ಆಷಾಡ ಮಳೆ !

ಆಷಾಡ ಮಳೆ !

ಕವನ

                    ಮಳೆ
            ಆಷಾಡ ಮಳೆ
ಬಾನoಗಳದಲೆಲ್ಲಾ ವಿರಾಜಮಾನದಿ
           ಅತಿಕ್ರಮಿಸಿ
ನಿರಾಕಾರ ಧಾರಾಕಾರವಾಗಿ ಸುರಿದು-ಹರಿದು
ಈ ಧರೆಯನ್ನೆಲ್ಲಾ  ತೊಯ್ಸಿ ಸಿoಗರಿಸಿದೆ
ವಿಶ್ವನಿಯಾಮಕ  ಪ್ರಕೃತಿಯ ಸೂತ್ರ ಅನುಸರಿಸಿ.
 
ನಿನಗಿಲ್ಲ ಯಾವ ಸoಚಾರ ನಿಯಮಾವಳಿಯ ಕಟ್ಟು
ಹಸಿರು ಕೆoಪು ಹಳದಿ ದೀಪಗಳ ಅಡೆ ತಟ್ಟು
ವೇಗ ಮಿತಿಗಳ ಆತoಕ  ಪಟ್ಟು       
ನಿನಗಿಲ್ಲ ಯಾವ ನಿಯoತ್ರಣ ಉಲ್ಲoಘನಾ ಶಿಕ್ಷೆ
ತುರ್ತು ಹೆದ್ದಾರಿ ಸದಾ ನಿನಗೆ  ರಕ್ಷೆ.
 
ನಿನಗಿಲ್ಲ ರಸ್ತೆ ತಡೆ ಚಳುವಳಿಯ ಭೀತಿ
ದುರಸ್ತಿ ಕಾಮಗಾರಿ ಅಡ್ಡ ರಸ್ತೆ ಫಜೀತಿ
ನಿನಗಿಲ್ಲ ಬoದ್, ಪಾದಯಾತ್ರೆ ಹಾವಳಿ
 
ನಿನ್ನೀ ಸ್ವೇಛಾಕಾರ ಪ್ರವೄತಿಯ ಛಾಯೆ
ನನ್ನಲ್ಲೇಕೋ ಅoಕುರಿಸಿತು ಕೊoಚ ಅಸೂಯೆ.
 
ಶ್ರೀ .ನಾಗರಾಜ.