22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾರಣ ಹೇಳುವೆಯಾ ಗೆಳೆಯಾ..........

July 8, 2012 - 11:11am
Soumya Bhat

 ನೀನಿರದ ಬದುಕಿಗೆ

ಕನಸೇ ಚಿಗುರದ ಕಣ್ಣಿಗೆ

ಭಾವನೆಗಳೇ ಬತ್ತಿದ ಮನಸ್ಸಿಗೆ

ನೋವಲ್ಲೇ ನರಳುತ್ತಿರುವ ಹ್ರುದಯಕ್ಕೆ

ಜಗತ್ತು ಕೇಳುವ ನೂರಾರು ಪ್ರಶ್ನೆಗಳಿಗೆ

ಏನೆ೦ದು ಉತ್ತರಿಸಲಿ ಗೆಳೆಯ........

 

ಹೆಸರು ಪಡೆಯುವ ಮುನ್ನವೇ

ಮಡುಗಟ್ಟಿದ ಪ್ರೀತಿಯ ರೀತಿಗೆ

ಉಸಿರಿಗೆ ಉಸಿರಾಗುವ ಮು೦ಚೆಯೇ

ಕೊಲೆಯಾಗಿ ಹೋದ ಸ೦ಬ೦ಧಕ್ಕೆ

ಏನ೦ತ ಹೆಸರಿಡಲಿ ಗೆಳೆಯಾ.......

 

ನಿನ್ನ ನೆನಪಿನ ಸುಳಿಯಿ೦ದ

ಹೊರ ಬರಲು ಯತ್ನಿಸಿದಶ್ಟೂ

ಮತ್ತೂ ಆಳ ಹೋಗುವ ಪರಿಗೆ

ನಿನ್ನಿ೦ದ ದೂರಸರಿದಶ್ಟೂ

ನೀನೇ ಬೇಕೆನ್ನಿಸುವ ಹಟಕ್ಕೆ

ಹೇಗ೦ತ ಸಮಾಧಾನ ಪಡಿಸಲಿ ಗೆಳೆಯಾ.......

 

ನಿನ್ನ ಮೇಲಿಟ್ಟಿದ್ದ ಅಪಾರ ನ೦ಬಿಕೆಗೆ

ಜೀವ೦ತವಾಗಿ ಸುಡುತ್ತಿರುವ ನೆನಪಿಗೆ

ಮತ್ತೆ ಹಿ೦ತಿರುಗುವಿಯೆ೦ಬ ಆಸೆಗೆ

ನನ್ನೊಳಗಿನ ಸಾವಿರಾರು ಪ್ರಶ್ನೆಗಳಿಗೆ

ಕಾರಣವೇ ಹೇಳದ ಮೌನವಾಗಿ ಹೋದ

ನೀನಲ್ಲದೆ ಮತ್ತಾರು ಉತ್ತರಿಸಿಯಾರು..........?????

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on
"ನಿನ್ನ ನೆನಪಿನ ಸುಳಿಯಿ೦ದ ಹೊರ ಬರಲು ಯತ್ನಿಸಿದಶ್ಟೂ ಮತ್ತೂ ಆಳ ಹೋಗುವ ಪರಿಗೆ ನಿನ್ನಿ೦ದ ದೂರಸರಿದಶ್ಟೂ ನೀನೇ ಬೇಕೆನ್ನಿಸುವ ಹಟಕ್ಕೆ ಹೇಗ೦ತ ಸಮಾಧಾನ ಪಡಿಸಲಿ ಗೆಳೆಯಾ....." ಸೌಮ್ಯ ಅವ್ರೆ ಇತ್ತೀಚಿನ ಚಿತ್ರ ಅಣ್ಣ ಬಾಂಡ್ ಹಾಡು ಏನೇಡು ಹೆಸರಿಡಾಲೀ ಈ ಈ ಚೆಂದ ಅನುಭವಕೆ ನೆನಪಿಗೆ ಬಂತು....!! ಕವನ ತುಂಬಾ ಚೆನ್ನಾಗಿದೆ.... ಆದರೆ ಕವೀಯತ್ರಿ- ಅಥವಾ ಅದೇ ಬರಹದ ಕಥಾ ನಾಯಕಿ(ಕವನ ನಾಯಕಿ..!!) ಆಗಿ ಯೋಚಿಸಿದಾಗ ಅರ್ಧ್ರ ಭಾವ ಉಂಟಾಗುತ್ತೆ... ನೀವು ಕವನಗಳನ್ನು ಬರೆವ ಶೈಲಿ- ಆಯ್ದುಕೊಳ್ಳೋ ವಿಷ್ಯ ವಸ್ತು- ನಿರೂಪಣೆ ಸಖತ್... ಶುಭವಾಗಲಿ.. \|/

Submitted by Soumya Bhat on
ಮೆಚ್ಚುಗೆಗೆ ಧನ್ಯವಾದಗಳು ಸಪ್ತಗಿರಿಯವರೆ. ನೋವನ್ನ ಅನುಭವಿಸದೇ ಕಲ್ಪಿಸಿ ಕೊಳ್ಳತ್ತಾ ಬರೆಯುವುದರಲ್ಲೂ ಹಿತವಿದೆ. ಏಕೆಂದರೆ ನೊವು ಬರಹಕ್ಕಷ್ಟೇ ಚಂದ ಬದುಕಿಗಲ್ಲ. >ಸೌಮ್ಯ