ಅರ್ಧ ಬರೆದ ಕವಿತೆ

ಅರ್ಧ ಬರೆದ ಕವಿತೆ

ಕವನ

ಕಳೆದು ಹೊದ ಕವನಗಳ ಹುಡುಕಿ ತರುವ ಯತ್ನದಲ್ಲಿ,

ಮರೆತು ಹೊದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,

ಮಂಪರಿನಲಿ ಮುದುಡಿಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ !

 

ಮೊದಲಿನಿಂದ ಶುರು ಮಾಡಬೇಕಿದೆ ಅರ್ಧ ಬರೆದ ಕವಿತೆ..

 

ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ,

ಇನ್ನು ಕೊನೆಯ ಸಾಲುಗಳ ಮಾತೆಲ್ಲಿಂದ |

ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ

ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ

 

ಮೊದಲಿನಿಂದ ಶುರು ಮಾಡಬೇಕಿದೆ ಅರ್ಧ ಬರೆದ ಕವಿತೆ..

 

ಹೊಸದಾಗಿ ಹೊಸೆಯಬೇಕಿದೆ ಸಾಲು‍ ಸಾಲು ಶಬ್ದಗಳನು

ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ, ಗೋಧೂಳಿ ಕವನ

ಸರಳ ಸುಲಲಿತ ಶಬ್ದಗಳಿಗೆ ಅದುವೇ ತಾನೆ ಸೌಂದರ್ಯ ಪ್ರಾಣ ?

 

ಮೊದಲಿನಿಂದ ಶುರು ಮಾಡಬೇಕಿದೆ ಅರ್ಧ ಬರೆದ ಕವಿತೆ..