ಈ ದೃಶ್ಯ 'ಮುಂಬೈನ ಮಹಾಲಕ್ಷ್ಮಿ ದೇವಾಲಯ'ದ ಬದಿಯಲ್ಲಿರುವ 'ಹಾಜಿ ಆಲಿ'ಯೆಂಬ ಸಮುದ್ರದ ದಡದಲ್ಲಿರುವ ದರ್ಗದ ಹತ್ತಿರ. ಸಮುದ್ರದ ಅಲೆಗಳು ಹಿಂದೆ ಹೋಗಿವೆ. ದಡದಲ್ಲಿ ಮರಳು ತುಂಬಿದೆ. ಆದರೆ ನಗರ ಮಾಲಿನ್ಯವೆಲ್ಲಾ ಸಮುದ್ರಕ್ಕೆ ಚೆಲ್ಲುವ ಪರಿಪಾಠವಿರುವುದರಿಂದ ಉಪಚರಿಸಿದ ಮಾಲಿನ್ಯದ ಜೊತೆಗೆ ಬೇರೆ ಹಲವಾರು ಬಗೆಯ ಮಲಿನ ತ್ಯಾಜ್ಯವಸ್ತುಗಳು ಕಡಲಿನಲ್ಲಿ ಬೆರೆತು, ಅವುಗಳು ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದು ಬೀಳುತ್ತವೆ. ಅದೇ ಮತ್ತೊಂದು ಬಗೆಯ ಮಾಲಿನ್ಯ ಸಮಸ್ಯೆಗೆ ಎಡೆಮಾಡಿಕೊಡುತ್ತವೆ. ಈಗಲಂತೂ ಸಮುದ್ರಲ್ಲಿ ಹಡಗುಗಳಿಂದ ಸೋರಿ ಚೆಲ್ಲಿದ ಪೆಟ್ರೋಲಿಯಮ್ ಎಣ್ಣೆಯ ಮಲಿನತೆ ಅಪಾರವಾಗಿದೆ. ಕೆಲವು ಹಡಗುಗಳು ಕಳ್ಳ-ತಪ್ಪಿಸಿಕೊಂಡು ಮುಂಬೈ ಇಲ್ಲವೇ ಮಂಗಳೂರಿನ ಕಡಲ ತೀರದಲ್ಲಿ ಬಂದು ನಿಂತು, ಅಪಾರ ರಾಶಿಯ ತ್ಯಾಜ್ಯವಸ್ತುಗಳನ್ನು ಚೆಲ್ಲಿ ಪ್ರದೇಶವನ್ನು ಕಲುಶಿತಮಾಡುತ್ತಿವೆ.
ಇದನ್ನು ಕಂಡುಕೊಂಡು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಮೀಡಿಯಾದವರು ದೇಶದಾದ್ಯಂತ ಬೊಬ್ಬೆ ಹೊಡೆದನಂತರವೂ ನಮ್ಮ ಅಧಿಕಾರಿಗಳು ನಿದ್ದೆಯಿಂದ ಮೇಲೇಳುವುದು ಕಷ್ಟ. ಅದರ ಬಗ್ಗೆ ವಿಚಾರಿಸಿಕೊಳ್ಳುವುದು ಅದ್ಯಾವಾಗಲೋ, ಹೇಳೋರು ಕೇಳೋರು ಇಲ್ಲದ ತರಹದ ಸಂಗತಿಯಿಂದ ಜನತೆ ಕಂಗೆಟ್ಟಿದೆ. ಎಲ್ಲರಿಗಿಂತ ಮೊದಲು ಹೆಚ್ಚು ನೋವು ಅನುಭವಿಸುವವರು, ಸಮುದ್ರದ ಹತ್ತಿರ ಜೀವಿಸುವ ಕೋಳಿಗಳು ; ಮೀನು ಹಿಡಿದು ಮಾರಿ-ಜೀವಿಸುವ ಜನಸಮುದಾಯ ! ಸಾಯಂಕಾಲದ ಹೊತ್ತಿಗೆ ಸಮುದ್ರದ ನೀರು ಏರುತ್ತಾ ಬಂದು ದರ್ಗಕ್ಕೆ ಹೋಗುವ ದಾರಿಯೂ ಮುಳುಗಿಹೋಗುತ್ತದೆ.
ಇತ್ತಿಚೆಗೆ ಜುಹು ಬೀಚ್ ನಲ್ಲಿ ಎಮ್. ವಿ. ರಾಕ್ ಕ್ಯಾರಿಯರ್ ಎಂಬ ೭೨೨ ಅಡಿ ಉದ್ದದ ಜಹಜು ಹೋದವಾರ ಬಂದು ನಿಂತು ಅದರಲ್ಲಿನ ಸುಮಾರು ೧೦೦ ಟನ್ ಪೆಟ್ರೊಲಿಯಮ್ ತೈಲವೆಲ್ಲಾ ಸೋರಿಹೋಗಿ ಸಮುದ್ರದ ನೀರಿನಲ್ಲಿ ಬೆರೆತಿದೆ. ಅದು ಹಾಗೆಯೆ ಬಾಂದ್ರ, ಥಾಣೆ, ಮತ್ತು ಊರಣ್ ತಟಗಳಲ್ಲೂ ವ್ಯಾಪಿಸಿ ಅಲ್ಲಿನ ಜಲಚರಗಳನ್ನು ನಾಶಮಾಡುತ್ತದೆ. ಈಗಾಗಲೆ ನಗರದಲ್ಲಿರುವ ಸಮುದ್ರ ತಟಗಳಾದ ದಾದರ್, ಹಜಿ ಅಲಿ, ಮುಂತಾದ ಭಾಗಗಳನ್ನು ಈ ತೈಲಮಾಲಿನ್ಯ ಅವರಿಸಿದೆ. ೧೨ ನಾಟಿಕಲ್ ಮೈಲಿ ಸಮುದ್ರ ಕಲುಶಿತವಾಗಿದೆಯೆಂದು ಮೆರೀನ್ ಶಾಸ್ತ್ರಜ್ಞರು/ನಿಪುಣರು ವರದಿಮಾಡಿದ್ದಾರೆ. ತೈಲ ಹೊರಗೆ ಬರುವುದರ ಜೊತೆಗೆ ಹಲವಾರು ಹಾನಿಕಾರಕ ಕೆಮಿಕಲ್ಸ್ ಗಳೂ ಹೊರಹೊಮ್ಮುವ ಸಾಧ್ಯತೆಗಳೂ ಕಂಡುಬಂದಿವೆ. ಆದ್ದರಿಂದ ಎಮ್. ವಿ. ರಾಕ್ ಕ್ಯಾರಿಯರ್ ನಂತಹ ವೆಸೆಲ್ ಗಳ ಮಾಲೀಕರು ಹೆಚ್ಚು ದಂಡವನ್ನು ಕೊಡಬೇಕೆಂದು ಮನವಿಸಲ್ಲಿಸಲಾಗಿದೆ. ೧೯೯೬ ನಿಂದ ೨೦೦೮ ರ ವರೆಗೆ,
ಈ ತರಹ ೬೮ ಬಾರಿ ವಿದೇಶಿ ಜಹಜುಗಳು ಭಾರತದ ಸಮುದ್ರವಲಯದಲ್ಲಿ ತಮ್ಮ ತ್ಯಾಜ್ಯವಸ್ತುಗಳನ್ನು ಹೊರಚೆಲ್ಲಿದ್ದಾರೆ. ಇದನ್ನು ನಮ್ಮ ಸರ್ಕಾರ ತೀವ್ರತೆಯಿಂದ ಪ್ರತಿರೋಧಿಸಿ ತಕ್ಕ ಕ್ರಮಗಳನ್ನು ತೆಗೆದುಕೊಂಡು ನಮ್ಮ ಕಡಲನ್ನು ಸ್ವಚ್ಛಗೊಳಿಸಬೇಕಾಗಿದೆ !









ಪ್ರತಿಕ್ರಿಯೆಗಳು
ಉ: ಕಡಲ ಅಲೆಗಳು ಹಿಂದೆ ಸರಿದಾಗ !
ಹಜಿ ಅಲಿ ಸುಂದರ ಸ್ಥಳ. ಒಮ್ಮೆ ಹೋಗಿದ್ದೇನೆ. ಸಚ್ಛತೆಯೊಂದಿಲ್ಲ, ಅಷ್ಟೇ!! :(
ಉ: ಕಡಲ ಅಲೆಗಳು ಹಿಂದೆ ಸರಿದಾಗ !
ಪೂಜಾ ಸ್ಥಳಗಳಲ್ಲಿ ಮಸೀದಿಯಿರಲಿ, ದೇವಾಲಯ ಮುಂತಾದ ಕಡೆ ಭಿಕ್ಷುಕರು, ಫೇರೀವಾಲಾಗಳು, ಹಾಗೂ ಕಸವನ್ನು ಎಲ್ಲಂದರಲ್ಲಿ ಎಸೆಯುವ ನಮ್ಮ (ಅ)ನಾಗರಿಕರು ಈ ತರಹದ ಕೆಟ್ಟ ವಾತಾವರಣಕ್ಕೆ ಕಾರಣಕರ್ತರು. ಮುನಿಸಿಪಾಲಿಟಿ ತನ್ನ ಕೆಲಸವನ್ನೇ ಮಾಡದಿರುವುದು ಮುಂಬೈನ ಈ ತರಹದ ದುರಂತಕ್ಕೆ ಬಹುಮಟ್ಟಿಗೆ ಕಾರಣ. ಈಗ ಸ್ವಚ್ಚತೆಯ ಕೆಲಸವನ್ನು ಖಾಸಗಿಯವರಿಗೆ ಗುತ್ತಿಗೆ ಕೊಟ್ಟಿರುವುದರಿಂದ ಸ್ವಲ್ಪ ಉತ್ತಮವಾಗಿದೆ !
ಉ: ಕಡಲ ಅಲೆಗಳು ಹಿಂದೆ ಸರಿದಾಗ !
ಆಹಾ..
ಕಡಲ ಅಲೆಗಳು ಇನ್ನೂ ಹಿಂದಕ್ಕೆ ಸರಿಯಲಿ..
ಜುಹೂ ಬೀಚಿನಿಂದಲೂ ಹಿಂದಕ್ಕೆ ಸರಿಯಲಿ..
ಮುಂಬೈಯಿಂದಲೂ..
ಪರಿಸರ ಅಂತೆ ಪರಿಸರ
ಜನಕ್ಕೆ ಉಳಕೊಳ್ಳಲು ಮನೆ ಇಲ್ಲಾ..
ಸ್ಕ್ವೇರ್ ಫೀಟ್‌ಗೆ ರೇಟ್ ಎಷ್ಟಿದೆ ಗೊತ್ತಾ..
ಸೈಟ್ ಮಾಡಿ ಬಡಜನತೆಗೆ ಹಂಚಿದರೆ ಆಯಿತು. :)
-ಸರ್ಕಾರ(೨ಜಿ..ಇತ್ಯಾದಿ ಹಗರಣದ ಹೋರಾಟದಲ್ಲಿ ಮಗ್ನವಾಗಿರುವುದರಿಂದ)ದ ಕಡೆಯಿಂದ ಗಣೇಶ.
ಉ: ಕಡಲ ಅಲೆಗಳು ಹಿಂದೆ ಸರಿದಾಗ !
ಗಣೇಶ್,
ನಿಮ್ಮ ಆವೇಶದ ಬಡಜನರಹಿತದ ಮಾತುಗಳು ಸರಿ. ಆದರೆ, ಹಿಂದೆ ತಳ್ಳಿದ ಅಥವಾ ಕ್ಷಣಿಕವಾಗಿ ಸರಿದ ಅಲೆಗಳ ಬಗ್ಗೆ ನೀವು ಕಾಳಜಿ ತೋರಿಸುತ್ತಿಲ್ಲ. ಸ್ವಲ್ಪ ಭೂಭಾಗದ ಸುತ್ತಮುತ್ತ ಬೆಳೆದಿರುವ ಮುಂಬೈ ಆ ಜಾಗಗಳಲ್ಲೂ ಬೆಳೆಯಬಾರದು ಅನ್ನುವುದನ್ನು ನೀವು ಪ್ರೋತ್ಸಹಿಸಿ. ಈಗಾಗಲೇ ಆಗಿರುವ ಇಕ್ಕಟ್ಟು ಜನಜಂಗುಳಿ ತಪ್ಪಿ ನಗರ ಉತ್ತರಾಭಿಮುಖವಾಗಿ ಬೆಳೆಯಲು ನೀವು ಆಶಿಸಿ. ಸಮುದ್ರವನ್ನು ಆಕ್ರಮಿಸಿಯೋ ಅಥವಾ ಅದನ್ನು ದೂರಕ್ಕೆ ತಳ್ಳಿಯೋ ಅಲ್ಲ. ಬ್ಯಾಕ್ ಬೇ ರಿಕ್ಲಮೇಶನ್ ನಲ್ಲಿರುವ ನಿವೇಶನಗಳ ಮನೆಯ ಬೆಲೆಗಳು ನಿಮಗೆ ಗೊತ್ತಿರಬಹುದು. ಅವೇನೇ ಆದರೂ ಇಂತಹ ಬೆಳವಣಿಗೆಗಳಲ್ಲಿ ಜಾಗ ಗಿಟ್ಟಿಸುವವರು, ಮತ್ತೆ ರಾಜಕಾರಣಿಗಳು ಮತ್ತು ಧನವಂತರೇ. ಬಡವರಿಗೆ ಅವು ಕನಸೇ ಸರಿ. ಇದು ನಿಮಗೆ ಈಗಾಗಲೇ ಇಂದಿನದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ಮನವರಿಕೆಯಾಗಿರಬಹುದು !
ನನ್ನ ಲೇಖನ ಮೂಲ ಉದ್ದೇಶ, ನಮ್ಮ ದೇಶದ ಕಡಲನ್ನು ಮಲಿನಮಾಡಲು ಏಕೆ ಬಿಡುತ್ತಿದ್ದೀರಿ ಎನ್ನುವ ಪ್ರಶ್ನೆಯನ್ನು ಕುರುತು ! 'ಕಡಲು ರಕ್ಷಣಾ ತಂಡ' ಎನ್ಮಾದ್ತಿದೆ ? ರಾಜ್ಯ ಸರಕಾರ ಏಕೆ ನಿದ್ದೆ ಮಾಡ್ತಿದೇ (ವೆ) ?
ಉ: ಕಡಲ ಅಲೆಗಳು ಹಿಂದೆ ಸರಿದಾಗ !
ನಮ್ಮದೇಶದ ಕಡಲ ತೀರಗಳು ಡಂಪಿಂಗ್ ಗ್ರೌಂಡೇ ? ಮೊನ್ನೆ ಶ್ರೀಲಂಕಾದ ಹಡಗು ಬಂದು ತನ್ನ ಕೆಟ್ಟ ತೈಲವನ್ನೆಲ್ಲಾ ನಮ್ಮ ಕಡಲ ತಟದಲ್ಲಿ ಸುರಿಸಿ ಸುಮಾರು ದಿನ ಇದ್ದು ಹೋಯಿತು. ಹೀಗೇ ಆದರೆ ಗತಿ ಏನು. ಭಾರತವನ್ನು ಸುಲಿಗೆಮಾಡಲು ಸವಿರಾರು ವರ್ಷಗಳಿಂದ ಹೊರಗಿನವರು ಬರ್ತಾನೇ ಇದಾರೆ. ಈಗ ಈ ವಿಪರ್ಯಾಸ !
ಸ್ವಾತಂತ್ರ್ಯ ದಿನ ಬಂತಪ್ಪ. ಇನ್ನೇನು ತಮ್ಮ ಸುಳ್ಳು, ವಂಚನೆ ಅನಾಗರೀಕ ವರ್ತನೆಗಳ ಬಾವುಟ ಹಾರಿಸಿದ್ದೇ ಹಾರಿಸಿದ್ದು. ಎಲ್ಲಜನರಿಗೆ ತಮಾಷೆಯ ಬೊಂಬೆಯಾಗಿರುವ ಭಾರತ ಬರಿ ರಿಪಬ್ಲಿಕ್ ದಿನವೋ ಅಥವಾ ಸ್ವಾತಂತ್ರ್ಯ ದಿನವೋ ಢಂಬಾಚಾರದಿಂದ ಸಂಭ್ರಮ ಆಚರಿಸುವುದನ್ನು ಕಂಡರೆ ಮೈಕೈ ಹರಿಯುವಂತಾಗುತ್ತದೆ. ಮುಜುಗುರ ಆಗಲ್ವೇ ?? ಎಷ್ಟು ಅಭಿಮಾನ ಶೂನ್ಯದೇಶ ನಮ್ಮದು !? ಅಯ್ಯೋ ಅಯ್ಯೋ, ನಮ್ಮ ತಲೆ ಚಚ್ಚಿಕೊಳ್ಳ ಬೇಕಷ್ಟೆ.