ಎರಡನೇ ಡಿಕಾಕ್ಷನ್ ಕಾಫಿ!!!

ಎರಡನೇ ಡಿಕಾಕ್ಷನ್ ಕಾಫಿ!!!

ಕವನ

ನಿ೦ತಲ್ಲೇ ನಲುಮೆಯನು

ಚಿತ್ರಿಸಿದ ನೆನಪುಗಳು
ಕನಸುಗಳಿಗಿ೦ತಲೂ ಬಹುರೂಪಿ,
ನಲುಮೆಗೆ೦ದೇ 
ನೋ೦ದಾಯಿಸಿದ ನ೦ಬರ್ರಿಗೆ
ಕರೆನ್ಸಿ ಹಾಕಿಸಿದವ
ಪುರುಷ ಪಾಪಿ...
ಎಷ್ಟೇ ಆದರೂ,
ಒಲವೆ೦ಬುದು ಸಕ್ಕರೆಭರಿತ,
ಸ್ವಾದರಹಿತ
ಎರಡನೇ ಡಿಕಾಕ್ಷನ್ ಕಾಫಿ!!

ನನ್ನ ಜಾಯಮಾನದ ನಿಲುವು,
ಅವಳ ಅಪೇಕ್ಷೆಗಳ ಹಲವು.
ನುಗ್ಗಿ ಬರುವ
ಹಸಿರು ನಿಶಾನೆಯ ವಾಟ್ಸಪ್ಪಿಗೆ,
ಕಾಮಾಲೆ ರೋಗದ ಕಣ್ಣುನೋವು.
ಸ೦ದೇಹಗಳ ಪುಗಸಟ್ಟೆ
ರವಾನೆಯಿದು,
ತೆರಿಗೆ ಊಫಿ.
ಒಲವೆ೦ಬುದು ಸಕ್ಕರೆಭರಿತ,
ಸ್ವಾದರಹಿತ
ಎರಡನೇ ಡಿಕಾಕ್ಷನ್ ಕಾಫಿ!!!

--ಸಾತ್ವಿಕ್ ಹ೦ದೆ