25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅತಿರೇಕ

August 11, 2012 - 10:20am
ku.sa.madhusudan

ಮೌನದಲಿ

ಮುಗಿಸಬಹುದಾಗಿದ್ದ

ಮುನಿಸೊಂದನು

ಮಾತಾಡಿ- ಮಾತಾಡಿ

ಮೈಲುದ್ದ ಎಳೆದೆವು;

 

ಮಾತಾಡಿ

ಮುಕ್ತಾಯ ಮಾಡಬಹುದಿದ್ದ

ಮನಸ್ತಾಪವೊಂದನು

ಮೌನಕೆ ಶರಣಾಗಿ

ಮಹಾಯುದ್ದ ಮಾಡಿದೆವು;

 

ಮಾತು-ಮೌನಗಳ ಮೌಲ್ಯವನರಿಯದೆ

ಸಂಬಂದಗಳ

ಸೇತುವೆಯನು

ಕಡಿದು ಹಾಕಿದೆವು!

.................................

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ksraghavendranavada on
ಹೂ೦೦ ಸೇತುವೆ ಮುರಿದು ಬಿದ್ದಿದೆ.. ಬಹುಶ: ಸೇತುವೆಯ ನವೀಕರಣ ಸಾಧ್ಯವಿಲ್ಲವೇನೋ? ಚೆನ್ನಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

Submitted by nanjunda on
ಕವನದ‌ ವಸ್ತು, ನಿರೂಪಣಾ ಶೈಲಿ ಹಾಗೂ ಶೀರ್ಷಿಕೆ ಚೆನ್ನಾಗಿದೆ. ಶುಭವಾಗಲಿ.

Submitted by venkatb83 on
+1 (ಡಿ.ನಂಜುಂಡ ಅವರ ಪ್ರತಿಕ್ರಿಯೆ ಗೆ ) ಗುರುದತ್ ಅವ್ರೆ- ಕವನ ಅರ್ಥಪೂರ್ಣವೂ ಆಗಿದ್ದು ಸಂಬಂಧಗಳನ್ನು ಬೆಸೆಯುವ ಬಗ್ಗೆ- ಮುರಿಯದೆ ಇರ್ವ ಹಾಗೆ ನೋಡಿಕೊಳ್ಳುವ ಬಗ್ಗೆ ನೀತಿ ಪಾಠ ಹೇಳಿಕೊಡುತ್ತೆ.. ಕೆಲವೇ ಸಾಲುಗಳಲ್ಲಿ ಸಖತ್ ಆಗಿ ಹೇಳಿರುವಿರಿ... ಮಾತು-ಮೌನದ ಮಹತ್ವವೂ ಇಲ್ಲಿದೆ... ಶುಭವಾಗಲಿ...

Submitted by Rajendra Kumar ... on
ಆತ್ಮೀಯ ಮಧುಸೂದನ್ ಅವರೆ, ನಿಮ್ಮ ಕವನ ಬಹಳ ಸುಂದರ ಮತ್ತು ಅರ್ಥಪೂರ್ಣವಾಗಿದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Submitted by Seema.v.Joshi on
"ಮಾತು-ಮೌನಗಳ ಮೌಲ್ಯವನರಿಯದೆ ಸಂಬಂದಗಳ ಸೇತುವೆಯನು ಕಡಿದು ಹಾಕಿದೆವು!" ನಿಮ್ಮ ಕವನದ ಈ ಕೊನೆಯ ನಾಲ್ಕು ಸಾಲುಗಳು ಇಂದಿನ ಇಡೀ ಮನುಕುಲದ ಪ್ರಸ್ತುತ ಪರಿಸ್ಥಿತಿಯನ್ನು ಬಿಂಬಿಸುತ್ತವೆ. ಮತ್ತೊಮ್ಮೆ ನಾವೆಲ್ಲರೂ ಇದರ ಕುರಿತು ಚಿಂತಿಸಿ ಕಳಚಿ ಹೋಗುತ್ತಿರುವ ನಮ್ಮ ನಮ್ಮ ಸಂಬಂಧಗಳ ಕೊಂಡಿಗಳನ್ನು ಬೆಸಯಬೇಕಾಗಿದೆ. ಧನ್ಯವಾದಗಳೊಂದಿಗೆ, ಸೀಮಾ ಜೋಶಿ.

Submitted by ku.sa.madhusudan on
ನನ್ನಕವನವನ್ನುಓದುವ ಸಮಯ-ಸಹನೆ ಇದ್ದುದಕ್ಕೆ ವಂದನೆಗಳು. ಎರಡು ಒಳ್ಳೆಯ ಮಾತುಗಳನ್ನಾಡಿ ಬರೆಯುವ ನನ್ನ ಉತ್ಸಾಹ ಹೆಚ್ಚಿಸಿದ್ದೀರಿ,ಥ್ಯಾಂಕ್ಸ್!....@ ಮಧು

Submitted by swara kamath on
ತುಂಬಾ ಸುಂದರ ವಾಗಿದೆ ತಮ್ಮ ಈ ಚುಟಕು ಕವನದ ಅರ್ಥ.ನಿಜ ಜೀವನದಲ್ಲಿ ಎಲ್ಲರೂ ಅಳವಡಿಸಿ ಕೊಳ್ಳಲೇ ಬೇಕಾದ ಗೂಢಾರ್ಥ. ಸಂಬಂಧಗಳ ಸೇತುವೆಯನ್ನು ಒಮ್ಮೆ ಮಂದಹಾಸ ಭರಿತ ಮೊಗದಿಂದ ಕೈ ಚಾಚಿದರೆ ಮತ್ತೆ ಕಟ್ಟಬಹುದಲ್ಲವೆ,ಸುಂದರ ವಾದ ಜೀವನವನ್ನ. ವಂದನೆಗಳು ಮಧುಸೂದನ್ ಅವರೆ.

Submitted by gurudutt_r on
ಸಂಬಧಗಳ ಅರ್ಥವೇ ತಿಳಿಯದು ಇಂದಿನ ಅನೇಕ ಯುವಕರಿಗೆ (ಆಧುನೀಕರಣಕ್ಕೆ, ಬಣ್ಣ ಬಣ್ಣದ ಲೋಕಕ್ಕೆ ಮೊರೆ ಹೋದ ಮಧ್ಯವಸ್ಕರೂ ಇದ್ದಾರೆ) ಅದರಲ್ಲೂ ಅಪ್ಪ ಅಮ್ಮ ಅಂದೊಡನೆ ಇಂದಿನ ಯುವ ಪೀಳಿಗೆಯ ವಿಚಾರಧಾರೆ ಹಾಗು ನಡುವಳಿಕೆಯನ್ನ ಮನಗಂಡ ಮಾತುಗಳಿವು ನಿಮ್ಮವು. ಸಂಭದದ ಬೆಸುಗೆಯ ಹಿತ ಭಾವದ ಜೊತೆ ರಕ್ಷೆಯಂತೆ ಕಾಯುವ ಸಂಭದಗಳನ್ನು ಅರಿಯದೇ, ಅರಿಯುವ ಪ್ರಯತ್ನವೂ ಮಾಡದೇ ಇರುವವರಿಗೆ ನಿಮ್ಮ ಈ ಕವನ ಎಚ್ಚರಿಕೆ ಗಂಟೆ ಎಂದರೆ ಸುಳ್ಳಾಗುವುದಿಲ್ಲ. ಒಳ್ಳೆಯ ಬರಹ, ಇದರಿಂದ ಸ್ಪೂರ್ತಿ ಪಡೆದು ಅಮ್ಮನ ಮೇಲೆ ಒಂದೆರೆಡು ಸಾಲು ಗೀಚುವ ನನ್ನ ಮೊದಲ ಪ್ರಯತ್ನ ಮಾಡುವೆ. ರಾ.ಗುರುದತ್.

Submitted by ku.sa.madhusudan on
ನಿಮ್ಮ ಪ್ರಯತ್ನ ಸಫಲವಾಗಲಿ,ಪ್ರಿಯ ಗುರುದತ್.@ ಮಧು