26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಹ್ವಾನ ೦೨!!

July 7, 2012 - 3:14am
bhalle

ಚಿಕ್ಕು’ವಿನ ಚೊಕ್ಕ ಕವನ ’ಆಹ್ವಾನ’ ಓದಿ ಮನದಲ್ಲಿ ಮೂಡಿದ ತಲೆಹರಟೆಯನ್ನು ಹೊರಹಾಕಿದ್ದೇನೆ

ನಿನ್ನ ನಯನಗಳೇನನ್ನೋ ಹುಡುಕುತ್ತಿವೆ

ಹೆಗಲ ಚೀಲದಲ್ಲಿರೋ ಐ-ಫೋನನ್ನೋ

ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ

ಐಟ್ಯೂನಿಂದ ಬರುವ ಹಾಡನ್ನೋ

ನಿನ್ನ ಅಧರಗಳೇಕೋ ಅದುರುತ್ತಿವೆ

ಫೋನಿರುವುದು ವೈಬ್ರೇಟ್ ಮೋಡಲ್ಲೇನೋ

ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ

ಕಚಗುಳಿ ಇಡುವ ಎಸ್.ಎಮ್.ಎಸ್’ನಿಂದೇನೋ

ನಿನ್ನ ಕೂದಲು ನವಿರಾಗಿ ಹಾರಾಡಿದೆ

ಫೋನಿಂದ ಗಾಳಿ ಬರುವ ಹೊಸ App’ಏನೋ

ನಿನ್ನ ಕೈಗಳು ನನ್ನೆಡೆ ಚಾಚಿವೆ

ಚಾರ್ಜ್ ಮಾಡಲು ಚಾರ್ಜರ್ ಬೇಕಿತ್ತೇನೋ

ನಿನ್ನ ಪಾದಗಳು ಹೆಜ್ಜೆ ಹಾಕಿವೆ

ಚಾರ್ಜರ್ ಚುಚ್ಚಲು outlet ಹುಡುಕಲೇನೋ

ನಿನ್ ಹೃದಯವೇಕೆ ಎನಗೆ ಬಾಗಿಲು ಹಾಕಿವೆ

ಸದಾ ನಿನ್ ಜೊತೆ ಇರಲು ನಾನಾಗಬಾರದಿತ್ತೇ

ಐಫೋನೋ ಪಾಮೋರಿನ್ನೋ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Prakash Narasimhaiya on

ನನ್ನ ಕೈ ಬೆರಳುಗಳು ತದಕಾಡುತ್ತಿವೆ
ಅಕ್ಷರಗಳ ಜೋಡಿಸಿ ಅಭಿನಂದಿಸಲು
ಶ್ರೀನಾಥರ ಕಿಸೆಯಲ್ಲಿ ಮೊಬೈಲು ಗುನುಗಾಡಿದರೇನು?
I pod ಹಾಡಿದರೇನು? ಪೋಮೊರಿನ್ ಹೆಗಲೇರಿದರೇನು?
ನನ್ನ ಹೃದಯದ ಬಾಗಿಲು ಮಾತ್ರ ತೆರೆದೇ ಇದೆ.

ಈ ಆಹ್ವಾನ ನನಗೆಂದು ತಲೆ ಹರಟೆಯಿಂದ
ತೋಚಿದಂತೆ ಗೀಚಿದ ನಿಮ್ಮಾಭಿಮಾನಿ.

ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ದ್ಹನ್ಯವಾದಗಳು ಪ್ರಕಾಶರೇ
ಅಕ್ಷರಗಳು ಖಂಡಿತ ನಿಮ್ಮ ಹ್ರುದಯದ ಮಾತನ್ನು ತಲುಪಿಸಿದೆ ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಬ್ಹಲ್ಲೆ ಅವ್ರೆ...ಸಖತ್>>>>>

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಅನಂತ ಧನ್ಯವಾದಗಳು ಸಪ್ತಗಿರಿಯವರೇ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

<<ಸದಾ ನಿನ್ ಜೊತೆ ಇರಲು ನಾನಾಗಬಾರದಿತ್ತೇ
ಐಫೋನೋ ಪಾಮೋರಿನ್ನೋ?>>
ಇವೆರಡರಲ್ಲಿ ಐಫೋನೇ ಬೆಟರ್ ಏನೋ ಭಲ್ಲೇಜಿ. ಏಕೆಂದರೆ, ಪಾಮೋರಿನ್ನನಾದರೂ ಸ್ವಲ್ಪ ಹೊತ್ತು ಬಿಟ್ಟಿರುತ್ತಾರೆ ಆದರೆ ಐಫೋನನ್ನಲ್ಲ ಅಲ್ಲವೇ? :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ನನಗೆ ಈ ಎರಡರ ನಡುವೆ option ಕೊಟ್ಟರೆ ಪಾಮೋರಿನ್ ಆಗಲು ಬಯಸುವೆ
ನಾ ಕಂಡಿರುವ ಹಾಗೆ ಹೆಂಗಳು ಐ‍ಫೋನನ್ನು ಬಳಸುವಾಗ ಕೈಯಲ್ಲಿ ಪಿಡಿದು ಕೆನ್ನೆಗೆ ಒತ್ತಿಕೊಂಡಿದ್ದರೂ ನಂತರ ಚೀಲದೊಳಗೆ ನುಸುಳುತ್ತೆ ... ಪಾಮೋರಿನ್ ಆದಲ್ಲಿ ಸದಾ ನೀರಿನ‌ ಕೊಡದಂತೆ ಆತುಕೊಂಡೇ ಇರಬಹುದು ಅಲ್ಲವೇ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಿನ್ನ ಅಧರಗಳೇಕೋ ಅದುರುತ್ತಿವೆ

ಫೋನಿರುವುದು ವೈಬ್ರೇಟ್ ಮೋಡಲ್ಲೇನೋ

ಭಲ್ಲೆಯವರೆ ಇದೆಂತ 'ಸಿಮಿಲಿ'
ಕಾಳಿದಾಸನನ್ನು ಮೀರಿಸಿದಿರಲ್ಲ ಕನ್ಯೆಯ ಅದರಗಳ ಅದುರಿವಿಕೆಯನ್ನು
ಪೋನಿನ ವೈಬ್ರೇಟ್ ಮೋಡಿಗೆ ಹೋಲಿಸಿ. ಎರಡು ಅಸಂಗತಗಳ ನದುವೆ ಅದ್ಬುತ ಹೋಲಿಕೆ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಇನಿಯನ / ಗೆಳೆಯನ ಫೋನಿನ ಕರೆಗೆ ಕಾದಿರುವ ಸಮಯದಲ್ಲಿ, ಅಧರದಲ್ಲಿ ನವಿರಾದ ಅದರುವಿಕೆ ಇರುವ ಹೊತ್ತಿನಲ್ಲಿ, ವೈಬ್ರೇಟ್ ಮೋಡಿನಲ್ಲಿರುವ ಫೋನ್ ಮೊಳಗಿದಾಗ ಎರಡರ ಅದರುವಿಕೆಯನ್ನು ಊಹಿಸಿದ ಕೂಡಲೇ ಈ ಕವನ ಹುಟ್ಟಿತು :‍)))))

ಅನಂತ ಧನ್ಯವಾದಗಳು ಪಾರ್ಥರೇ .... ಕ್ಲೌಡ್ ಟೆಕ್ನಾಲಜಿಯ ಇಂದಿನ ದಿನದಲ್ಲಿ ನಿಮ್ಮ ಮಾತುಗಳ ಕೇಳಿ, ಸ್ವಲ್ಪ ಜಾಗ ಮಾಡಿಕೊಂಡು cloud 9 ನಲ್ಲಿ ಓಡಾಡುತ್ತಿದ್ದೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಭಲ್ಲೆಯವ್ರೆ ಸಕತ್ ಕಣ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ದ್ಹನ್ಯವಾದಗಳು ಚಿಕ್ಕೂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.