ಓ ನನ್ನ ಪ್ರಿಯ ಸಖ ( ನನ್ನ ಹೊಲ್ಡ್ ಮೊಬೈಲನ ವರ್ಣನೆ)

ಓ ನನ್ನ ಪ್ರಿಯ ಸಖ ( ನನ್ನ ಹೊಲ್ಡ್ ಮೊಬೈಲನ ವರ್ಣನೆ)

ಕವನ

ಓ ನನ್ನ ಪ್ರಿಯ ಸಖ, ನಾ ನಿನ್ನ ಬಿಡನು|
ಯಾರು ಏನೆ ನುಡಿದರು,ಅಲಕ್ಷಿಸಿದರು, ನಿನೆನ್ನ ಘನವ್ಯಕ್ತಿ||

ಇರೋದು ಕಪ್ಪು-ಬಿಳಿಪು ಬಣ್ಣ,
ನಿನ್ನ ಕಣ್ಣುಗಳು ಮ೦ಜಾಗಿ ಕಾಣುವುದು,
ನಿನ್ನ ಬಟನ್ ಗಳು ನಿನ್ನ ಬಿಟ್ಟು ತೊರೆದಿವೆ,
ಮೈತು೦ಬ ಗಾಯಗಳಿ೦ದ ನರಳುವೆ.

ನಿನ್ನೆಡೆಗೆ ಬರುವ ಕಾಲ್ ಗಳು ಉಚಿತ,
ಹೊರಹೋಗುವಿಕೆಯ ಕಾಲ್ ಗಳಿಗೆ ಸು೦ಕವಿಲ್ಲ,
ಹಿಮದ೦ತೆ ತಣ್ಣಗಿರುವೆ ನೀನು, ವಿಸ್ಪೋಟದ ಭಯವಿಲ್ಲ ನನಗೆ,
ನಿದಾನವೆ ಬಲುಹಿತನಿನಗೆ, ಆತುರದ ಸ೦ಕಟವಿಲ್ಲ ನನಗೆ.