21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆ...ಆ..ಆಕ್ಷಿ

August 17, 2012 - 10:25am
ramvani

ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್‍ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.‍ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು ಅದಕ್ಕೆ ಗೊತ್ತಾಯಿತೇನೋ, ಬೊಚ್ಚು ಬಾಯಿ ಅಗಲಿಸಿ ನಕ್ಕಿತು. ನನಗೂ ಅದನ್ನು ಮಾತನಾಡಿಸಬೇಕಿತ್ತು. ಹಲೋ ಎಂದೆ...ಕೈ,-ಕಾಲು ಆಡಿಸುತ್ತಾ ಊ ಗುಟ್ಟಿತು. ಆ ಅಮ್ಮ, ನನ್ನತ್ತ ಕಿರುನಗೆ ಬೀರಿ, ಪ್ರಾಮ್ ಆಡಿಸಿ ಮಗುವಿನ ಬಾಯಿಗೆ ರಬ್ಬರ್ ನಿಪ್ಪಲ್ ಇಟ್ಟು ಮತ್ತೆ ತನ್ನ ಎಸ್.ಎಮ್.ಎಸ್ ಲೋಕದಲಿ ಮುಳುಗಿದಳು. ಅದ್ಯಾಕೋ ಗೊತ್ತಿಲ್ಲ, ಮಗುವನ್ನು ಎತ್ತಿಕೊಳ್ಳುವುದು, ರೈಲು-ಬಸ್ಸುಗಳಲ್ಲಿ ಮಡಿಲಲ್ಲಿ ಕೂಡಿಸಿಕೊಳ್ಳುವ ಪರಿಪಾಠವೇ ಇಲ್ಲಿಲ್ಲ. ಪರರು ಮುಟ್ಟಿದಲಿ-ಮಾತನಾಡಿಸಿದಲ್ಲಿ ಅನುಮಾನಾಸ್ಪದವಾಗಿ ನೋಡುತ್ತಾರೆ.

ಅಯ್ಯೋ ಪುಟ್ಟಿ, ನಿನ್ನ ಸ್ಪರ್ಶ, ಸಾನಿದ್ಧ್ಯ ಬಿಟ್ಟು ನಿಮ್ಮಮ್ಮನಿಗೆ ಮೊಬೈಲ್ ಸ್ಪರ್ಶವೇ ಹಿತವೇನೋ ಎಂದುಕೊಂಡೆ. ತಾಯಿ-ತಂದೆ-ಮಗುವಿನ ಬೆಚ್ಚನೆಯ ಅಪ್ಪುಗೆ, ಸ್ಪರ್ಶ ಹಿತ, ಭದ್ರತೆ, ಆತ್ಮೀಯತೆ ಕೊಡುತ್ತೆ. ಇದ್ದಕ್ಕಿದ್ದಂತೆ ಆಕ್ಷಿ ಎಂದು ಸೀನಿತು ಆ ಪುಟ್ಟಿ. ತಕ್ಷಣ ನನ್ನ ಅರಿವಿಲ್ಲದೇ ಶತಾಯಸ್ ಎಂದು ಬಾಯಲ್ಲಿ ಬಂದಿತು. ಇದೇನಿದು ಮಗುವನ್ನು ಮೊದಲು ನಗಿಸಿದಳು ಇದೇನೋ ಹೇಳುತ್ತಿದ್ದಾಳೆ ಎಂದು ಅನುಮಾನ ಪಟ್ಟಾಳೆಂಬ ಶಂಕೆಯಿಂದ, ಛಟ್ಟನೆ ಐ ಜಸ್ಟ್ ಸೆಡ್ "ಗಾಡ್‍ಬ್ಲೆಸ್" ಎಂದೆ. ಓ-ಮೈ ಮಮ್ ಟೆಲ್ಸ್ ಲೈಕ್‍ದಟ್ ಎಂದು ಮತ್ತೆ ಎಸ್.ಎಮ್.ಎಸ್. ನಲ್ಲಿ ಮುಳುಗಿದಳು ಆ ಮಹಾತಾಯಿ.

ಸೀನು -ಅಮ್ಮ, ಶತಾಯಸ್...ಈ ಬರಹಕ್ಕೆ ನಾಂದಿ ಹಾಡಿತು. ಸೀನುವುದು ಆ..ಆ...ಆಕ್ಷಿ ಗಾಳಿಯನ್ನು ಶ್ವಾಸಕೋಶಗಳಿಂದ ಹೊರದೂಡುವ ಒಂದು ದೈಹಿಕ ಪ್ರಕ್ರಿಯೆ. ಸೀನು ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ಧೂಳು ಅಥವಾ ಹೊಟ್ಟೆ ಪೂರ್ತಿ ತುಂಬಿದಾಗ, ಅಥವಾ ವೈರಲ್ ಸೋಂಕು ತಗುಲಿದಾಗ ಉಂಟಾಗುತ್ತದೆ. ಹಾಗೆಯೇ ರೋಗ ಹರಡುವಿಕೆಯ ಮಾರ್ಗವೂ ಹೌದು.

ಚಳಿಗಾಲದಲ್ಲಿ ಶೀತ ನೆಗಡಿ ಜೊತೆಗೆ ಸೀನು ಸರ್ವೇ ಸಾಮಾನ್ಯ. ಶೀತದ ಆ ಅಕ್ಷೀ ಅಕ್ಷೀ ಬಾರದಿದ್ದಲ್ಲಿ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.ಶೀತದ ಆ ಆಕ್ಷಿಗೆ ಕಷಾಯದ ಔಷಧಿಯೇ ಹೊರತು ಇನ್ಯಾವ ನಂಬಿಕೆ/ಶಕುನಗಳು ಸಲ್ಲ.

ಸೀನಿದಾಕ್ಷಣ ಶತಾಯಸ್, ದೀರ್ಘಾಯಸ್, ನೂರಾಯಸ್ ಎಂದು ಹೇಳ್ತೀವಿ. ಹಿರಿಯರಿಂದ ನಾವು ಕಲಿತ ಅಭ್ಯಾಸವದು. ಆಯಸ್ಸಿಗೂ-ಸೀನಿಗೂ ನಂಟು?  ಆದರೆ ಆ ಸೀನಿಗೆ ಅಂಟಿಗೆ ಅನೇಕ ಶಕುನಗಳ ಗಂಟು.

ಉತ್ತರ, ದಕ್ಷಿಣ ಭಾರತದಲ್ಲಿ ಒಳ್ಳೆಯ ಕಾರ್ಯಕ್ಕೆ ಹೊರಡುವ ಮೊದಲು ಒಂದು ಸೀನು ಬಂದಲ್ಲಿ ಕಾರ್ಯಕ್ಕೆ ವಿಘ್ನ, ಎರಡನೆಯ ಆಕ್ಷಿ ಬರುವುದೇನೋ ಎಂದು ಕಾಯುತ್ತಾರೆ, ಬರದಿದ್ದಲ್ಲಿ ಪರಿಹಾರ ಉಂಟು. ಒಂದು ನಿಮಿಷ ಕುಳಿತು ಅಥವಾ ಒಂದು ತೊಟ್ಟು ನೀರು ಕುಡಿದು ಹೊರಡುತ್ತಾರೆ. ಪಶ್ಚಿಮ ಭಾರತದಲ್ಲಿ ಇಷ್ಟಪಟ್ಟವರು ನೆನೆಪಿಸಿಕೊಳ್ಳುತ್ತಿದ್ದಾರೆ ಎಂದಾದಲ್ಲಿ ಇನ್ನೂ ಕೆಲವೆಡೆ ಮದುವೆಯಾದ ಹೆಣ್ಣು ಸೀನಿದಲ್ಲಿ "ಅತ್ತೆ" ಸೊಸೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಗೇಲಿ ಮಾಡುತ್ತಾರೆ. ನಮ್ಮ ಹಾಗೆಯೇ ಇರಾನಿಯರಲ್ಲೂ ಒಂದು ಸೀನು ಅಶುಭ/ ಎರಡು ಶುಭ. 

ಚೀನ, ವಿಯಟ್ನಾಂ, ಜಪಾನೀಯರಲ್ಲಿ ಸೀನು ಬಂದ ವ್ಯಕ್ತಿಯ ಕುರಿತು ಆತನ ಬಗ್ಗೆ  ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ನಂಬಿಕೆ. ಅದರಲ್ಲೂ ಒಂಟಿ ಸೀನು ಆ ವ್ಯಕ್ತಿಯ ಬಗ್ಗೆ-ಕೆಟ್ಟಮಾತು, ಎರಡು ಸೀನು-ಒಳ್ಳೆಯ ಮಾತು ಹಾಗೂ ಮೂರು ಸೀನು-ಪ್ರೀತಿಸುತ್ತಾರೆ ಎಂಬ ನಂಬಿಕೆ.  

ಪಾಕಿಸ್ತಾನಿಯರಲ್ಲಿ "ಸೀನಿದ ವ್ಯಕ್ತಿಯ ಪತ್ನಿ, ಅಚ್ಚುಮೆಚ್ಚಿನ ಬಂಧು-ಬಾಂಧವರು ನೆನಪಿಸಿಕೊಳ್ಳುತ್ತಿದ್ದಾರೆ ಎಂಬ ನಂಬಿಕೆ. ನೇಪಾಳೀಯರು ಕೂಡ ಸೀನಿದಾಕ್ಷಣ "ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಸೀನಿದವರ ತಲೆಯ ಮೇಲೆ ಕೈ ಇಡುತ್ತಾರಂತೆ. ಅಮೇರಿಕನ್ನರಲ್ಲಿ ಸೀನಿದ ವ್ಯಕ್ತಿ ಸತ್ಯ ಹೇಳುತ್ತಿದ್ದಾನೆ ಎಂಬ ನಂಬಿಕೆ ಇದ್ದರೆ ಜರ್ಮನ್ನರಲ್ಲಿ ಮೂರು ಸೀನು ಬಂದಲ್ಲಿ ಉಡುಗೊರೆ ದೊರಕುವುದೆಂಬ ನಂಬಿಕೆ. ಸ್ಕಾಟ್‍ಲ್ಯಾಂಡಿನಲ್ಲಿ ಮಗು ಹುಟ್ಟಿದ ತಕ್ಷಣ "ಸೀನು" ಬಂದಲ್ಲಿ ಆ ಮಗು ಅಪ್ಸರೆಯರ ದಿಗ್ಬಂಧನದಿಂದ ಮುಕ್ತಿ ದೊರಕಿ ಭುವಿಗೆ ಬಂದಿತು ಎಂಬ ನಂಬಿಕೆ. ಸ್ಪೈನ್‍ನಲ್ಲಿ ಒಂದು ಸೀನು-ಆರೋಗ್ಯ ಪ್ರಾಪ್ತಿ, ಎರಡು-ಆರೋಗ್ಯ, ಐಶ್ವರ್ಯ ಪ್ರಾಪ್ತಿ. ಮೂರು/ನಾಲ್ಕಾದಲ್ಲಿ ಅಲರ್ಜಿ-ರೋಗ ಪ್ರಾಪ್ತಿ, ವೈದ್ಯೋ ನಾರಾಯಣೋ ಹರಿಃ! ಪ್ರಾಚೀನ ಗ್ರೀಸಿನಲ್ಲಿ "ಸೀನು" ಶುಭ ಶಕುನ ಹಾಗೂ ಭವಿಷ್ಯ ಸೂಚಕ ಶುಭಸಂಕೇತ ಎಂದು ಪರಿಗಣಿಸಲಾಗುತ್ತಿತ್ತು.

ಮಾನವನ ಬದುಕಿಗೂ ನಂಬಿಕೆಗೂ ಬೇರ್ಪಡಿಸಲಾಗದ ಸಂಬಂಧ. ನಂಬಿಕೆ ಎಂಬುದು ಅವರವರ ಭಾವಕ್ಕೆ! ಯಾರೂ ಅದಕ್ಕೆ ಕಾರಣವೇನು ಎಂದು ಶೋಧಿಸಲು ಹೋಗುವುದಿಲ್ಲ  ಅನೇಕ ನಂಬಿಕೆಗಳು, ಸಂಪ್ರದಾಯಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಕೊಂಡು ಬಂದಿವೆ. ಈ ಕೆಲವೊಂದು ನಂಬಿಕೆಗಳು ಮೂಢನಂಬಿಕೆ ಎನಿಸುವುದೂ ನಿಜ.

ಎಚ್ಚರವಿರಲಿ:- ಆ...ಆ..ಆಕ್ಷೀಯಲ್ಲಿ ಒಂದು ಲಕ್ಷ ರೋಗಾಣುಗಳನ್ನು ಹೊರಸೂಸುತ್ತದೆ ಹಾಗೂ ಒಂದು ಘಂಟೆಗೆ ನೂರು ಮೈಲಿ ವೇಗವುಳ್ಳದ್ದು "ಸೀನು". ನಾಯಿ, ಬೆಕ್ಕು ಹಾಗೂ ಇಗುವಾನ ಕ್ಕೂ ಉಂಟು ಸೀನಿನ ನಂಟು.

ಅಬ್ಬಬ್ಬಾ ಆಕ್ಷಿಯೇ...ನಿನಗೂ ಗಿನ್ನಿಸ್ ದಾಖಲೆಯೇ?

ಲೈಬ್ರರಿ ಆಫ್ ಕಾಂಗ್ರೆಸ್ ಪ್ರಕಾರ ಆಕ್ಷಿಗೆ ಗಿನ್ನಿಸ್ ದಾಖಲೆಯೂ ಉಂಟು. ಜನವರಿ ೧೯೮೧ ರಿಂದ ಸೆಪ್ಟೆಂಬರ್ ೧೯೮೩ ರರಲ್ಲಿ ೯೭೮ ದಿನಗಳವರೆಗೆ ಇಂಗ್ಲೆಂಡಿನ ೧೨ ವರುಷದ ಡೋನ ಗ್ರಿಫಿತ್ ಎಂಬ ಹುಡುಗಿಗೆ ಪ್ರತಿ ಐದು ನಿಮಿಷಗಳಿಗೊಮ್ಮೆ ಸೀನು ಬಂದಿತಂತೆ.

 

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ksraghavendranavada on

ಅಬ್ಬಾ.. ಏನು ಸೀನ್ತೀರಿ ಮಾರಾಯರೇ...
ಸೀನು ಪುರಾಣ.. ಆ.ಆ ಅಕ್ಷಿ.. ಪ್ರತಿಕ್ರಿಯೆ ಬರೆಯಬೇಕಾದರೆ ಸೀನು ಬರಬೇಕೆ!
ಅ..ಆ... ಸೀನು ಬರಲೇ ಇಲ್ಲ... ಸೊಗಸಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಹೆಚ್ಚು ಸೀನಿ ಹಗುರವಾಗಬೇಕೆ?
"chinkini"- effective for cold, headache, drowisiness free from tobacco
(The Tayyebi dawakhana unani pvt ltd) .Rs.10
ಸೀನನ್ನು ಲೆಕ್ಕ ಮಾಡಲು ಬೇರೆ ಯಾರಿಗಾದರೂ ಹೇಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:)
ನಾನು ೫೦ರವರೆಗೆ ಲೆಕ್ಕ ಮಾಡಿದ್ದೆ.. ಮತ್ತೂ..ಆಕ್ಷೀಈಈಈಈಈಈಈಈಈ.. ಸೀನಿನ ರೆಕಾರ್ಡ್ ಮಾಡಬಹುದು. :)
ಆ..ಆ..ಆಕ್ಷಿ ಲೇಖನ ಚೆನ್ನಾಗಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ramvani on

ಧನ್ಯವಾದಗಳು, ಹೇಗಿದೆ ನೋಡಿ...ಸೀನು ಅದಕ್ಕೂ ಲೆಕ್ಕವುಂಟು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ramvani on

ಬೇಕೆಂದಾಗ ಬರುವುದೇ ಸೀನು..? ವಂದನೆಗಳು, ಶ್ರೀಯುತ ನಾವಡ ಅವರಿಗೆ...ವಾಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ವಾಣಿಯವರೆ,
ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಸೀನಿನ ನಂಬಿಕೆ ಹೀಗಿದೆ. ಯಾವುದಾದರೂ ಕಾರ್ಯಕ್ಕೆ ಹೊರಟು ನಿಂತಾಗ ಒಂಟಿ ಸೀನು ಗಂಡಸಿನಿಂದ ಬಂದರೆ ಶುಭ, ಹೆಂಗಸಿನಿಂದಾದರೆ ಶುಭ ಸೂಚನೆಗೆ ಎರಡು ಸೀನುಗಳು ಬರಬೇಕು. ಇವು ಉಲ್ಟಾ ಆದಲ್ಲಿ ಒಂದು ಕ್ಷಣ ಕುಳಿತು ಹೋಗುವುದು ವಾಡಿಕೆ ನಮ್ಮಲ್ಲೂ ಇದೆ.

ನೀವು ಶತಾಯುಷ್ ಎಂದರೆ, ನಮ್ಮಲ್ಲಿ, ಅಕ್ಷಿ...ಶ್ರೀರಾಮ ಕಟಾಕ್ಷಿ ಎನ್ನುತ್ತಾರೆ. ಬಹುಶ: ದೇವರನ್ನು ಪರಿಪರಿ ಕೆಲಸದೊಳೊಂದು ಕೆಲಸವೆಂದು ಕ್ರುಷ್ಣನ ನೆನೆ ಎಂದು ಪುರಂದರ ದಾಸರು ಹೇಳಿದ್ದನ್ನು ಹೀಗೆ ಆಚರಣೆಗೆ ತಂದಿರಬಹುದು.

ಸೀನಲು ಕಾರಣ ಧೂಳಿನಿಂದ ಉಂಟಾದ ಅಲರ್ಜಿ ಅದಕ್ಕೆ ಆ ಧೂಳು ಶಮನವಾಗಲು ಒಂದು ಘಳಿಗೆ ಕುಳಿತು ಹೊರಡುವ ಪದ್ಧತಿ ಮತ್ತು ಅದನ್ನು ಹೋಗಲಾಡಿಸಲು ನೀರು ಚಿಮುಕಿಸುವ ಪರಿಪಾಟವೇ ಮುಂದೆ ಸ್ವಲ್ಪ ನೀರು ಸೇವಿಸುವ ಪದ್ಧತಿಗೆ ನಾಂದಿಯಾಗಿರಬಹುದು.

ಸೀನಿನ 'ಸೀನ'ನ್ನು ಚೆನ್ನಾಗಿ ವಿವರಿಸಿದ್ದೀರ, ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ramvani on

ಧನ್ಯವಾದಗಳು ಶ್ರೀಧರ್, ಶ್ರೀರಾಮ ಕಟಾಕ್ಷಿ- ಚೆನ್ನಾಗಿದೆ. ಹಾಗಾದರೂ ರಾಮ-ನಾಮ ಬಾಯಲ್ಲಿ . ವಾಣಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ವಾಣಿಯವರೆ ಚೆನ್ನಾಗಿ ವಿವರಿಸಿದ್ದೀರಿ
ನಮ್ಮ ಮನೆಯಲ್ಲಂತು ನಾನು ದೇವರ ಎದುರು ಕೈಮುಗಿದು
ಕೋರಿಕೆ ನಿಂತೊಡನೆ
ನಮ್ಮ ಮನೆಯವರು ಹಿಂದೆಯೆ ಸಿದ್ದವಾಗಿ ನಿಂತಿರುತಾರೆ
ಒಂಟಿ ...ಆ.....ಕ್ಷೀ..ಗಾಗಿ

ಒಟ್ಟಿನಲ್ಲಿ ತಿಳಿದಿದ್ದು ಇಷ್ಟು ಸಿಂಗಾಪುರದಲ್ಲು ಸೀನಿದೆ (ಶ್ರೀನಾಥ ಬಲ್ಲೆಯವರ ಕ್ಷಮೆಕೋರಿ)

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ramvani on

ವಂದನೆಗಳು, ನಿಮ್ಮ ಕೋರಿಕೆ ಏನೆಂದು ಗೊತ್ತಾಗಿರುವುದರಿಂದಲೇ ಒಂಟಿ ಸೀನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.