August 20, 2012 - 6:54pm
ಎದುರಿಗೆ ಸಿಕ್ಕರೂ
ಕಣ್ಣುಗಳು ನಕ್ಕರೂ
ತುಟಿಗಳು ಬಿರಿದರೂ
ನಾವು ತೆರೆದುಕೊಳ್ಳುವುದಿಲ್ಲ
ಒಳಗೆ ಕರೆದುಕೊಳ್ಳುವುದಿಲ್ಲ .
ಹೃದಯ ಬಿಚ್ಚಿ
ನೋವು ನಲಿವು ಹಂಚಿ
ಹಾಡುವುದಿಲ್ಲ
ಅದಕೇ ನಾವು ಅಪರಿಚಿತರು
ಸದಾ
ಜೊತೆಯಲಿದ್ದರೂ!
--------------------
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








