸ ಅಂದಿಗೇ ಬಿಟ್ಟುಬಿಟ್ಟೆ. ಮೊದಲ ದಿನ ಸಂಜೆ ಪೇಟೆ ಸುತ್ತಾಡಿ, ಅನಂತರ ಊಟಕ್ಕೆ ಹೋಟೆಲಿಗೆ ಹೋದೆವು. ಗಲ್ಲಾದಲ್ಲಿ ಕೂತಿದ್ದ ಮಾಲೀಕರ ಪರಿಚಯ ಮಾಡಿಸಿದರು ನೆಟ್ಟಾರ್. ಅಲ್ಲಿ ಮಜ್ಜಿಗೆಯಲ್ಲೇ ಅನ್ನ ಉಣ್ಣಬೇಕೆಂದೂ, ಬೇಕಾದಷ್ಟು ಮಜ್ಜಿಗೆ ಪಡೆಯಲು ಈ ಪರಿಚಯ ಅವಶ್ಯವೆಂದೂ ತಿಳಿಸಿದರು. ಊಟದ ಬಟ್ಟಲು ಬಂದಾಗ ತೊವ್ವೆ, ಚಟ್ನಿ, ಪಲ್ಯ, ಸಾಂಬಾರ್ ಎಲ್ಲವೂ ಪ್ರಚಂಡ ಖಾರ ಎಂದು ಎಚ್ಚರಿಸಿದರು. ನಾಲ್ಕು ದಿನಗಳ ಬಳಿಕವೇ ನಾನು ಅವನ್ನೆಲ್ಲ ನಾಲಿಗೆಯ ತುದಿಗೆ ತಗಲಿಸಿ ಖಾರದ ಅಂದಾಜು ಮಾಡುವ ಧೈರ್ಯ ಮಾಡಿದೆ. ಊಟದ ಮೇಜಿನಲ್ಲಿ ಎರಡು ಗಾಜಿನ ತಟ್ಟೆಗಳಿದ್ದವು. ಒಂದರಲ್ಲಿ ಕೆಂಪು ಅಂಟು ಪದಾರ್ಥ. ಇನ್ನೊಂದರಲ್ಲಿ ನಸು ಕಂದು ಬಣ್ಣದ ಪುಡಿ. ಅವೆರಡೂ ನಮಗೆ "ನಿಷಿದ್ಧ" ಎಂದರು ನೆಟ್ಟಾರ್. ನನ್ನ ಪ್ರಶ್ನಾರ್ಥಕ ನೋಟ ನೋಡಿ, ಅವು ಮೆಣಸು ಚಟ್ನಿ ಮತ್ತು ಖಾರದ ಪುಡಿ ಎಂದು ತಿಳಿಸಿದರು. ತಟ್ಟೆಯಲ್ಲಿದ್ದ ಅನ್ನವನ್ನೆಲ್ಲ ಮಜ್ಜಿಗೆಯಲ್ಲೇ ಕಲಸಿ ಊಟ ಮುಗಿಸಿದ್ದಾಯಿತು.
ಮಂಗಳೂರಿನಿಂದ ಹೊರಡುವ ಮುನ್ನ ನಮ್ಮ ಆಫೀಸಿನಲ್ಲಿದ್ದ ಆಂಧ್ರದ ಗೆಳೆಯರೊಂದಿಗೆ ಕೇಳಿದ್ದೆ, "ಗುಂಟೂರು ಹೇಗಿದೆ?" ಅಲ್ಲಿನ ಬಿಸಿಲಿನ ಬಗ್ಗೆ ಅವರಿತ್ತ ಎಚ್ಚರಿಕೆ, "ಅಲ್ಲಿ ಬಿಸಿಲಿನ ಝಳಕ್ಕೆ ಪ್ರತಿ ವರುಷವೂ ಬಹಳ ಜನ ಸಾಯ್ತಾರೆ. ನೀವಂತೂ ಅಲ್ಲಿ ಬಿಸಿಲಿನಲ್ಲಿ ಅಡ್ಡಾಡಲೇ ಬಾರದು."

ಗುಂಟೂರಿಗೆ ಹೋದ ದಿನವೇ ನನಗೆ ಅವರ ಮಾತಿನ ಬಿಸಿ ತಗಲಿತ್ತು - ಅಲ್ಲಿನ ಸೆಕೆಯಿಂದಾಗಿ. ಅಲ್ಲಿ ಬೇಸಿಗೆಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಬಿಸಿಲ ಧಗೆಯಿಂದಾಗಿ ಹೊರಹೋಗುವುದೇ ಕಷ್ಟ. ಆ ಅವಧಿಯಲ್ಲಿ ಗುಂಟೂರಿನ ಮಾರುಕಟ್ಟೆಯಲ್ಲಿ, ಅಂಗಡಿಗಳಲ್ಲಿ ಗ್ರಾಹಕರು ವಿರಳ. ಅದರಿಂದಾಗಿ ಕೆಲವು ವ್ಯಾಪಾರಿಗಳಂತೂ ಆ ಅವಧಿಯಲ್ಲಿ ತಮ್ಮ ಅಂಗಡಿಗಳನ್ನು ತೆರೆಯುತ್ತಲೇ ಇರಲಿಲ್ಲ. ಆಫೀಸಿಗೆ ಹೋಗುವವರು ಬೆಳಿಗ್ಗೆ ೧೦ ಗಂಟೆಗೆ ಊಟ ಮಾಡಿ, ಕೆಲಸಕ್ಕೆ ಹಾಜರಾಗುತ್ತಿದ್ದರು. ಅಲ್ಲಿನ ಹೋಟೆಲುಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದಲೇ ಊಟ ಲಭ್ಯವಿರುತ್ತಿತ್ತು. ಆಫೀಸಿನಲ್ಲಿ ಅಥವಾ ಮನೆಯಲ್ಲಿ ಕುಳಿತಿದ್ದರೆ ಹೊತ್ತೇರಿದಂತೆಯೇ ನಮ್ಮ ಉಡುಪು ಬಿಸಿಯೇರುವುದು ನಮ್ಮ ಗಮನಕ್ಕೆ ಬರುತ್ತಿತ್ತು.
ಬೇಸಿಗೆಯಲ್ಲಿ ನಡುಮಧ್ಯಾಹ್ನದಿಂದ ಅಪರಾಹ್ನ ೨ ಗಂಟೆಯ ವರೆಗೆ ನಮ್ಮನ್ನು ಹಬೆಯಲ್ಲಿ ಹಾಕಿದಂತಿರುತ್ತಿತ್ತು. ಆ ಹೊತ್ತಿನಲ್ಲಿ ಪರವೂರಿನವರು ಗುಂಟೂರಿನಲ್ಲಿ ಬಿಸಿಲಿನಲ್ಲಿ ಅರ್ಧ ತಾಸು ನಡೆದಾಡಿದರೆ ಬಿಸಿಲಿನ ತಾಪದಿಂದ ಮೂರ್ಚೆ ತಪ್ಪಿ ಬಿದ್ದಾರು. ಅದಕ್ಕಾಗಿ ಬಿಸಿಲಿನಲ್ಲಿ ಪ್ರಯಾಣ ಮಾಡುವುದಿದ್ದರೆ ಅಥವಾ ನಡೆಯುವುದಿದ್ದರೆ ತಲೆಗೆ ಟೊಪ್ಪಿ ಹಾಕಿಕೊಳ್ಳಲೇ ಬೇಕು. ಗಂಟೆಗೊಮ್ಮೆ ನಿಂಬೆಹಣ್ಣಿನ ಷರಬತ್ತು ಅಥವಾ ಉಪ್ಪು ಬೆರೆಸಿದ ಸೋಡಾ ಅಥವಾ ಹೂಜಿಯ ತಂಪು ನೀರು ಕುಡಿಯಲೇ ಬೇಕು. ಆಗಾಗ ತಣ್ಣೀರನ್ನು ಮುಖಕ್ಕೆ ಎರಚಿಕೊಳ್ಳುವುದು, ಊಟದಲ್ಲಿ ಮೊಸರಿಗೆ ಅರ್ಧ ಚಮಚ ಉಪ್ಪು ಬೆರೆಸಿ ತಿನ್ನುವುದು - ಇಂತಹ ಮುಂಜಾಗರೂಕತೆ ವಹಿಸದೆ ಸುಡು ಬಿಸಿಲಿಗೆ ಹೊರಬಂದರೆ ಬಿಸಿಲಿನ ಝಳಕ್ಕೆ (ಸನ್ ಸ್ಟ್ರೋಕ್‍ಗೆ) ಬಲಿಯಾಗಬೇಕಾದೀತು. ಸನ್‍ಸ್ಟ್ರೋಕ್ ಹೇಗಾಗುತ್ತದೆಂದು ಹೇಳುವಂತಿಲ್ಲ. ಬಿಸಿಲಿಗೆ ಬಸವಳಿದ ಶರೀರದ ಆಧಾರ ವ್ಯವಸ್ಥೆಗಳೆಲ್ಲವೂ ಒಂದೇಟಿಗೆ ಸೋತು, ವ್ಯಕ್ತಿ ಕುಸಿಯುತ್ತಾನೆ. ತಕ್ಷಣವೇ ದೇಹದ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸುವ ಚಿಕಿತ್ಸೆ ದೊರೆಯದಿದ್ದರೆ ಜೀವ ಉಳಿಸುವುದು ಕಷ್ಟಸಾಧ್ಯ. 

ಗುಂಟೂರು ದೊಡ್ಡ ವ್ಯಾಪಾರೀ ಕೇಂದ್ರ. ಅಲ್ಲಿ ಪ್ರತಿದಿನ ಕೈಬದಲಾಗುವ ಹಣದ ಮೊತ್ತ ಕೋಟಿಕೋಟಿ ರೂಪಾಯಿಗಳು. ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಮುಖ್ಯ ಬೆಳೆ.  ಗುಂಟೂರು- ವಿಜಯವಾಡ ರಸ್ತೆಯಲ್ಲಿ, ತಂಬಾಕು ಖರೀದಿಸಿ, ಪರಿಷ್ಕರಿಸಿ, ರಫ್ತು ಮಾಡುವ ಹಲವಾರು ಘಟಕಗಳಿವೆ. ಅಲ್ಲಿ ಕೃಷಿಗೆ ಪೂರಕವಾದ ಉದ್ದಿಮೆಗಳೂ ಇವೆ. ಪ್ರಮುಖವಾದದ್ದು ಕೀಟನಾಶಗಳ ಉತ್ಪಾದನೆ. ಆಗ ಗುಂಟೂರಿನ ಹೊರವಲಯದಲ್ಲಿದ್ದ ಇಂತಹ ಘಟಕಗಳ ಸಂಖ್ಯೆ ೬೦. ಗುಂಟೂರು ಪೇಟೆಯಲ್ಲಿ ಕೀಟನಾಶಕಗಳ ವ್ಯಾಪಾರದ್ದೇ ಬಿರುಸು. ಒಂದೇ ರಸ್ತೆಯಲ್ಲಿ ಎಣಿಸಿದಾಗ ಕೀಟನಾಶಕಗಳನ್ನು ಮಾರಾಟ ಮಾಡುವ ೪೨ ಅಂಗಡಿಗಳಿದ್ದವು.

ಅಗ್ರಹಾರಗಳು ಗುಂಟೂರಿನ ಜನನಿಬಿಡ ಪ್ರದೇಶಗಳು. ಅಗ್ರಹಾರಗಳಲ್ಲಿ ಅಗಲ ಕಿರಿದಾದ ರಸ್ತೆಗಳಿಂದ ಒಡೆದು ಹೋಗುವ ಹಲವು ಓಣಿಗಳು. ರಸ್ತೆಗಳ ಇಕ್ಕಡೆಗಳಲ್ಲಿ ಹಾಗೂ ಓಣೆಗಳಲ್ಲಿ ಅಲ್ಲಲ್ಲಿ ಕೊಳೆತು ನಾರುವ ಕಸಕಡ್ಡಿ. ಕೊಚ್ಚೆ ತುಂಬಿದ ಚರಂಡಿಗಳಲ್ಲಿ ಅಲ್ಲಲ್ಲಿ ನಿಂತು ನಾರುವ ನೀರು. ಅಲ್ಲಿನವರಿಗೆ ಇವೆಲ್ಲದರ ಗೊಡವೆಯೇ ಇಲ್ಲ. ರಸ್ತೆಯ ಬದಿಯಲ್ಲಿಟ್ಟು ಮಾರುವ ಇಡ್ಲಿ, ವಡೆ, ಸಿಹಿತಿಂಡಿಗಳು, ಹಣ್ಣುಗಳು - ಇವನ್ನೆಲ್ಲ ಖರೀದಿಸಿ, ಮುತ್ತಿರುವ ನೊಣಗಳನ್ನು ಜಾಡಿಸಿ, ಮೆಲ್ಲುತ್ತಿದ್ದರು. ಅಲ್ಲಿನ ಓಣಿಗಳಲ್ಲಿ ನಡೆಯುವುದೂ ಅಪಾಯ. ಒಂದೆಡೆ ಕೊಚ್ಚೆಗೆ ಕಾಲಿಟ್ಟು ಜಾರಿ ಬೀಳುವ ಅಪಾಯ, ಇನ್ನೊಂದೆಡೆ ಮಹಡಿಗಳ ಮೇಲಿನಿಂದ ಮಹಿಳೆಯರು ಕೆಳಗೆಸೆಯುವ ಬುಟ್ಟಿತುಂಬ ಕೊಳೆತ ಬಟಾಟೆ, ಕ್ಯಾಬೇಜ್ ಸಿಪ್ಪೆ ನಮ್ಮ ಮೈ ಮೇಲೆ ಬೀಳುವ ಅಪಾಯ.
ಗುಂಟೂರಿನವರ ಕೈಯಲ್ಲಿ ದುಡ್ಡು ಜೋರಾಗಿ ಓಡಾಡುತ್ತದೆ. ಚೆನ್ನಾಗಿ ಗಳಿಸುತ್ತಾರೆ, ಗಡದ್ದಾಗಿ ಖರ್ಚು ಮಾಡುತ್ತಾರೆ. ಮದುವೆಗೆ ಹಾಗೂ "ಪಾರ್ಟಿ"ಗಳಿಗೆ ಕೈಬಿಟ್ಟು ವೆಚ್ಚ ಮಾಡುತ್ತಾರೆ. ಸಣ್ಣಪುಟ್ಟ ಕಾರಣಗಳಿಗೂ ಪಾರ್ಟಿ ಕೇಳುತ್ತಾರೆ. ಸಂಗಡಿಗರ ಒತ್ತಾಯಕ್ಕೆ ಕಟ್ಟುಬಿದ್ದು ಪಾರ್ಟಿಯ ಹೆಸರಿನಲ್ಲಿ ದುಂದು ವೆಚ್ಚ ಮಾಡುವುದೇ ಅಲ್ಲಿನವರಿಗೊಂದು ಷೋಕಿ.

ಅಲ್ಲಿ ಹಲವು ಸಮಾರಂಭಗಳು ರಸ್ತೆಯಲ್ಲೇ ನಡೆಯುವುದನ್ನ್ಜು ಕಂಡೆ - ಮಗುವಿನ ನಾಮಕರಣ, ಹೆಣ್ಣು ಮೈನೆರೆತದ್ದು, ಮದುವೆ. ಇವೆಲ್ಲ ಸಂದರ್ಭಗಳಲ್ಲಿ ರಸ್ತೆಯಲ್ಲಿ ಷಾಮಿಯಾನ ಹಾಕಿ, ಕುರ್ಚಿಗಳನ್ನು ಜೋಡಿಸಿ, ರಸ್ತೆ ಬಂದ್ ಮಾಡುತ್ತಿದ್ದರು. ಆ ರಸ್ತೆಯಲ್ಲಿ ಹಾದು ಹೋಗಬೇಕಾದವರಲ್ಲರೂ, ವಾಹನಗಳನ್ನು ಹಿಂದಕ್ಕೆ ತಿರುಗಿಸಿ, ಬೇರೆ ರಸ್ತೆಯಲ್ಲಿ ಸಾಗುತ್ತಿದ್ದರು.
ಈಗ, ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂಬ ಹೋರಾಟ ಬಿರುಸಿನಿಂದ ಸಾಗುತ್ತಿರುವಾಗ, ಇಪ್ಪತ್ತು ವರುಷಗಳ ಮುಂಚೆ ಅಲ್ಲಿ ಹತ್ತು ದಿನಗಳನ್ನು ಕಳೆದದ್ದು ನೆನಪಾಯಿತು. 

ಚಿತ್ರಃ Gpics, ವಿಕಿಪೀಡಿಯ
 

Average: 5 (3 votes)
275 ಹಿಟ್ಸ್

ಪ್ರತಿಕ್ರಿಯೆಗಳು

makara's picture
31
Oct
2011
9:23

ಕೃಷ್ಣ ರಾವ್ ಅವರೆ,
ಗು0ಟೂರು ಸ್ವಲ್ಪ ಹೆಚ್ಚು ಕಡಿಮೆ ನೀವು ವರ್ಣಿಸಿದ ಹಾಗೆ ಈಗಲೂ ಹಾಗೆಯೇ ಇದೆ. ಆದರೆ ಖಾರದ ವಿಷಯದಲ್ಲಿ ಅದು ಸ್ವಲ್ಪ ಕಡಿಮೆಯಾಗಿದೆ, ಈಗ ಅಷ್ಟೊ0ದು ಖಾರವಿರುವುದಿಲ್ಲ. ಉಳಿದೆಲ್ಲಾ ವಿಷಯಗಳನ್ನು ನೀವು ಅಷ್ಟು ಕರಾರುವಾಕ್ಕಾಗಿ ದಾಖಲಿಸಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದೆ.

ಗಣೇಶ's picture
31
Oct
2011
10:42

ಶ್ರೀಧರ್ ಅವರೆ,
>>...ಈಗಲೂ ಹಾಗೆಯೇ ಇದೆ. ಆದರೆ ಖಾರದ ವಿಷಯದಲ್ಲಿ ಅದು ಸ್ವಲ್ಪ ಕಡಿಮೆಯಾಗಿದೆ, ...
-ಖಾರ ತಿಂದು ತಿಂದು ರೂಢಿಯಾಗಿರಬಹುದು. :)
ಕೃಷ್ಣ ರಾವ್ ಅವರೆ,
ಗುಂಟೂರು ಪರಿಚಯ ಲೇಖನ ಚೆನ್ನಾಗಿದೆ.
>>ಚಟ್ನಿಯಲ್ಲಿ ಇಡ್ಲಿ ಅದ್ದಿ ಬಾಯಿಗಿಟ್ಟೆ. ಬಾಯೊಳಗೆ ಬೆಂಕಿಯಿಟ್ಟಾಂತಾಯಿತು; ಉರಿ ತಡೆಯಲಾಗದೆ "ಹೋ" ಎಂದೆ...
-ಇಡ್ಲಿಯನ್ನು ತೆಂಗಿನಕಾಯಿ ಚಟ್ನಿಯಲ್ಲಿ ಅದ್ದಿ ತಿನ್ನುವ ಕರಾವಳಿ ಕನ್ನಡಿಗರಿಗೆ ಈ ಖಾರ ಚಟ್ನಿಗಳು ಸಹಿಸಲಸಾಧ್ಯ. ಅಳುತ್ತಾ ಇಡ್ಲಿ-ಚಟ್ನಿ ತಿನ್ನಬೇಕು :)
ಗುಂಟೂರು ಮೆಣಸು ಜಗತ್ ಪ್ರಸಿದ್ಧ. http://en.wikipedia.... ಉಪ್ಪಿನಕಾಯಿ ಮಾಡಲು ಈ ಮೆಣಸು ಉಪಯೋಗಿಸಿದರೆ ಕಲರ್ ಸೂಪರ್.ಖಾರನೂ ಜಾಸ್ತಿ.
-ಗಣೇಶ.

addoor's picture
02
Nov
2011
5:33

ಪ್ರಿಯ ಗಣೇಶ,
ಕೆಲವು ಅನುಭವಗಳು ನಮ್ಮ ನೆನಪಿನಲ್ಲಿ ಅಚ್ಚಳಿಯದ0ತೆ ದಾಖಲಾಗುತ್ತವೆ. ಗು0ಟೂರಿನ ಮೆಣಸು ಕೆ0ಪುಕೆ0ಪಾಗಿದ್ದರೂ ನೆನಪುಗಳು ಹಸುರುಹಸುರು.

addoor's picture
02
Nov
2011
5:30

ಪ್ರಿಯ ಶ್ರೀಧರ್,
ನಮ್ಮೆಲ್ಲರಲ್ಲೂ ಇದೆ, ನೆನಪಿನ ಖಜಾನೆ. ಅದನ್ನು ತೆರೆಯುವ ಕೀಲಿಕೈ ಹುಡುಕಿದರಾಯಿತು ‍ ‍_ ನೆನಪುಗಳ ಮೆರವಣಿಗೆ ಶುರು. ಎಲ್ಲ ಸ0ಪದಿಗರೂ ತಮ್ಮ ನೆನಪಿನ ಖಜಾನೆ ತೆರೆಯಲಿ.

csomsekraiah's picture
01
Nov
2011
9:19

ಆತ್ಮೀಯ ಅಡ್ಡೂರು ಕೃಷ್ಣರಾವ್ ಅವರೆ

ಗು0ಟೂರಿಗೆ ಹೋಗಲು ನೀವು ಮದ್ರಾಸಿಗೆ ಹೋಗಬೇಕಾದ ಅಗತ್ಯ ಇರಲಿಲ್ಲ , ಮ0ಗಳೂರಿನಿ0ದ ಹೇಗೂ ಬಳ್ಳಾರಿಗೆ ನೇರ ಬಸ್ ವ್ಯವಸ್ಥೆ ಇದೆ . ಬಳ್ಳಾರಿಯಿ0ದ ಗು0ಟೂರಿಗೆ ನೇರ ರೈಲು ಇದೆ .
ನಿಮ್ಮ ಹೋಟೆಲ್ ಊಟದ ಖಾರದ ಅನುಭವ ಓದಿ ನನಗೆ ನಗು ಬ0ತು , ಅಲ್ಲಿ ಒಳ್ಳೆಯ ಮೊಸರನ್ನ ಸಿಗುತ್ತದೆ. ಆ0ಧ್ರದ ಯಾವ ನಗರಕ್ಕೆ ಹೋದರೂ ನಮ್ಮ ಉಡುಪಿ ಹೋಟೆಲ್ ಸಿಗುತ್ತವೆ ಕನ್ನಡದವರೆ0ದರೆ ಅವರು ಅತೀ ಆತ್ಮೀಯರಾಗುತ್ತಾರೆ . ನಿಮ್ಮ ಊಟದ ಜೊತೆಗೆ ಆ0ಧ್ರದ ವಿಶೇಷ ಪಪ್ಪು ಸೇರಿಸಲು ಮರೆತಿದ್ದೀರಿ . ಅಲ್ಲಿನ ಬಿಸಿಲು ತಡೆಯಲು ಉತ್ತಮ ಉಪಾಯವೆ0ದರೆ ಹಗಲಿನಲ್ಲಿ ಮೂರು ನಾಲ್ಕು ಬಾರಿಯಾದರೂ ತಣ್ಣಿರು ಮೈಮೇಲೆ ಸುರಿದುಕೊಳ್ಳುವುದು 1970 ರಿ0ದ 2000ರದ ವರೆಗೆ ವರೆಗೆ ವ್ಯವಹಾರಕ್ಕಾಗಿ ವರ್ಷದಲ್ಲಿ ಎರಡು ತಿ0ಗಳಾದರೂ ‍‍ ‍_ಅದೂ ಬೇಸಗೆಯ ಕಾಲದಲ್ಲಿ _ ಆಧ್ರದ ನಗರಗಳಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ ನಾನು ಕ0ಡುಕೊ0ಡ ಉಪಾಯ ಇದು . ಗು0ಟೂರಿಗಿ0ತ ನ0ದ್ಯಾಲದ ಸೆಖೆ ನೀವು ಅನಿಭವಿಸಬೇಕು , ಅದು ವಿಶಿಷ್ಟ ಅನುಭವ , ನಾನು ಹೋಟೆಲ್ ರೂಮಿನಲ್ಲಿ ನೆಲದ ಮೇಲೆ ಎರಡು ಬಕೆಟ್ ನೀರು ಸುರಿದು ಅದರೆ ಮೇಲೆ ಮಲಗಿದ್ದೆ . ಬೆಳಗ್ಗೆ ಹೋಟೆಲ್ ಮಾಲೀಕರು ಬಿದ್ದು ಬಿದ್ದು ನಕ್ಕಿದ್ದರು . ಹೇಗೂ ನಿಮ್ಮಅನುಭವ ಹ‌0ಚಿಕೊ0ಡಿದ್ದಕ್ಕೆ ಧನ್ಯವಾದಗಳು

addoor's picture
02
Nov
2011
5:37

ಪ್ರಿಯ ಸೋಮಶೇಖರಯ್ಯ,
ಹೋಟೆಲು ಸೇವೆಯ ಮೂಲಕ ಆ0ಧ್ರದ ನಗರಗಳಲ್ಲಿ ನೆಲೆ ಕ0ಡಿರುವ ಉಡುಪಿಯವರು ಕನ್ನಡನಾಡಿನ ಎಲ್ಲರಲ್ಲೂ ಆತ್ಮೀಯಭಾವ ತೋರುತ್ತಾರೆ _ ಊಟತಿ0ಡಿಗಳ ಜೊತೆಗೆ ಒ೦ದಷ್ಟು ಮಜ್ಜಿಗೆ, ಮುಗುಳುನಗು ಮತ್ತು ಕನ್ನಡದ ಮಾತು ಮನಕ್ಕೂ ಹಿತ.

venkatb83's picture
02
Nov
2011
12:10

ಅ-ಕೃಷ್ಣರಾವ್ ಅವ್ರೆ
ಗುಂಟೂರು ಮೆಣಸಿನಕಾಯಿಯನ್ನು ಅರೆದು ಖಾರ ಮಾಡಿಕೊಂಡು ರೊಟ್ಟಿ ಜೊತೆ ನೆಂಚಿಕೊಂಡು ತಿಂದಿದ್ದ ನನಗೆ ಅದ್ರ 'ರುಚಿ'! ಗೊತ್ತಿತ್ತು.. ಆದ್ರೆ ಹೊಸಬರಿಗೆ ಅದರಲ್ಲೋ ಖಾರವನ್ನ ಕಡಿಮೆ ತಿನುವವರಿಗೆ ಅದು ತಕ್ಕುದಾದುದಲ್ಲ...
ಈ ಲೇಖನದ ಶೀರ್ಷಿಕೆ ಒದ್ದುತ್ತಿದ್ದಂತೆ ನನಗೆ ನೀವು ಬಹುಶ ಇಂದಿನ ಪ್ರತ್ಯೇಕ ತೆಲಾಂಗಣ ಹೋರಾಟದ ಬಗ್ಗೆ ಬರೆದ ಲೇಖನ ಅನ್ಕೊಂಡೆ.
ಅದು ಕೊನೆ ಲೈನ್ನಲ್ಲಿ ರುಜುವಾಯ್ತು.
ನಿಮ್ಮ ನೆನಪು ಇಲ್ಲಿ ದಾಖಲಿಸಿದ್ದರಿಂದ ಅದನ್ನೋದಿದವರು ಇನ್ನು ಮುಂದೆ ಗುಂಟೂರಿಗೆ ಹೋಗಬೇಕಾಗಿಬಂದಾಗ ಮುಂಜಾಗ್ರತೆ ವಹಿಸಬಹುದು..... ಇನ್ನು ಬಿಸಿಲಿನ ವಿಷಯಕ್ಕೆ ಬಂದರೆ ನಮಗದು(ರಾಯಚೂರು) ಹೊಸದಲ್ ಆದರೆ ಮಲೆನಾಡು-ದಕ್ಷಿಣ ಕರುನಾದವ್ರಿಗೆ ಸ್ವಲ್ಪ ಕಷ್ಟವೇ!!
ಧನ್ಯವಾದಗಳು

addoor's picture
02
Nov
2011
5:42

ಪ್ರಿಯ ಸಪ್ತಗಿರಿವಾಸಿ,
ಬೆ0ಕಿ ಖಾರದ ಚಟ್ನಿ ನಾಲಗೆಗೆ "ರುಚಿ" ಅನಿಸುತ್ತದೆ, ನಿಜ. ಆದರೆ ಖಾರಚಟ್ನಿ ಮತ್ತು ಖಾರಬಿಸಿಲು ‍ ಹೊಸಬರ ಹೊಟ್ಟೆಗೂ ತಲೆಗೂ ಸವಾಲು.
ಪ್ರತ್ಯೇಕ ತೆಲ0ಗಾಣ ರಾಜ್ಯ ಬೇಕೆ0ದು 15 ಅಕ್ಟೋಬರ್ 2011ರಿ0ದ 3 ದಿನ ಅಲ್ಲಿನವರು ನಡೆಸಿದ ರೈಲ್ ರೋಕೋ ಚಳವಳ ಎಲ್ಲೋ ಅವಿತಿದ್ದ ನನ್ನ ನೆನಪುಗಳನ್ನು ಬಡಿದೆಬ್ಬಿಸಿತು.