August 14, 2012 - 6:03pm
ಕಳೆದವು ವಸಂತಗಳು ಅರವತ್ತೈದು
ನಮ್ಮನ್ನಾಳುತ್ತಿದ್ದ ಪರಕೀಯರು ನಮ್ಮನ್ನು ತೊರೆದು
ನಮ್ಮದೇ ಸ್ವಾತಂತ್ರ್ಯವನ್ನು ನಮಗೆ ಬಿಟ್ಟುಕೊಟ್ಟು...(ಕಳೆದವು)
ನಮ್ಮ ನಾಡಿನ ಸಿರಿ ಸಂಪತ್ತು
ಸ್ವಾಭಾವಿಕ ಸಂಪತ್ತನ್ನು ದೋಚಿ ನಾಶಮಾಡಿ
ಆಳಿದರು ವರುಷಗಳ ಕಾಲ ದಬ್ಬಾಳಿಕೆಯಿಂದ ಆ ಪರಕೀಯರು...
ಅವರು ಹಾಕಿಕೊಟ್ಟ ಹಾದಿಯಲ್ಲೇ
ನಡೆಯುತಿಹರು ನಮ್ಮಯ ರಾಜಕಾರಣಿಗಳು
ದೋಚುತಿಹರು ನಮ್ಮದೇ ಹಣವ ಹಗರಣಗಳ ಮೂಲಕ...
ಹರಿದವು ನೆತ್ತರು ಕಾಲುವೆಯಂತೆ ಅಂದು
ಹೊಡೆದೋಡಿಸಲು ಆ ಮದವೆತ್ತಿದ ಪರಕೀಯರನು
ಸುಮ್ಮನಿರುವೆವು ನಾವು ಇಂದು ದೋಚುತಿರುವವರ ನೋಡಿಕೊಂಡು...
ವರುಷಕೊಮ್ಮೆ ಧ್ವಜವ ಹಾರಿಸಿ
ಸಿಹಿಯ ಹಂಚಿ ಕರತಾಡನ ಮಾಡಿ ಸಂಭ್ರಮಿಸಿ
ಮರೆತು ಹೋಗಿರುವೆವು ನಾವು ಸ್ವಾತಂತ್ರ್ಯದ ನಿಜವಾದ ಅರ್ಥವ..
ಎಂದು ನಾವು ಒಂದಾಗಿ ಕೈ ಜೋಡಿಸಿ
ಭ್ರಷ್ಟಾಚಾರದ ವಿರುದ್ಧ ಹೋರಾಡಿ ಬುಡಸಮೇತ
ಕಿತ್ತೊಗೆಯುವೆವೋ ಅಂದು ಸಂಭ್ರಮಿಸೋಣ ಸ್ವಾತಂತ್ರ್ಯ ದಿನಾಚರಣೆಯ...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




