June 26, 2012 - 5:13pm
ಇದ್ರೇನು ಗಾಳಿ ಮಳೆಯ ಬಿರುಸು
ಇತ್ತಲ್ಲಿ ಮಣ್ ವಾಸನೆಯ ಸೊಗಸು
ಗಾಳಿಯ ಬಿರುಸಿಗೆ ವಾಲಿ ಮರ ಬಾಗಿತ್ತು
ಸುವಾಸನೆಗೆ ಸೋತು ಮಣ್ಣಿಗೆ ಮುತ್ತಿಕ್ಕಿತು
ಬಿದ್ದ ಮಳೆಯಿಂದೇಳುವುದು ಸುವಾಸನೆ
ಗಾಳಿ ಹೊತ್ತೊಯ್ವುದು ವಾಸನೆಯ ವೇದನೆ
ಮನುಜನೂ ಪ್ರಕೃತಿಯ ಕೂಸೇ ನಿಜ
ಅವನಂತೂ ಅನುಭವಿಸಲಾರ ಈ ಮಜ
ಮಳೆಯೋ ಹಾಳು ಮಳೆ, ಗಾಳಿಯೋ ದರಿದ್ರ ಗಾಳಿ
ಇನ್ನು ಮಣ್ಣೋ ಕೆಟ್ಟ ಧೂಳು, ಕೊರಗುವುದೇ ಚಾಳಿ
ಮಣ್ಣಿಂದ ದೂರಾದ ವಾಸನೆಯ ವೇದನೆಗೆ ಬೆಲೆಯಿಲ್ಲ
ಮಾನವನ ಮೂಗಿಗೆ ಮುಟ್ಟಿಸಿದ ಗಾಳಿಗೆ ತಲೆಯಿಲ್ಲ !
Photo: Tornado in our City on June 25th 2012. Picture taken by a friend of mine
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಗಾಳಿಗೆ ತಲೆಯಿಲ್ಲ !
ನಿಜ ಮನುಜನಿಗೆ ಸದಾ ಕೊರಗುವುದೆ ಚಾಳಿ
ಮಳೆ ಬಂತೆದರೆ ಬಂದು ಕಾಡಿತು ಶನಿ ಅಂತಾನೆ
ಬಾರದಿದ್ದರೆ
ಮಳೆ ಬರುತ್ತಿಲ್ಲ ಪ್ರಕ್ಱುತಿಯ ಶಾಪ ಅಂತಾನೆ.
ಮನುಜನೀಗ ಪ್ರಕ್ಱುತಿಯ ಬಾಗ ಅಲ್ಲ
ಹಾಗಾಗಿ ಮನುಜನ ಭಾವ ವಿಕಾರಕ್ಕೆ ಬೆಲೆಯಿಲ್ಲ
. ಭೂಮಿಯ ಮೇಲೆ ಕಾಯುವುದು ಬಿಸಿಲು
ಸಾಗರದ ಮೇಲೆ ಸುರಿಯುವುದು ಮಳೆಯು
ಇದು ಪ್ರಕ್ಱುತಿಯ ಈಗಿನ ಪರಿಯು.
ಪಾರ್ಥಸಾರಥಿ
ಉ: ಗಾಳಿಗೆ ತಲೆಯಿಲ್ಲ !
ದ್ಹನ್ಯವಾದಗಳು ಪಾರ್ಥರೇ
ಎರಡು ದಿನಗಳ ಹಿಂದೆ ಬಿರುಗಾಳಿಯ ಆರ್ಭಟ ಕಂಡಾಗ ಹುಟ್ಟಿದ ಕವನವಿದು ... ಚಿತ್ರವನ್ನೂ ಸೇರಿಸಿದ್ದೇನೆ
ಉ: ಗಾಳಿಗೆ ತಲೆಯಿಲ್ಲ !
.ಶ್ರೀನಾಥ್ ಅವರೆ,
ಕವನದ ಆಶಯ ಚೆನ್ನಾಗಿದೆ. ದುಡ್ಡು ಮಾಡಲು ಕೂತ ನಮಗೆ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಲು ಸಮಯವಿಲ್ಲ :((
ಉ: ಗಾಳಿಗೆ ತಲೆಯಿಲ್ಲ !
ದ್ಹನ್ಯವಾದಗಳು ಶ್ರೀಧರ್ ಅವರೇ
ಎರಡು ದಿನಗಳ ಹಿಂದೆ ಬಿರುಗಾಳಿಯ ಆರ್ಭಟ ಕಂಡಾಗ ಹುಟ್ಟಿದ ಕವನವಿದು ... ಚಿತ್ರವನ್ನೂ ಸೇರಿಸಿದ್ದೇನೆ
ಉ: ಗಾಳಿಗೆ ತಲೆಯಿಲ್ಲ !
ಅಲ್ಲಿ ಮಳೆ ಗಾಳಿ ಇಲ್ಲಿ ಬರಿ ಗಾಳಿ....!!
ಅಲ್ಲಿಯ ಮಳೆಯನ್ನ ಮಾತ್ರ ಇಲ್ಲಿಗೆ ಕಳಿಸಿ...!!
ಕವನ ಸಖತ್.. ಛಿತ್ರವು...
ಗುರುಗಳ ಕವನ ಓದಿದ ಮೆಲೆ ಅದೆ ತರಹದ್ ಹಿನ್ದೊಮ್ಮೆ ನನ್ನ ಪಟ್ಯ ಪುಸ್ತಕದಲ್ಲಿ ಓದಿದ್ದು ನೆನಪಾಯ್ತು... ಅಲ್ಲಿಯೋ ಕವಿ ಮಳೆ ಛಳಿ ಬಿಸಿಲು ಕಾಲ ಬನ್ದಾಅಗ ಎಲ್ಲದಕ್ಕು ನಾವ್ ಗೊಣಗುವೆವು , ಯಾವುದನ್ನು ಅಸ್ವಾದಿಸೆವು ಎಮ್ಬ ಭಾವವಿತ್ತು... ಯಾರು ಬರೆದದ್ದು ನೆನಪಿಲ್ಲ...
\|/
ಉ: ಗಾಳಿಗೆ ತಲೆಯಿಲ್ಲ !
ಪ್ರತಿಕ್ರಿಯೆಗೆ ಧನ್ಯವಾದಗಳು ಸಪ್ತಗಿರಿಯವರೇ
ಅಲ್ಲಿ ಮಳೆ ಆಗಿಲ್ಲ ಎಂದು ಓದಿ ತಿಳಿದೆ :(