24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಲ್ಲಿ ಮಳೆ ಬಂದಿಲ್ಲ

June 20, 2012 - 4:09pm
muneerahmedkumsi

 ಇಲ್ಲಿ  ಮಳೆ  ಬಂದಿಲ್ಲ

ಮೋಡ  ಕವಿದಿದೆ   ಬಿಸಿಲು  ಮೂಡುತ್ತಿದೆ

ನೆಲ  ಬಿರಿದಿದೆ,   ಜಲ  ತಳಸೇರಿದೆ

ಕಾಲ  ಕಳೆಯುತ್ತಿದೆ,  ಭ್ರಮನಿರಸನ  ನೆಲೆಗೊಂಡಿದೆ

ಬೆಲೆ  ಏರುತ್ತಲೇ  ಇದೆ

ಹಸಿವು   ದಾಹ ದ  ಶಕೆ  ಆರಂಭವಾಗಿದೆ.

ಖುರ್ಚಿಯ  ಕನಸ್ಸು,  ಹಣದ  ದಾಹ

ಭ್ರಷ್ಟರ   ಕುಣಿಕೆ

 ಪ್ರಜಾಪ್ರಭುತ್ವಕ್ಕೆ  ಕುತ್ತು  ತಂದಿದೆ,

 ದೇವಮಾನವನ ಅಂಗಳದಲ್ಲಿ

ಕಾಮ ಕಾಂಡ  ಗುಟುರು  ಹಾಕುತ್ತಲೇ  ಇದೆ,

ಶೋಶಿತರ   ನೂವಿನಮೇಲೆ

ಕಾವಿಯ  ಗುಟುರು  ಗುಟುರುತ್ತಿದೆ.

ದೆವಮಾನವನ  ದರ್ಪ,ಕಪ್ಪದ

ಹಗಲುಕನಸ್ಸು  ಕಾಣುವವರಲ್ಲಿ

ಕಾವಿ ಶ್ರದ್ಧೆಯು

ಮೂಢತೆಗೆ  ನಮನಿಸುತ್ತಿದೆ.

ಮಳೆ  ಬಾರದ  ಬವಣೆಗೆ  ದುರಾಹಂಕಾರ  ಮದ್ದಾಗಿದೆ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by H A Patil on
ಮುನೀರ ಅಹಮ್ಮದ್ ರವರೆ ವಂದನೆಗಳು. ' ಇಲ್ಲಿ ಮಳೆ ಬಂದಿಲ್ಲ ' ಬಹಳ ಚೆನ್ನಾಗಿ ಮೂಡಿ ಬಂದಿದೆ, ಮಳೆ, ಪ್ರಜಾಪ್ರಭುತ್ವ ಎಲ್ಲ ರಂಗಗಳಲ್ಲಿಯ ನೈತಿಕ ಅಧಃಪತನವನ್ನು ಸರಳವಾಗಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದೀರಿ. ದಿನದಿಂದ ದಿನಕ್ಕೆ ನೀವು ಪಕ್ವ ಬರವಣಿಗೆ ಯೆಡೆಗೆ ಸಾಗಿದ್ದೀರಿ. ಬರ್ವಣಿಗೆಯಲ್ಲಿಯ ಗಟ್ಟಿಗೊಳ್ಳುವಿಕೆ ಹೀಗೆಯೆ ಮುಂದುವರಿಯಲಿ.

Submitted by SRINIVAS.V on
ನಿಮ್ಮ ಕವನ ಸದ್ಯದ ಪರಿಸ್ತಿತಿ ಯಾ ಚಿತ್ರಣ ಹಾಗು ನಿಮ್ಮಲ್ಲಿ ರು ವ ಸಾಮಾಜಿಕಾ ಕಳಕಳಿ ಎರಡರ ಸಮ್ಮಿಲನ ವಾಗಿದ್ದು ..........ಸರಳ ವಾಗಿ ಚಿತ್ರಣ ವಾಗಿದೆ ......... ನಿಮ್ಮಲ್ಲಿರು ಸಾಮಾಜಿಕ ಕ್ರಾಂತಿಯ ಮನೋವೇದನೆ ಯಾ ಪ್ರತಿ ಬಿಮ್ಭ........ಈ ಕವನದ ಆಶಯ ವಾಗಿದೆ ............ನಿಮ್ಮ ಪಯಣ ಇಗೆ ಸಾಗಲಿ ...ದುರಳರಿಗೆ ಸಿಂಹ ಸ್ವಪ್ನ ವಾಗಲಿ ....