July 5, 2012 - 4:30pm
ಏನೆಂದು ನಾ ಹೇಳಲಿ ನೀ ನನ್ನಲಿ
ಏನೆಂದು ನಾ ಹೇಳಲಿ
ಭಾವವು ನೀನೆ ಭಾವನೆ ನೀನೆ
ಕಾವ್ಯವು ನೀನೆ ಕವನವು ನೀನೆ
ಜೀವವು ನೀನೆ ಜೀವಾತ್ಮನು ನೀನೆ :
ಬಾನಲಿ ಬೆಳಗುವ ಚಂದಿರ ನೀನೆ
ನನ್ನೆದೆ ಬೆಳಗುವಾ ದೀಪವು ನೀನೆ
ಉಸಿರಲ್ಲೂ ನೀನೆ ಉಸಿರೇ ನೀನೆ :
ಮಂಜು ನೀನೆ ಮುಂಜಾನೆ ನೀನೆ
ತಿಂಗಳು ನೀನೆ ಬೆಳದಿಂಗಳು ನೀನೆ
ಜಗವೆಲ್ಲಾ ನೀನೆ ಜಗದಾತ್ಮನು ನೀನೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




