ಅಮ್ಮ‌

ಅಮ್ಮ‌

ಕವನ

ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು,

ಕಣ್ಣ ಭಾಷೆಯ ಅರ್ಥವಾಗದ ಮಹಾಜ್ನಾನಿಯು ನೀನು !!

ನಿನ್ನ ಭವಿಷ್ಯದ ಮೊದಲ ಧೀರೆಯು ಅವಳು,

ನಿನ್ನ ಕನಸಿನ ಮೊದಲ ಧಾತೆಯು ಅವಳು,

ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು !

ಬೆಂದಿದ್ದಳು,ದಣಿದಿದ್ದಳು ನಿನ್ನ ನಾಳೆಗಾಗಿ,

ಕ್ಷಣ ಕ್ಷಣದ ಪ್ರತಿ ನೋವ ಮರೆತಿದ್ದಳು ಅವಳು,

ಕರುಳ ಕೂಗು ಅರ್ಥವಾಗದ ಮಹಜ್ನಾನಿಯು ನೀನು !

ಸುಡುಬಿಸಿಲ ಧಗೆಯ ಮರೆತು ದಣಿದಿದ್ದಳು ಅವಳು,

ಪ್ರತಿ ಜನರ ವ್ಯಂಗ್ಯವ ಮರೆತು  ಬದುಕಿದ್ದಳು ಅವಳು 

ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು !

ನಿನ್ನ ಬಾಳ ಸಂಗಾತಿಯ ಸೌಖ್ಯವ ಬಯಸೊ ಮನಸಿನವಳು,

ನಿನ್ನ ಪ್ರತಿ ಹೆಜ್ಜೆಯ ಯಶ ಬಯಸೊ ಹೃದಯದವಳು,

ಬಾಳ ಸಂಗಾತಿಯ ಸೋಜಿಗೆ,ಅವಳ ಮರೆತ ಮಹಾಜ್ನಾನಿಯು ನೀನು !

ಅವಳ ಕಣ್ಣ ಭಾಷೆಯ ಮರೆತ ಸುಕುಮಾರನು ನೀನು,

ಅವಳ‌ ಹೃದಯದ ವೇದನೆಯ ಅರಿಯದ ಮನಸು ನಿನದು,

ನಿನ್ನ ಜೀವನದ ಹೊಸ ಭಾಷ್ಯವ ಬರೆದ ಮಹಾಮಾತೆಯು ಅವಳು !

ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು,

ಕಣ್ಣ ಭಾಷೆಯ ಅರ್ಥವಾಗದ ಮಹಾಜ್ನಾನಿಯು ನೀನು...!!

                                                                           ***ಶಶಿಗುರು