ಕವಲು

ಕವಲು

ಪುಸ್ತಕದ ಲೇಖಕ/ಕವಿಯ ಹೆಸರು
S .L ಭ್ಯರಪ್ಪ
ಪ್ರಕಾಶಕರು
sahitya bandaara balepete
ಪುಸ್ತಕದ ಬೆಲೆ
210 Re

 ನಮ್ಮ ಭಾರತೀಯ  ಸಂಸ್ಕೃತಿ  ಹೆಣ್ಣನ್ನು  ಪತಿವ್ರತೆ, ಸಹನಾಮೂರ್ತಿ,  ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ  ನಡೆಯೋಳು, ಇಡೀ ಸಂಸಾರದ ನೂಗವನ್ನು  ಹೊರುವವಳು, ಮುಂದೆ  ನಡೆಸುವವಳು ಎಂಬ   ಅರ್ಥ ಬರುವ  ಹಾಗೆ ಚಿತ್ರಿಸಿಬಿಟ್ಟಿದೆ.   ಚಿತ್ರಿಸಿ, ಪತ್ರಿಕೆಗಳಲ್ಲಿ  ಸಿನಿಮಾಗಳಲ್ಲಿ  ತೋರಿಸಿದ್ದ  ಮಾತ್ರಕ್ಕೆ  ಹಾಗೆ  ಇರಬೇಕೆಂದಿಲ್ಲ ..   ಇತ್ತೀಚಿನ  ಮಹಿಳೆಯ  ನಿಲುವೇ  ಬೇರೆಯದೇ  ಆಗಿದೆ..   ಗಂಡಿನ  ಸಮ  ಸಮಕ್ಕೆ  ನಿಂತು   ಸಂಸಾರದ  ಆದಾಯಕ್ಕೂ  ಕಾರಣ ಲಾಗಿದ್ದಾಳೆ ..  ಸೈನ್ಯದಲ್ಲಿ , ವಿಮಾನ   ಹಾರಾಡಿಸುವ ಕೆಲಸದಲ್ಲೂ  ಸಫಲ !!!  ಪಶ್ಚಿಮ ದೇಶಗಳಲ್ಲಿ  ಈ  ಭೇಧ  ಭಾವ  ಎಂದೂ  ಕಂಡೂ ಬoದಿಲ್ಲ ..  ಮಹಿಳೆಗೆ  ಸಮಾನತೆಯ  ಹಕ್ಕು  ಎಲ್ಲ  ಕ್ಷೇತ್ರಗಳಲ್ಲೂ !! ಅವಳ   ಆತ್ಮ ವಿಶ್ವಾಸಕ್ಕೆ  ಕಾರಣ  ಕೂಡ !!! 

 

ಭೈರಪ್ಪನವರ  ಕೃತಿ  ಕವಲನ್ನು   ಓದಿ  ..  ನನಗೆ ತಿಳಿದ  ರೀತಿಯಲ್ಲಿ ನನ್ನ  ಭಾಷಾ   ಪರಿಣಿ ತಿಯೊಳಗೆ  ಈ  ಕಥೆಯನ್ನು   ಸಂಕ್ಷಿಪ್ತವಾಗಿ  ಬರೆದಿದ್ದ್ದೇನೆ.  4 0 0  ಪುಟಗಳ  ಪುಸ್ತಕವನ್ನು  3  ಪುಟಗಳಿಗೆ ಇಳಿಸಿದ್ದೇನೆ  .  ಓದುವಾಗ ಕೆಲವೊಮ್ಮೆ  ನನ್ನ  ಹೃದಯ ವೇಗವಾಗಿ  ಬಡಿ ದುಕೊಳ್ಳುತಿತ್ತು. ..  ಪಾತ್ರಗಳು   ಆಡುವ  ಸಂಬಾಷಣೆಗಳು   ಬಳಸುವ  ಶಬ್ದಗಳು ..  ಎಷ್ಟು  ತೀಕ್ಷಣ..  ಮುಖಕ್ಕೆ  ರಪ್ಪ್ ಎಂದು   ಹೊಡೆದಾಗ  ಆಗುವ   ಅನುಭವ  ಓದುವಾಗ   ಆಯಿತು..   ನಿಜ ಜೀವನದಲ್ಲಿ  ಇಂತಾ ಒಂದು  ಸನ್ನಿವೇಶ ಬರಬಹುದು  ಎಂಬುದನ್ನೂ   ಊಹಿಸಲೂ  ಕಷ್ಟ ಸಾದ್ಯ!!    ಭೈರಪ್ಪನವರು   ಬರೆದ ಕವಲು ..    ಕಾಲ್ಪನಿಕವೇ  ಅಥವಾ ಸತ್ಯ ಕಥೆಯೇ  ಎಂಬ   ತೀರ್ಮಾನ ಓದುಗನಿಗೆ  ಬಿಟ್ಟಿದ್ದು !!! 
 

ಕಥಾ ನಾಯಕ  ಜಯಕುಮಾರ ತನ್ನ  ಮೊದಲ ಹೆಂಡತಿ ವೈಜಯಂತಿ ಯೊಡನೆ  ಸೇರಿ ದೊಡ್ಡ  ಕಂಪನಿಯನ್ನು  ಕಟ್ಟಿ  ಬೆಳೆಸಿದ ಉದ್ಯಮಿ. ಆಕ್ಸಿಡೆಂಟ್ ನಲ್ಲಿ   ಹೆಂಡತಿಯನ್ನು  ಕಳೆದುಕೊಂಡು ..  ಮಗಳು ವತ್ಸಲಾಗೆ  ಮಾತು  ತೊದಲಾಗುತ್ತೆ.   ಮಂಗಳಾ  ಎಂಬ  ತನ್ನ  ಸೆಕ್ರೆಟರಿಯ  ಸ್ನೇಹ  ಮಾಡಿ   ಅವಳು  ಬಸಿರಾಗಿ..  ನೀನು  ನನ್ನ  ಮದುವೆಯಾಗದೆ  ವಿಧಿಯಿಲ್ಲ ..   ಕಂಪನಿಯ  ಮುಂದೆ  ಕೆಲವು  ಸ್ತ್ರೀ  ಚಳುವಳಿ   ಮಂದಿಯನ್ನು ಕರೆಸಿ   ಗಲಾಟೆ ಮಾಡಿ  ಮದುವೆ   ಬಂದನಕ್ಕೆ ಬೀಳಿಸುತ್ತಾಳೆ .  ಮಗಳು  ವತ್ಸಳನ್ನು   ಪ್ರೀತಿಯಿಂದ ಜಯಕುಮಾರ  ಪಾಠ  ಹೇಳಿಕೊಡುತಿರುತ್ತಾನೆ ..  ಇದನ್ನು  ಕಂಡು ಸಹಿಸದ  ಮಂಗಳಾ  ಅವನ  ಮೇಲೆ  ಇಲ್ಲ  ಸಲ್ಲದ  ಆರೋಪ  ಹಾಕಿ   ಮಾತಿನ ಬಾಣದಲ್ಲಿ  ಅವನ  ಕೋಪ  ಇಮ್ಮಡಿಗೊಳಿಸಿ  ಅವನು  ಅವಳಿಗೆ  ಸರಿಯಾಗಿ   ಚಚ್ಚುತ್ತಾನೆ ..  ಇದನ್ನೇ  ದೊಡ್ಡ  ನೆಪ  ಮಾಡಿ  ಕಾನೂನಿನ  ಕ್ರಮ  ತೆಗೆದುಕೊಂಡು   ಅವನನ್ನು  ಜೈಲಿಗೆ ಕಳಿಸುತ್ತಾಳೆ     ಜಗಳದ ಕಾರಣ   ಎಷ್ಟೇ ಹೃದಯವಿದ್ರಾಕವಾಗಿ ಹೇಳಿದರೂ  ಕಾನೂನು  ಮಹಿಳೆಯ ಪರ.. ..   ಮಂಗಳಾಗೆ  ಮೊದಲಿನಿಂದ  ಒರಟುತನ  ಗಂಡಸು ಜಾತಿಯ ಬಗ್ಗೆ  ತಿರಸ್ಕಾರ..   ಸ್ತ್ರೀ  ಚಳುವಳಿ  ಸ್ತ್ರೀ  ವಿಮೋಚನೆಯಲ್ಲಿ  ಬಾಗಿಯಾದವಳು .  ಇವಳಿಗೆ  ಕಾಲೇಜು  ಓದುತಿದ್ದಾಗಲೇ ಒಬ್ಬ  ಗೆಳೆಯ  ಪ್ರಭಾಕರ  ಎಂದು  ..  ಹರಯದ  ಪ್ರಯೋಗಕ್ಕೆ  ಬಿದ್ದರೂ    ಮದುವೆ  ಎಂಬ ಬಂದನಕ್ಕೆ  ಬೀಳುವುದಿಲ್ಲ     ಸಮಾಜಕ್ಕೆ  ತಿಳಿಯದ  ಹಾಗೆ  ಬಚ್ಚಿಟ್ಟು  ಬಿಡುತ್ತಾರೆ !!!  ಪ್ರಯೋಗದಿಂದಾದ  ಪರಿಣಾಮವನ್ನೂ   ಅಳಿಸಿ  ಹಾಕಿಬಿಡುತ್ತಾರೆ  ಡಾಕ್ಟರ ಸಹಾಯದಿoದ !!!

ಇವರಿಗೆ  ಒಬ್ಬಳು  ಅಧ್ಯಾಪಕಿ  ಇಳಾ !!  oxword  ಯೂನಿವರ್ಸಿಟಿ ಯಲ್ಲಿ  ಓದಿದ  ಪ್ರವೀಣೆ ..  ಪಾಶ್ಚಿಮಾತ್ಯ  ದೇಶದ  ಜನ ಜೀವನವನ್ನೂ  ಚೆನ್ನಾಗಿ  ಬಲ್ಲವಳೂ ..  ಅದನ್ನೇ   ಬೋಧಿಸಿದವಳೂ ..  "living together "  ಸಂಭ೦ದ  ತಪ್ಪಿಲ್ಲ   ಹೆಣ್ಣಿಗೆ  ಗಂಡಿಗೆ  ಸ್ವತಂತ್ರವಿದೆ    ಅದನ್ನು  ಬಳಸಲೂ  ಸಮಾಜದ  ಅಡ್ಡಿಯೇನು   ಎಂಬ  ಪ್ರತಿಪಾದನೆ !!!
 

ಮಂಗಳಾ  ಮಾತು  ಬರದ  ಹುಡುಗಿಗೆ ಯಾವತ್ತೂ ತಾಯಿಯಗಲಿಲ್ಲ ಬದಲಾಗಿ  ಮಲತಾಯಿಯ  ಎಲ್ಲ  ಗುಣಗಳನ್ನೂ  ಎತ್ತಿ  ತೋರಿಸಿದಳು .  ಈ  ಕಂದನ ಲಾಲನೆ  ಪಾಲನೆ  ದ್ಯಾವಕ್ಕ ಎಂಬ  ಹೆಂಗಸಿನದು. ಜಯಕುಮಾರ ಮಂಗಳಾ ಒತ್ತಡಕ್ಕೆ ಮದುವೆಯಾದರೂ ಅವಳ  ಮೇಲೆ ಪ್ರೀತಿ ಭಾವನೆಗಳು ಹುಟ್ಟಲಿಲ್ಲ ..  ಮಗಳನ್ನು ಅಪಹಾಸ್ಯ ಮಾಡುವುದು ,  ದ್ವಂದಾರ್ಥ  ಬರುವ ಹಾಗೆ  ಕೆಟ್ಟ ಪದಗಳನ್ನು ಬಳಸಿ ಅವನ ಬಳಿ  ಮಾತಾಡಿದಾಗ  ಕೋಪವನ್ನು  ತಾಳದೆ ,,    ಜೈಲಿಗೆ ಹೋಗಿ ಬಂದ ಮೇಲಂತೂ  ಅವಳ   ಸಂಪರ್ಕವೇ ಇಲ್ಲದಂತೆ   ಒಂದೇ ಮನೆಯಲ್ಲಿ  ಮಗಳ   ಜೀವನವೇ  ಒಂದೇ ಗುರಿ   ಎಂದು  ಇದ್ದು ಬಿಡುತ್ತಾನೆ.    ತಿರುಗಿ ಬಿದ್ದ  ಗಂಡ  ಹೀಗಾದ  ಮೆಲೆ..  ತನ್ನ  ಹಳೆಯ  ಗೆಳೆಯ   ಪ್ರಭಾಕರನ ಸಂಗ ಮುoದುವರೆಸುತ್ತಾಳೆ ..   ಇದನ್ನೆಲ್ಲಾ  ಗಮನಿಸಿದ  ದ್ಯಾವಕ್ಕನಿಗೆ   ಮಾತ್ರ   ಧಣಿಗೆ  ಹೇಳಲು  ಏನೂ ಮುಜುಗರ.. 
 

ಇಳಾ  ವಿದೇಶದಲ್ಲಿ  ಓದಿದ  ಪದವೀಧರೆ .  ಒಬ್ಬ  ಉದ್ಯಮಿ  ಗಂಡ ವಿನಯಚಂದ್ರ   ಹೆಣ್ಣು   ಮಗು..   ಕಂಪೆನಿಯಿಂದ  ದೆಹಲಿಗೆ  ಗಂಡನಿಗೆ  ವರ್ಗವಾದಾಗ ..  ಇಳಾ  ತನ್ನ  ಮಗಳನ್ನು  ಕರೆದುಕೊಂಡು  ಇರುವ  ಕೆಲಸ  ಬಿಟ್ಟು ಬರಲು  ಸುತರಾಂ  ಒಪ್ಪುವುದಿಲ್ಲ..   ಗಂಡನ  ಜೊತೆ ಹೆಂಡತಿ  ಬರುವುದು  ಧರ್ಮ  ಅಲ್ಲದಿದ್ದರೆ  ನಾನೇಕೆ  ಅವಳ  ಖರ್ಚು ವೆಚ್ಚಗಳನ್ನು  ನೀಡಬೇಕು ಎಂದು  ಮಗಳ  ಒಳಿತಿಗಾಗೆ  ಮಾತ್ರ  ದುಡ್ಡು  ಕಳಿಸುತ್ತಾನೆ.  ಇದರಿಂದ  ರೊಚ್ಚಿಗೆದ್ದ  ಇಳಾ   ಇವನಿಗೆ  ಡೈವೋರ್ಸ್  ಕೊಡದೆ  ಸತಾಯಿಸುತ್ತೆನೆ..  ಬೇರೆ  ಮದುವೆ ಮಾಡಿಕೊಳ್ಳಲು   ಬಿಡುವುದಿಲ್ಲ ಎಂಬ  ಪಣ ತೊಡುತ್ತಾಳೆ .. 
 

ನಚಿಕೇತ  ಜಯಕುಮಾರನ   ಅಕ್ಕನ  ಮಗ  ..   ವಿದೇಶದಲ್ಲಿ  ಕಾಲೂರಿದ  ಒಬ್ಬoಟಿ ..  ಅಪ್ಪ   ಅಮ್ಮನ ಸಂಗಡ   ಇಲ್ಲದೆ  ..  ವಿದೇಶಿ  ಮಹಿಳೆಯ  ಜೊತೆ  ಲಿವಿಂಗ್ together  ಮಾಡುತ್ತಾನೆ ..   ಅವಳು  ಕೆಲವು  ವರ್ಷದ   ಬಳಿಕ  ನಿನ್ನ  ಮೇಲೆ  ನನ್ನ  ಪ್ರೀತಿ  ಬತ್ತಿದೆ..   ಎಂದು  ಟಾಟಾ  ಮಾಡಿ  ಬಿಡುತ್ತಾಳೆ ..  ಇದರಿಂದ  ಭ ಗ್ನಗೊಂಡ   ಅವನ  ಮನಸ್ಸು   ಅಲ್ಲೋಲ ಕಲ್ಲೋಲ  ವಾಗುತ್ತೆ ...   ಎಲ್ಲದರ ಮೇಲೆ   ಆಸಕ್ತಿ ಬತ್ತುತ್ತದೆ ...   ಹೆಂಡತಿಯಂತೆ ಪ್ರೀತಿಸಿದ  ಹುಡುಗಿ   ಬೇರೆಯಾದ ದುಖ:      ಕೆಲ  ಸಮಯದ  ನಂತರ   ಎರಡು   ಮಕ್ಕಳ ತಾಯಿ  ಪರಿಚಯವಾಗುತ್ತೆ.   ಅವಳ  ಪ್ರೀತಿ  ಪ್ರೇಮ, ಸೇವೆಯಲ್ಲಿ   prenaptual agreement  ಮಾಡಿಕೊಳ್ಳದೆ   ಮದುವೆಯಾಗುತ್ತಾನೆ ...  ಅವಳು ತನ್ನ  ಮಕ್ಕಳ  ಉದ್ದಾರಕ್ಕಾಗಿ  ಮನೆ  ಆಸ್ತಿ ಪಾಸ್ತಿ  ಎಲ್ಲವನ್ನೂ  ಜೀವನಾಂಶವಾಗಿ  ಪಡೆದು   ಇವನನ್ನು ಬರಿಗೈ ಸರದಾರನಾಗಿ  ಮಾಡಿ  ನಡು ನೀರಲ್ಲಿ  ಕೈ ಬಿಡುತ್ತಾಳೆ !!!   ನಚಿಕೇತ  ಇದರಿಂದ  ಮತ್ತಷ್ಟೂ ಹತಾಶನಾಗುತ್ತಾನೆ !!! 
 

ಇಳಾ  ತನ್ನ  ಒಬ್ಬಳೇ ಮಗಳ  ಜೊತೆ ಜೀವಿಸುತ್ತಿರುವಾಗ  conference ಒಂದಕ್ಕೆ  ಪಾರಿಸ್   ಹೋಗುವ ಅವಕಾಶ ಸಿಗುತ್ತೆ. ಅಲ್ಲಿ  ಭೇಟಿಯಾದ  ಭಾರತದ  ಮಂತ್ರಿಯ  ಗೆಳೆತನವಾಗುತ್ತೆ.  ಅದು   ಭಾರತಕ್ಕೆ  ಮರಳಿದ  ಮೇಲೂ  ಮು೦ದುವರೆಯುತ್ತೆ.  ಮಂತ್ರಿಯ  ಭವ್ಯವಾದ  ತೋಟದ   ಮನೆಗೆ ಇವಳ  ಮತ್ತು  ಮಗಳ  ವಾಸ್ತವ್ಯ   ಇದರಿಂದಾ  ವಿವಾಹ  ಬಾಹಿರ  ಸಂಭoದ ದವಾದರೂ  ಗಟ್ಟಿ  ಮಾಡಿಕೊಳ್ಳುತ್ತಾಳೆ !!  ಇದ್ದಕಿದ್ದ  ಹಾಗೆ  ಒಂದು  ದಿನ   ಕಾಲೇಜಿನಿಂದ  ಬಂದ  ಮಗಳಿಗೆ   ನಿಜದ ಅರಿವಾಗುತ್ತೆ..    ಅಮ್ಮನ   ಪ್ರಶ್ನೆ ಮಾಡಿ ದರೆ   ನೀನು  ಬೇಕಾರೂ   boyfriend  ಇಟ್ಟುಕೋ  ನನ್ನ  ಸ್ವಾತಂತ್ರಕ್ಕೆ ಅಡ್ಡಿ  ಮಾಡಬೇಡ ..   ಎಂದಾಗ   ವಾದ ಮಾಡಿ  ಗೆಲ್ಲಲಾಗದೆ,  ದೂರನಾದ  ಅಪ್ಪನ  ಸಂಗಡ  ಹೇಳಿಕೊಳ್ಳ ಲಾರದೆ  ಅಮ್ಮನಿಂದ    ದೂರ ಹೋಗಿ  ಹಾಸ್ಟೆಲ್ ನಲ್ಲಿ  ವಾಸ  ಮಾಡುತ್ತಾಳೆ   !!!  

ಗಂಡ ವಿನಯ ಚಂದ್ರ   ಪತ್ತೆದಾರಿಕೆ ಮಾಡಿ  ಇಳಾಳ  ದಿಡೀರ್  ಸಂಪತ್ತು ಹೇಗೆ  ಬಂತು ಎಂದು  ಕಂಡು   ಹಿಡಿದು  Divorce notice   ಜೊತೆಗೆ  ಮಂತ್ರಿಯ  ಜೊತೆ ಇದ್ದ  ಛಾಯಾ  ಚಿತ್ರಗಳನ್ನು ಕಳಿಸಿರುತ್ತಾನೆ..   ಇದರಿಂದ  ಮೆತ್ತಗಾಗಿ  ತಲ್ಲಣಗೊಂಡ  ಇಳಾ  ಬೇರೆ  ವಿದಿಯಲ್ಲದೆ   ಪತಿಗೆ  ವಿಚ್ಹೇದನ  ಕೊಟ್ಟು  ಬಿಡುತ್ತಾಳೆ ..  ತದನಂತರ  ಮo ತ್ರಿಗೆ   ನೀನು  ಹೆಂಡತಿಯನ್ನು  ಬಿಟ್ಟು ಬಿಡು  ನನ್ನ  ಮೇಲಿನ  ಪ್ರೀತಿಯಿಂದ  ಮದುವೆ  ಆಗು  ಎಂದು  ದುಂಬಾಲು  ಬೀಳುತ್ತಾಳೆ ..   ಮಂತ್ರಿ  ಪದವಿ  ಕೊಡಿಸಿ  ಮಗಳನ್ನು  ಕೊಟ್ಟ   ಮಾವನ  ವಿರುದ್ದ  ತಿರುಗಿ   ಬೀಳಲಾಗದೆ    ಇಳಾಳಿoದ  ದೂರವಾಗುತ್ತಾನೆ. ..   ಈ  ನಡುವೆ  ಮಂತ್ರಿಯ  ಹೆಂಡತಿ  ಬಂದು   ಅವಾಚ್ಯ  ಪದಗಳ  ಪ್ರಯೋಗದಿಂದ   ಅವಳನ್ನು  ಹೆದರಿಸಿ  ಮನೆ  ಕೂಡ  ಬಿಡಿಸುತ್ತಾಳೆ ..   
 

ಜಯಕುಮಾರ  ಕಂಪನಿ  ಕೆಲಸದ ಮೇಲೆ  ದೆಹಲಿಗೆ  ಹೋಗಿರುವಾಗ  ಹೆಂಡತಿ ಮಂಗಳ ನಪುoಸಕ  ಎಂದು  ಕರೆಯುವುದನ್ನು  ನೆನೆಸಿಕೊಂಡು  ತನ್ನ  ಪುರುಷ ಪರೀಕ್ಷೆಗೆ .. ಬೆಲೆವೆಣ್ಣ  ಸಹವಾಸ  ಮಾಡಿ  ಸಿಕ್ಕಿಹಾಕಿಕೊಂಡು  ಮತ್ತೆ  ಜೈಲ್  ಸೇರುತ್ತಾನೆ.  ವಿಷಯ  ತಿಳಿದ ಅಕ್ಕ  ಭಾವ ,  ನಚಿಕೇತ  ಮೂವತ್ತು ವರ್ಷದಿಂದ  ಕಳೆದು  ಹೋದ  ಅಮ್ಮನೊಡನೆ  ಬರುತ್ತಾರೆ .  ಮೊದಲ  ಮಗನ  ಹೆಂಡತಿ  ಅತ್ತೆಯೊಡನೆ  ಚಿಕ್ಕ  ಜಗಳವಾಡಿ   ವರದಕ್ಷಿಣೆ  ಕೇಸ್ ಹಾಕಿ  ಅತ್ತೆಯನ್ನು  ಜೈಲಿಗೆ  ಕಳಿಸಿರುತ್ತಾಳೆ ..   ಮೂರು  ವರುಷದ   ಕಾರಗ್ರಹ ವಾಸ   ಮುದುಕಿಗೆ ಮತ್ತೆ  ಮಗನ  ಮನೆಗೆ  ಬರಲು  ಆಗದೆ   ಉತ್ತರ ಭಾರತದ ಒಂದು  ಊರಿನಲ್ಲಿ  ಆಶ್ರಮದಲ್ಲಿ  ಇರುತ್ತಾಳೆ ..   ಮನೆಯವರೆಲ್ಲ   ಅಮ್ಮ  ಸತ್ತೇ  ಹೋಗಿರಬೇಕೆಂದು   ತೀರ್ಮಾನ  ಮಾಡಿರುತ್ತಾರೆ   ಹೇಗೋ  ಮಗಳು  ಅಳಿಯನಿಗೆ  ಸಿಕ್ಕಿ  ಎರಡನೇ  ಮಗನು  ಜೈಲ್  ಸೇರಿದ್ದು  ಕೇಳಿ  ನೋಡಲು    ಹೊಗುತ್ತಾಳೆ ..    ಮೊದಲನೇ  ಸೊಸೆ   ಅತ್ತೆಯನ್ನು  ಜೈಲ್ಗಟ್ಟಿದಳು ..   ಎರಡನೇ  ಸೊಸೆ   ಗಂಡನನ್ನೇ  ಜೈಲ್  ಹಾಕಿಸಿದ್ದಾಳೆ  ಎಂದು  ..   ಬಹಳ ದುಃಖ  ಪಡು ತ್ತಾಳೆ ..     ಜಯಕುಮಾರ   ಜೈಲಿನಲ್ಲಿರಬೇಕಾರೆ   ಕಂಪನಿ  ವ್ಯವಹಾರ  ನೋಡುವವರಿಲ್ಲದೆ    ಮುಳುಗಿ   ಹೊಗುತ್ತೆ..    ವಯಸ್ಸಾದ  ಅಮ್ಮ   ಜಯಕುಮಾರನ  ಮಗಳು   ವತ್ಸಲೆಯ  ಜೊತೆ  ಇದ್ದು  ಅವಳನ್ನು   ಸ್ವಲ್ಪ  ಸ್ವಲ್ಪ  ಕುಶಲ  ವಿದ್ಯೆಗಳನ್ನು  ಕಲಿಸುತ್ತಾಲೆ.  3   ತಿಂಗಳ   ಕಾರಾಗ್ರಹದ ಬಳಿಕ   ಬಂದ  ಜಯಕುಮಾರನಿ೦ದ    ಮಂಗಳ    ಒಂದು  ಕೋಟಿ  ಹಣ -  ಮನೆಯನ್ನು  ಕಸಿಯುತ್ತಾಳೆ ..   ವಿಚ್ಹೇದನವು  ಆಗುತ್ತೆ.      ತನಗೆ  ಹುಟ್ಟಿದ  ಮಗನ  ಜೊತೆ  ಆರಾಮವಾಗಿ  ಇರುವ  ಆಲೊಚನೆ.    ಪ್ರಭಾಕರನ  ಮದುವೆಯಾಗು   ಎನ್ನುತ್ತಾಳೆ ..   ಈಗಾಗಲೇ ಮದುವೆ ಯಾದ ಅವನೂ  ಕೂಡ  ದೂರ   ಸರಿಯುತ್ತಾನೆ.  
 

ಜಯಕುಮಾರನ  ಅಮ್ಮ   ವಯಸ್ಸಾದರೂ ತನ್ನ  ಮಗನ   ಮನೆಯನ್ನು  ಸರಿ ಮಾಡಬೇಕೆಂದು  ಯೊಚಿಸಿ..  ದ್ಯಾವಕ್ಕನ  ಬಳಿ  ಚರ್ಚಿಸುತ್ತಾಳೆ  ಮಂಗಳಾ  ಎಂಬ  ಹೆಣ್ಣು  ಹೇಗೆ  ..  ಅವಳ  ಬಗ್ಗೆ  ಪೂರ್ತಿ  ವಿಷಯ  ತಿಳಿದು  ಅಜ್ಜಿ   ಇದ್ದಕಿದ್ದ  ಹಾಗೆ  ಮಂಗಳ  ಮನೆಗೆ  ಹೊಗಿ..  ಯಾರದೂ   ಮಗುವಿಗೆ  ನನ್ನ  ಮಗನ   ಬಲೆಗೆ  ಹಾಕಿಕೊಂಡೆಯಾ ??  ರಕ್ತ ಪರೀಕ್ಷೆ   ಮಾಡಿಸು  ಆಗ  ಗೊತ್ತಾಗುತ್ತೆ ..  ಆಸ್ತಿಯನ್ನು   ಒದ್ದು  ಕಕ್ಕಿಸುತ್ತೇನೆ   ಎಂದು  ಜೋರು  ಮಾಡಿ  ಹೋಗುತ್ತಾಳೆ ..   ಇದರಿಂದ  ಮಂಗಳ  ದೃತಿಗೆಡುತ್ತಾಳೆ ...  ಏನಪ್ಪಾ   ಮಾಡು ವುದು   ಮಗು   ಪ್ರಭಾಕರನದೋ    ಜಯಕುಮಾರನದೋ  !!!   ಎಂಬ  ದ್ವಂದಕ್ಕೆ  ಸಿಕ್ಕುತ್ತಾಳೆ !!! ಪ್ರಭಾಕರ ನಂತೂ   ರಕ್ತ  ಪರೀಕ್ಷೆಗೆ  ತಯಾರಿರುವುದಿಲ್ಲ !!!  
 

ಅಜ್ಜಿ   ಮೊಮ್ಮಗ  ನಚಿಕೆತನನ್ನು   ಒಪ್ಪಿಸಿ  ಜಯಕುಮಾರನ ಮಗಳು    ವತ್ಸಲಳ  ಜೊತೆ  ಮದುವೆಯೂ  ಮಾಡಿಸಿಬಿಡುತ್ತಾಳೆ ..  ನಚಿಕೇತ   2  ಮದುವೆ ಇಂದ   ಮೋಸ  ಹೋದ  ಮೇಲೆ    ನಿಜವಾದ  ಹೆಂಡತಿ  ಅನ್ನೋ   ಪದಕ್ಕೆ ಅರ್ಥ  ಬಯಸುತ್ತಾನೆ ..
 

ಗಂಡನಿಗೆ ,  ಮಗಳಿಗೆ  ಮೋಸ  ಮಾಡಿದ   ಇಳಾ   ಒಬ್ಬಂಟಿ ,     ಗಂಡನ   ರಕ್ತ  ಹೀರಿ  ಅವನ  ಆಸ್ತಿ  ವಶ  ಮಾಡಿಕೊಂಡ   ಮಂಗಳಾ   ತನ್ನ  ಮಗುವಿಗೆ  ತಂದೆ  ಯಾರೆಂದು  ಗೊತ್ತಿಲ್ಲದ    ನತದೃಷ್ಟೆಯಾ   ಬದುಕು 
 

 
ಮದುವೆಗೆ  ಬಂದ  ಗಂಡುಗಳು  ಹುಡುಗಿಯ ತಂದೆ  ತಾಯಿಯ  ವಿಚಾರಣೆ  ಮಾಡೇ  ಮಾಡುತ್ತಾರೆ ..  ತಾಯಿ  ಇಲ್ಲದ  ಹುಡುಗಿ  ಅಂದರೆ  ಅನುಕoಪ  ಹುಟ್ಟಬಹುದು ..  divorcee  ಅಂದರೆ  ಜಿಗುಪ್ಸೆ !!!  ಇಂಗ್ಲಂಡ್  ಅಮೇರಿಕಾಗಳ  ಮುಕ್ತ ಜೀವನವನ್ನು  ಮುಕ್ತವಾಗಿ  ಬೋದಿಸುತ್ತಾ  ಮುಕ್ತವಾಗಿ   ಜೀವಿಸುವ ಈ  ತಾಯಿಯ  ಮಗಳು  ಎಂದರೆ  ಸಂಭಾವಿತನು  ಬ್ರಹ್ಮಚರ್ಯ  ಕಾಪಾದಿಕೊ೦ಡವನು  ಒಪ್ಪುತ್ತಾನೆಯೇ ???

ಇಳಾಳ   ಮಗಳು  ಮಾತ್ರ  ತನಗೂ  ಬಾಳಿನಲ್ಲಿ  ಒಳ್ಳೆಯ   ಸಂಗಾತಿ   ಸಿಗಬಹುದೆಂಬ   ಒಂದೇ   ಕನಸಲ್ಲಿ    ಬದುಕು..    ಹೀಗೆ ಕಥೆಯ ಅಂತ್ಯ !!!