ಹೇಳಿ ಕೇಳಿ ನಮ್ಮ ಮನೆಯ ಹೆಸರು ಜೇನುಗೂಡು. ಜೇನು ಹುಳುಗಳು ಆಗೊಮ್ಮೆ ಈಗೊಮ್ಮೆ ಬರುತ್ತೆ ಅನ್ನಿ. ಅದಕ್ಕಿಂತ ಹೆಚ್ಚಿನ ಸಂತೋಷವೆಂದರೆ, ಕಳೆದ ಒಂದು ವಾರದಿಂದ ನಮ್ಮ ಮನೆಯಲ್ಲಿ ಒಂದು ಗುಬ್ಬಿ ಜೋಡಿ ಮನೆ ಮಾಡಿಕೊಂಡು ಇದೆ. ಅಷ್ಟೇ ಅಲ್ಲ. ಮೊಟ್ಟೆಯನ್ನೂ ಇಟ್ಟಿದೆ.
ನಾರುಗಳನ್ನು ಹೆಣೆದು ಹೆಣೆದು, ಗೋಲಾಕಾರದಲ್ಲಿ ಗೂಡು ಕಟ್ಟಿ, ಸರಿಯಾಗಿ ಮಧ್ಯದಲ್ಲಿ ಮೊಟ್ಟೆ ಇಟ್ಟಿವೆ. ನನಗಂತು ತುಂಬಾ ಅಂದ್ರೆ ತುಂಬಾ ಸಂತೋಷವಾಗ್ತಾ ಇದೆ.
ನೆನ್ನೆ, ಮೊನ್ನೆ ಮಳೆ ಬರುತ್ತಿದ್ದರಿಂದ, ಗುಬ್ಬಿ ಗೂಡನ್ನು ಬಿಟ್ಟು ಆಚೆ ಹೋಗಿರಲೇ ಇಲ್ಲ. ಈ ದಿನ ಸ್ವಲ್ಪ ಹೊತ್ತು ಮೊಟ್ಟೆಗಳನ್ನು ಬಿಟ್ಟು ಹೋಗಿತ್ತು. ಆಗ ಕಂಡ ದೃಶ್ಯವೇನೆಂದರೆ, ಆ ಮೊಟ್ಟೆಗಳನ್ನು ತಿನ್ನುವುದಕ್ಕೋಸ್ಕ್ರರ ಒಂದು ಕಾಗೆ ಹೊಂಚು ಹಾಕ್ತಾ ಇದೆ. ಈ ಗುಬ್ಬಿಗಳು ಕಿಲಾಡಿ, ಆ ಕಾಗೆ ಹೋಗಲು ಸಾಧ್ಯವಿಲ್ಲದ ಜಾಗದಲ್ಲಿ ಗೂಡು ಕಟ್ಟಿವೆ.
ಗೂಡಿರುವ ಜಾಗದ ಹತ್ತಿರ ಒಂದು ಹಿಡಿ ಅಕ್ಕಿ ಕಾಳು ಮತ್ತು ನೀರನ್ನು ಇಟ್ಟಿದ್ದೀನಿ. ಗುಬ್ಬಿಗಳಿಗೆ ಇನ್ನೂ ಏನಾದರು ಮಾಡಬೇಕೇ ತಿಳಿಸಿ.









ಪ್ರತಿಕ್ರಿಯೆಗಳು
ಉ: ಗುಬ್ಬಿಗೂಡಾದ ಜೇನುಗೂಡು
>> ಗುಬ್ಬಿಗಳಿಗೆ ಇನ್ನೂ ಏನಾದರು ಮಾಡಬೇಕೇ ತಿಳಿಸಿ
ಏನು ಮಾಡಬಾರದು!
ಅವುಗಳನ್ನು ಅವುಗಳಿಗೆ ಬಿಡಿ ದೂರದಿಂದ ಸುಮ್ಮನೆ ವೀಕ್ಷಿಸಿ
ಉ: ಗುಬ್ಬಿಗೂಡಾದ ಜೇನುಗೂಡು
ನನ್ನಿ ಸುನಿಲ್ ಅವ್ರೆ ಈಗ್ ನೀವ್ ಸಕ್ರಿಯ ಆಗಿರೋದು ಖುಶಿ ತನ್ದಿದೆ...
ನಿಮ್ಮ ಅದ್ರುಸ್ತ ನೋಡಿ ಗುಬ್ಬಿಗಳೂ ಬನ್ದು ಗೋಡು ಕಟ್ಟಿವೆ... ನೀವ್ ಇರೋದು ಬೆ0ಗಳೂಊರಲ್ಲಿಯ?
ಹಾಗಿದ್ದರೆ ಗುಬ್ಬಿಗಳು ನಿಮ್ಮನೆಗೆ ಬನ್ದ್ ಗೂಡು ಕಟ್ಟಿದ್ದು ವಿಶೆಶ ಸುದ್ಧಿಯೆ..
ನೀವ್ ಈಗಾಗಲೆ ಸರಿಯಾಗಿಯೆ ಆರೈಕ್ ಮಾಡುತ್ತಿರುವಿರಿ... ಮುನ್ದುವರಿಸಿ...(ಕಾಳು ಕೊಡುವುದು.. ನೀರು ಇತ್ಯಾದಿ) ಸದ್ದು ಗದ್ದಲ ಆ ಗೂಡುಗಳ ಹತ್ತಿರ ಬೇಡ.....
\|/
ಉ: ಗುಬ್ಬಿಗೂಡಾದ ಜೇನುಗೂಡು
ಲಕ್ಕಿ ನೀವು
ಪಾರ್ಥವ್ರು ಹೇಳಿದಂತೆ ಅವುಗಳ ಪಾಡಿಗೆ ಬಿಟ್ಬಿಡಿ
ಉ: ಗುಬ್ಬಿಗೂಡಾದ ಜೇನುಗೂಡು
ಕಂಬಳಿಹುಳ ಸಿಕ್ಕರೆ ತಂದು ಕೊಡಿ. ಮರಿಗಳ ಬೆಳವಣಿಗೆಗೆ ಅದು ತುಂಬಾ ಮುಖ್ಯ ಅಂತ ಎಲ್ಲೋ ಓದಿದ್ದೆ.
ಉ: ಗುಬ್ಬಿಗೂಡಾದ ಜೇನುಗೂಡು
Nice idea prasanna. thank you to help them.
ಉ: ಗುಬ್ಬಿಗೂಡಾದ ಜೇನುಗೂಡು
ನಮ್ಮನೇಲೂ ಸುಮಾರು ವರ್ಷಗಳಿಂದ ಗೂಡು ಕಟ್ಟಿ ವಾಸವಾಗಿರುವ ಗುಬ್ಬಿಗಳ ಬಗ್ಗೆ ಒಂದು ಸಣ್ಣ, ಆದರೆ ಮಹತ್ತರವಾದ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ಅವುಗಳನ್ನಾಗಲಿ ಅಥವಾ ಅದರ ಮೊಟ್ಟೆಗಳನ್ನಾಗಲಿ ಮುಟ್ಟಬೇಡಿ. ಮನುಷ್ಯನ ವಾಸನೆ ಸೋಕಿದಲ್ಲಿ ಈ ಗುಬ್ಬಿಗಳೇ ಅವುಗಳನ್ನು ಕುಕ್ಕಿ ಕುಕ್ಕಿ ಸಾಯಿಸಿಬಿಡುತ್ತವೆ. :( ಹಾಗೆ ಅಕ್ಕಿ ಕಾಳುಗಳಿಗಿಂತ ಬೆಂದ ಅನ್ನ ಅಥವಾ ಮೃದುವಾಗಿ ಸಿಗುವಂತಹ ಏನಾದರೂ ಇಡಬಹುದು. ಖಾರಾ ಮತ್ತು ಮಾಂಸವನ್ನು ದಯವಿಟ್ಟು ಕೊಡಬೇಡಿ.
-ಭಾಸ್ಕೀ
ಉ: ಗುಬ್ಬಿಗೂಡಾದ ಜೇನುಗೂಡು
I like that sunil. you are very kind person. thank you to helping sparrow and eggs.