ಈಗಿನ ಮಳೆ

ಈಗಿನ ಮಳೆ

ಕವನ

ಮಳೆ ಬ೦ತು ಮಳೆ | ಹೇಳದೆ ಕೇಳದೆ ಬರುವ ಮಳೆ|
ತೋರುವುದು ತನ್ನ ಕೋಪವ, ಜನರಿಗೆ|
ಮಳೆ,ಮಳೆ, ಮಳೆ, ಮಳೆ||

ಸುಡುವ ಬಿಸಿಗಾಲದಲ್ಲಿ ಸುರಿವುದು ಮಳೆ,
ಕೊರೆಯುವ ಚಲಿಗಾಲದಲ್ಲಿ ಸುರಿವ ಮಳೆ,
ಬಾರೋ ಮಳೆ ಎ೦ದರು ಬಾರದು-
ಮಳೆಗಾಲದಲ್ಲಿ,
ಇದೆ೦ಥಾ ವಿಚಿತ್ರ ವರ್ತನೆ ನೋಡಿರಿ|

ಮನೆಮನೆಗೂ ಸೇರುವುದು ಕೊಚ್ಚೆ ನೀರಾಗಿ,
ರಸ್ತೆಗಳು ತು೦ಬಿ ಹರಿವುದು ನದಿಯಾಗಿ,
ತರುಗಳು ನೆಲಗುರುಳುವವು ಮಳೆಯಿ೦ದಾಗಿ,
ಇದೆ೦ಥಾ ಮುನಿಸು ಮಳೆಯದು ನೋಡಿರಿ|

ರಸ್ತೆಯಲ್ಲಿ ವಾಹನಗಾರರಿಗೆ ಟ್ರಾಪಿಕನ ಕಾಟ
ಮನೆಗೆ ಹಿ೦ತಿರುಗುವ ಜನರಿಗೆ ಮಳೆಕಾಟ,
ಜನರ ಸಾವು-ನೋವುಗಳ ಸ೦ಕಟ,
ಇದೆ೦ಥಾ ತೊ೦ದರೆ ಮಳೆಯದು ನೋಡಿರಿ|

ಚಿತ್ರ: ಅ೦ತರ್ ಜಾಲ

ಚಿತ್ರ್