ಇಂದಿನ ಬದುಕು

ಇಂದಿನ ಬದುಕು

ಕವನ

ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು

ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು

ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು

ಅಜ್ಜ ಅಜ್ಜಿಯರ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು

            ನಾಗಾಲೋಟಕೆ ನಲುಗಿ ನರಳುತಿದೆ ಬದುಕು

            ಯಾಂತ್ರಿಕತೆಯಲಿ ಯಂತ್ರವಾಗಿದೆ ಬದುಕು

            ತಾಂತ್ರಿಕತೆಯ ತಂತ್ರದಲಿ ಅತಂತ್ರವಾಗಿ ತತ್ತರಿಸುತಿದೆ ಬದುಕು

            ಆಧುನಿಕತೆಯ ಆರ್ಭಟದಿ ಆತಂಕಗೊಂಡಿದೆ ಬದುಕು

ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆÉ

ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆÉ

ಮುಖವಾಡ ನಿಜಮುಖವ ಮರೆಮಾಚುತಿದೆÉ

ಅಹಮಿಕೆಯ ಹಮ್ಮಿನಲಿ ಎಲ್ಲ ಬರಡಾಗುತಿದೆÉ

ಸಡಗರ ಸಂಭ್ರಮದ ಹಬ್ಬ ಹರಿದಿನಗಳೆಲ್ಲ ಕಣ್ಮರೆಯಾಗುತಿದೆ

ಸಂಸ್ಕೃತಿಯ ಸೊಗಡಿನ ಅಭ್ಯಂಜನ ಿತಿಹಾಸವ ಸೇರುತಿದೆ

ಸಂತಸವನೀವ ಸಹಕಾರ ಸಹಬಾಳ್ವೆ ಮೂಲೆಗುಂಪಾಗುತಿದೆ

ಸಂಯಮದ ಸಭ್ಯಜೀವನಕ್ಕೆ ಎಲ್ಲೆಡೆ ಬೆಲೆಯೇ ಇಲ್ಲವಾಗುತಿದೆ          

ಪರರ ಪರಿಶ್ರಮವ ಪರಿಗಣಿಪರಿಲ್ಲ, ನನ್ನದೇ ಎಲ್ಲಾ ಎನುವರಲ್ಲ è

ಪದವಿ, ಪ್ರತಿಷ್ಟೆ, ಬಿರುದು, ಬಾವಲಿಯ ಹಿಂದ್ಹಿಂದೆ ಬಿದ್ದಿಹರೆಲ್ಲ

ಬಣ್ಣ ಬಣ್ಣದ ಬರಿ ಬಾಯಿ ಮಾತಿಗೆ ಬರಗಾಲವಿಲ್ಲ

ಭ್ರಷ್ಟತೆಯು ಸ್ಪಷ್ಟವಾಗಿದ್ದರೂ ಬಡಿದೊಡಿಪರಿಲ್ಲವೇ ಇಲ್ಲ

ಭಯೋತ್ಪಾದಕರಟ್ಟಹಾಸವ ಅಡಗಿಸುವವರರೂ ಇಲ್ಲವಲ್ಲ

            ಮುತ್ತಿಟ್ಟು ತುತ್ತಿಟ್ಟು ಮುದ್ದಿಸಿದ ಮನವೇನಾಯ್ತು ?

            ಕಷ್ಟ ಸುಖದಲಿ ಇಂಬು ಗೈದಾ ಹೃದಯವೆಲ್ಹೋಯ್ತು 

            ನಮ್ಮವರು ತಮ್ಮವರು ಎಂಬ ವಾತ್ಸಲ್ಯವೇನಾಯ್ತು?

ಅಕ್ಕರೆಯ ನುಡಿ ಕಲಿಸಿ, ಬೆಳೆಸುವ ಪರಂಪರೆಯೆಲ್ಹೋಯ್ತು?     

ಅಹಮಿಕೆಯ ಅಹಂಕಾರ ಅಳಿಯಲೇ ಬೇಕಿಂದು

ಪ್ರೀತಿ ವಾತ್ಸಲ್ಯ ಮಮಕಾರ ಸಹನೆ ಸಹಾನುಭೂತಿಗಳು ಬೇಕಿಂದು

ಶಾಂತಿಯುತ ಸೌಹಾರ್ದ ಸಹಕಾರ ಸಹಬಾಳ್ವೆ ಬೇಕು ನಮಗಿಂದು

ಅದು ಬರುವುದೇ? ಬರುವುದಾದರೆ ಬರುವುದು ಎಂದು ?????

ಅದು ಶೀಘ್ರದಿ ಬರಲೇ ಬೇಕೆಂದು ಆಶಿಸುವೆವು ನಾವಿಂದು.

Comments