ಏನೋ ಹೇಳಬೇಕು, ಹೇಳಲೇನು?

ಏನೋ ಹೇಳಬೇಕು, ಹೇಳಲೇನು?

ಕವನ

ಏನೋ ಹೇಳಬೇಕು, ಹೇಳಲೇನು? ಏನೋ ಹೇಳಬೇಕು, ಹೇಳಲೇನು?

 

ಮನದಲ್ಲಿರೋ ಆಸೆ ಅದೇನೋ, ಕಣ್ಣಲ್ಲಿರೋ ಕಾತಾರಾ ಅದೇನೋ

ಗೊತ್ತಿರದ ಮಾತು ಅದೇನೋ , ಹೇಳಲೇಂದು  ಬಂದೆ ಅದೇನೋ

 

ಏನೋ ಹೇಳಬೇಕು, ಹೇಳಲೇನು?

 

ನಿನ್ನನ್ನು ಕಂಡ ಕ್ಷಣದಲ್ಲಿ ಅದೇನೋ, ಮಾತು ಮೌನಕ್ಕೆ ಶರಣಾಗಿದೆ ಅದೇಕೋ

ಹೇಳಬಯಕೆ ನೂರೆಂಟು ಮಾತೇನೋ, ಹೇಳಹೋರಟರೆ ಪದಗಳೇ ಇಲ್ಲವೇನೋ,

ಏಕಿಂತ ಚಡಪಡಿಕೆ ಅದೇನೋ, ಏಕಿಂತ ಹವಣಿಕೆ ಅದೇಕೋ

ಬಯಕೆಗೆ ಬಲೆ ಅದೇಖೊ, ಹುಡುಕುವ ಆಸೆ ಮತ್ತೆನೋ 

 

ಏನೋ ಹೇಳಬೇಕು, ಹೇಳಲೇನು?

 

ಇರುಳಲ್ಲಿ ಸೂರ್ಯ ಮಂಕೆತಕೋ, ಹಗಲಲ್ಲಿ ಚಂದಿರನ ಅಳುಕೆಕೋ,

ಅರಳುವ ಹೂವಲ್ಲಿ ಭಯವೇಕೋ, ಉಕ್ಕುವ ಅಲೆಯಲ್ಲಿ ಛಲವೇಕೋ,

ಹಂಬಲವು ಅದುವೇ ಏನೋ, ಭಯದ ಬಾರವೇನೋ,

ಇರುವುದು ನನ್ನಲ್ಲಿ ಹಾಗೇನೋ, ಅರಿಯೇ ನಾನು,

 

ಏನೋ ಹೇಳಬೇಕು, ಹೇಳಲೇನು?

 

ಕ್ಷಮಿಸು ತಪ್ಪಿದ್ದರೆ ನನ್ನನ್ನು , ಅಳಿಕಿಲ್ಲದೆ ಹೇಳಲಾರೆ ಎನ್ ಇದನ್ನು,

ಮಾತಿಂದು ನೀ ತೊದಲದಿರು, ಏನೇ ಹೇಳಿದರು,

ಕಣ್ಣಿನ ಭಾಷೆ ನೀ ಅರಿಯೇನು, ಮಾತೊಂದು ಎನ್ ಹೇಳಬೇಕು ಹೇಳಲೇನು,

 

ಮತ್ಯೇಕೋ ಬೇಡವಂತೆ ಮನಸಿಂದು ಹೇಳಿದೆ ಅದೇಕೋ,

ಕರಗಿ ಹೋಗುವುದೊ ನಮ್ಮ ಭಾಂದವ್ಯ , ಅದರ ಭಯವೇನೋ,

ಇರಲಿ  ನನ್ನಲ್ಲಿ ಈ ಮಾತು , ಇಂದು , ಏದೆಂದು,,

ಕಾಡುವುದು ಕೊನೆವೆರೆಗು ನಾನೇಕೆ ಹೇಳಲಾರೇನು 

 

ಏನೋ ಹೇಳಬೇಕು ನಾನೆಂದು ಹೇಳಲಾರೇನಾ ?