ಕಲಾಂ...ಹನಿಗಳ‌ ಸಲಾಂ

ಕಲಾಂ...ಹನಿಗಳ‌ ಸಲಾಂ

ಕವನ

(1)

ಮಗುವಿನ ಮುಗ್ಧ ನಗುವಿಗೆ

ವ್ಯಾಖ್ಯಾನ ಹುಡುಕುತ್ತ ಹೋದೆ

ಸಿಗಲಿಲ್ಲ ಎಲ್ಲೂ,

ಕಲಾಂ ಸಾಹೇಬರ‌

ನಗೆಯ ಮೊಗವ ನೋಡಿದೆ

ವ್ಯಾಖ್ಯಾನ ಗೋಚರಿಸಿತು ಎಲ್ಲೆಲ್ಲೂ.

(2)

ಮಾನವಂತ‌ನಾಗಿ

ಬದುಕುವ ಮಾನವನಿಗೆ

ಜಾತಿ,ಧರ್ಮ‌,ಪಂಥಗಳು

ಬೇಕೆ?

"ವಿಶ್ವಮಾನವ‌" ಸಂದೇಶವನ್ನು

ರಾಷ್ಟ್ರಕವಿ ಕುವೆಂಪುರವರು,

"ಕಲಾಂ"ರಂಥ ಮಾದರಿ ವ್ಯಕ್ತಿತ್ವವನ್ನು

ಅಂದು ಕಲ್ಪಿಸಿಕೊಂಡು

ಹೇಳಿರಬೇಕು.

(3)

ಕನಸಿನಲ್ಲಿ ಬಂದು

ಕಲಾಂರವರು

"ನನ್ನಂತೆ ಆಗು" ಎಂದು

ಹೇಳಲಿಲ್ಲ‌,

ಕನಸು ಕಂಡಿದ್ದು ನಿಜ‌,

"ಗುರಿಯ ಬೆನ್ನಟ್ಟಲು

ಕಠಿಣ ಪರಿಶ್ರಮ ಪಡು"

ಎಂದು ಹೇಳಿದ್ದು ನಿಜ‌.

ಚಿತ್ರ್