ಕೈ ತೊರೆದ ಕೊಡೆ

ಕೈ ತೊರೆದ ಕೊಡೆ

ಕವನ

ಒಂದಿರುಳು ನಾ ಕೊಂಡೆ ಆ ಕೊಡೆಯ

ಆ ಕ್ಷಣದಿ ನಾನಾದೆ ಅದರೊಡೆಯ

 

ಬಿರುಸು ಮಳೆಯಿಂದ ನಿತ್ಯ ನನ್ನ ಕಾಪಾಡಿ

ನೀನಾದೆ ನನ್ನ ಅಪರೂಪದ ಒಡನಾಡಿ

 

ಕನಸೊಂದ ನಾ ಕಂಡೆ ಅತಿ ಘೋರ

ಹೋದಂತೆ ನನ್ನಿಂದ ನೀ ಬಹು ದೂರ

 

ಆದರೂ ಸರಿಯೇ ನಿನ್ನಯ ಸ್ಥಾನ ಪಲ್ಲಟ

ಮರೆಲಾದೀತೇ ಓ ಕೊಡೆಯೇ, ನಿನ್ನ ಒಡನಾಟ