ಅಕ್ಕನೆಂದರೆ ಯಾರು?

ಅಕ್ಕನೆಂದರೆ ಯಾರು?

ಕವನ

ಅಕ್ಕನೆಂದರೆ ಯಾರು? ನಾನು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಅಮ್ಮನ ಪೆಟ್ಟು ತಡೆದವಳೋ ? ಶಾಲೆಯಲ್ಲಿ ಬಿದ್ದು ಗಾಯವಾದಾಗ ಎಡೆ ಬಿಡದೆ ಕಣ್ಣೀರ ಹರಿಸಿದವಳೋ ? ಗದ್ದೆಗೆ ಬುತ್ತಿ ತೆಗೆದುಕೊಂಡು ಹೋಗುವಾಗ ನನಗೆ ನಟ್ಟ ಮುಳ್ಳಿಗೆ ನನಗಿಂತ ಮೊದಲು ಪ್ರತಿಕ್ರಿಸಿದವಳೋ ? ಕಡಿಮೆಯಾದ ಪುರಿಗೆ ಹಠ ಹಿಡಿದು ಅಳುವಾಗ ಕಣ್ಣೀರ ಒರೆಸಿ ಮುತ್ತನಿತ್ತವಳೋ ? ನನ್ನ ಅಕ್ಕ ಸುಖದಲ್ಲಿ ದು:ಖವಾಗಿ, ದು:ಖದಲಿ ಸುಖವಾಗಿ ಎನ್ನ ಜೀವನದಲಿ ಬೇರೆತಿರುವಳು. ಬಸ್ಸಿನಲ್ಲಿ ಕೂಳಿತಾಗ ಊರುಗಳು ಬಿಟ್ಟುಹೋದ ಹಾಗೆ ನನ್ನ ಬಾಲ್ಯವು ಹೋಗದಂತೆ ತದೆದವಳು; ಮುಂದೆ ನಮ್ಮ ಮನೆಯ ಬಿಟ್ಟು ಹೋದರು ಎನ್ನ ಮನದಲ್ಲಿ ಎಂದು ನನ್ನ ಕಾಡುವವಳು; ನನ್ನ ಕೆಣಕಿ ಮುಖ ಕೆಂಪಾಗಿಸಿ ಮತ್ತೆ, ಮಂದಸ್ಮಿತವ ತುಂಬಿದವಳು. ಅಮ್ಮನಂತೆ ಮನಸ ಕದ್ದಿರುವ ಅಕ್ಕಮ್ಮನಿಗೆ, ಬರಿ ಮಾತಲಿ ಕೃತಜ್ಞತೆ ಹೇಳಿ , ನಮ್ಮ ಪ್ರೀತಿಯ ಬೆಲೆ ಕಡಿಮೆ ಮಾಡಲೇ? ಇಲ್ಲ , ಅವಳನ್ನು ಕೆಣಕುತ್ತ ಮೌನದಿಂದಲೇ ಧನ್ಯ ಎನ್ನಲೇ?

ಚಿತ್ರ್

Comments