19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲೆಲ್ಲೂ ನೀನೇ

December 22, 2010 - 3:54pm
Radhika

ಬಿಳಿಯ ಬೋಳು ಗೋಡೆಯಲ್ಲು
ಮೆಟ್ಟಿಲಿ ಛಾವಣಿಗಳಲ್ಲು
ತಟ್ಟೆ ಲೋಟ ಅನ್ನದಲ್ಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ

ಹಾರುವಾ ಹಕ್ಕಿಗಳಲು
ಮಿನುಗುವಾ ಚುಕ್ಕಿಗಳಲು
ಅರಳುತಿರುವ ಮೊಗ್ಗುಗಳಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ

ಹರಿವ ನೀರ ಜುಳುವಿನಲ್ಲು
ಕರುವ ಮುದ್ದು ಕುಣಿತದಲ್ಲು
ಬಿರಿವ ಚಳಿಯ ಕೊರೆತದಲ್ಲು
ನೀನೇ ಮೂಡುವೆ
ನಾ ನಿನ್ನೇ ಕಾಣುವೆ

ಕೋಪದಲ್ಲು ಪ್ರೀತಿಯಲ್ಲು                 
ಅಳುವಿನಲ್ಲು ನಗುವಿನಲ್ಲು
ಸತ್ ಚಿತ್ ಆನಂದದಲ್ಲು
ನಿಂದೇ ಧ್ಯಾನವೇ
ಸದಾ ನಿಂದೇ ಪ್ರೇಮವೇ.

ಶಬ್ದದಲ್ಲು ಬೆಳಕಿನಲ್ಲು
ಸ್ಪರ್ಶದಲ್ಲು ಸ್ವಾದದಲ್ಲು
ತುಡಿತದೆದೆಯ ಬಡಿತದಲ್ಲು
ನೀನೇ ಮಿಡಿದಿಹೆ
ನೀ ನನ್ನೇ ಸೆಳೆದಿಹೆ

ರಕ್ತದಲ್ಲು ಪ್ರಾಣದಲ್ಲು
ದೇಹದಲ್ಲು ಆತ್ಮದಲ್ಲು
ಸಕಲ ಜೀವನಾಡಿಯಲ್ಲು
ನೀನೇ ಬೆರೆತಿಹೆ
ನೀ ನನ್ನೇ ಮರೆಸಿಹೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on
ಈ ರೀತಿಯಾಗಿ ದೇವರ ಸಾಕ್ಷಾತ್ಕಾರವಾಗಿ, ಆತನ ಇರುವನ್ನು ಎಲ್ಲೆಡೆ ಅನುಭವಿಸಿದರೆ, ಇನ್ನೇನು ಬೇಕು ಹೇಳಿ. :)

Submitted by raghumuliya on
ಕವನದ ಪ್ರತಿ ಶಬ್ದದಲ್ಲೂ ಏನೋ ಮೋಡಿಯು ಅಹ ಏನೋ ಮೋಡಿಯು. ಯಾರ ಸಾಕ್ಷಾತ್ಕಾರವಿದು?

Submitted by Radhika on
ಪ್ರತಿಕ್ರಿಯಿಸಿದ ಅಸು ಹೆಗ್ಡೆಯವರೇ, ಜಯಂತ್ ರವರೇ, ರಘು ಅವರೇ ಎಲ್ಲರಿಗೂ ನನ್ನ ಧನ್ಯವಾದಗಳು :) ಇದನ್ನು ನಿಮಗೆ ಅತ್ಯಂತ ಪ್ರಿಯವಾದುದರ ಸಾಕ್ಷಾತ್ಕಾರವೆಂದುಕೊಳ್ಳಿ.. ಇದು ಒಂದು frame ರೀತಿಯ ಕವನ ಬರೆಯುವ ಪ್ರಯತ್ನ. Frame ನಲ್ಲಿ ನಿಮಗಿಷ್ಟವಾದುದರ ಯಾವ photo ಬೇಕಾದರೂ ಹಾಕಿಕೊಂಡು ಮತ್ತೊಮ್ಮೆ ಇದನ್ನು ಓದಿ :)