ಅಕ್ಕನೆಂದರೆ ಯಾರು?

ಅಕ್ಕನೆಂದರೆ ಯಾರು?

ಕವನ

ಅಕ್ಕನೆಂದರೆ ಯಾರು?
ನಾನು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ
ಅಮ್ಮನ ಪೆಟ್ಟು ತಡೆದವಳೋ ?
ಶಾಲೆಯಲ್ಲಿ ಬಿದ್ದು ಗಾಯವಾದಾಗ
ಎಡೆ ಬಿಡದೆ ಕಣ್ಣೀರ ಹರಿಸಿದವಳೋ ?
ಗದ್ದೆಗೆ ಬುತ್ತಿ ತೆಗೆದುಕೊಂಡು ಹೋಗುವಾಗ
ನನಗೆ ನಟ್ಟ ಮುಳ್ಳಿಗೆ ನನಗಿಂತ ಮೊದಲು
ಪ್ರತಿಕ್ರಿಸಿದವಳೋ ?
ಕಡಿಮೆಯಾದ ಪುರಿಗೆ ಹಠ ಹಿಡಿದು ಅಳುವಾಗ
ಕಣ್ಣೀರ ಒರೆಸಿ ಮುತ್ತನಿತ್ತವಳೋ ?
ನನ್ನ ಅಕ್ಕ
ಸುಖದಲ್ಲಿ ದು:ಖವಾಗಿ,ದು:ಖದಲಿ ಸುಖವಾಗಿ
ಎನ್ನ ಜೀವನದಲಿ ಬೇರೆತಿರುವಳು.
ಬಸ್ಸಿನಲ್ಲಿ ಕೂಳಿತಾಗ ಊರುಗಳು ಬಿಟ್ಟುಹೋದ ಹಾಗೆ
ನನ್ನ ಬಾಲ್ಯವು ಹೋಗದಂತೆ ತದೆದವಳು;
ಮುಂದೆ ನಮ್ಮ ಮನೆಯ ಬಿಟ್ಟು ಹೋದರು
ಎನ್ನ ಮನದಲ್ಲಿ ಎಂದು ನನ್ನ ಕಾಡುವವಳು;
ನನ್ನ ಕೆಣಕಿ ಮುಖ ಕೆಂಪಾಗಿಸಿ ಮತ್ತೆ,
ಮಂದಸ್ಮಿತವ ತುಂಬಿದವಳು.

ಅಮ್ಮನಂತೆ ಮನಸ ಕದ್ದಿರುವ ಅಕ್ಕಮ್ಮನಿಗೆ,
ಬರಿ ಮಾತಲಿ ಕೃತಜ್ಞತೆ ಹೇಳಿ ,
ನಮ್ಮ ಪ್ರೀತಿಯ ಬೆಲೆ ಕಡಿಮೆ ಮಾಡಲೇ?
ಇಲ್ಲ , ಅವಳನ್ನು ಕೆಣಕುತ್ತ ಮೌನದಿಂದಲೇ
ಧನ್ಯ ಎನ್ನಲೇ?

ಚಿತ್ರ್