24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚೇತನ‌

June 23, 2012 - 8:05am
Soumya Bhat

ಕತ್ತಲು ಕಳೆದು ಬರುವ  ನಾಳೆಯ  ಬೆಳಕು 

ಮತ್ತೆ  ಹೊಸ ಕನಸ  ಹುಟ್ಟಿಸ  ಬಹುದು

ಕಹಿ ನೆನಪಿನ  ನಿನ್ನೆಯ  ಮತ್ತೆ೦ದೂ

ಕಾಡದ೦ತೆ ಅಳಿಸ  ಬಹುದು

 

ಹಳೆಯ  ನೋವ  ನೆನಪಿಗೆ ಮಡಿಲಾಗುವ  ಮುನ್ನ

ಕಳೆದು ಕೊ೦ಡ  ದಾರಿಯ  ಮತ್ತೆ ಹುಡುಕೋಣ

ಮರೆತ  ಗುರಿಯ  ಗಮ್ಯ  ತಲುಪೋಣ

ಮಡಿದ  ಪ್ರೀತಿಗೆ ಮರು ಜೀವ  ತು೦ಬೋಣ

ಮರೆತು ಹೋದ  ಬ೦ಧದ  ಜಾಡ  ಮತ್ತೆ ಹುಡುಕೋಣ

ಬದುಕಿಗೊ೦ದು ಹೊಸ  ಅರ್ಥ  ನಿಡೋಣ

 

ಪ್ರೀತಿ ಮಡುಗಟ್ಟುವ  ಮೊದಲು

ಸ೦ಭ೦ದಗಳು ಕಳೆದು ಹೋಗುವ  ಮೊದಲು

ಕಣ್ಣಲ್ಲಿನ  ಕನಸುಗಳು ಕರಗುವ  ಮೊದಲು

ಉಸಿರ  ಬಿಸಿ ಆರುವ  ಮೊದಲು

ಬದಲಾಗಿ ಬಿಡೋಣ.......

ಎಲ್ಲರೊಳಗೊ೦ದಾಗಿ ಬದುಕ  ಕಟ್ಟೋಣ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by SRINIVAS.V on
ಸೌಮ್ಯ ರವರೆ ...........ಸರಳ ಹಾಗು ಅರ್ಥ ಪೂರ್ಣ ಕವನ ......

Submitted by Soumya Bhat on
ಮೆಚ್ಚುಗೆಗೆ ಧನ್ಯವಾದಗಳು ಶ್ರೀನಿವಾಸ್ ರವರೆ.....

Submitted by harishsharma.k on
ಕಟ್ಟೋಣ ಎಲ್ಲರೊಳಗೊ೦ದಾಗಿ ಬದುಕ ಕಟ್ಟೋಣ!!. ಸೌಮ್ಯ ರವರೆ ಬಹಳ ಅರ್ಥಪೂರ್ಣ ವಾಗಿದೆ ತಮ್ಮ ಬರಹ.

Submitted by vishwanath B. H on
ವಾಹ್... ಕಣ್ಣಲ್ಲಿನ ಕನಸುಗಳು ಕರಗುವ ಮೊದಲು ಉಸಿರ ಬಿಸಿ ಆರುವ ಮೊದಲು ಬದಲಾಗಿ ಬಿಡೋಣ....... great lines ree

Submitted by Soumya Bhat on
ಹರೀಶ್ ಶರ್ಮರವರೆ ಹಾಗೂ ವಿಶ್ವನಾಥರವರೆ ಮೆಚ್ಜುಗೆಗೆ ಧನ್ಯವಾದಗಳು:-)

Submitted by venkatb83 on
ಪ್ರೀತಿ ಮಡುಗಟ್ಟುವ ಮೊದಲು ಸ೦ಭ೦ದಗಳು ಕಳೆದು ಹೋಗುವ ಮೊದಲು ಕಣ್ಣಲ್ಲಿನ ಕನಸುಗಳು ಕರಗುವ ಮೊದಲು ಉಸಿರ ಬಿಸಿ ಆರುವ ಮೊದಲು ಬದಲಾಗಿ ಬಿಡೋಣ....... ಎಲ್ಲರೊಳಗೊ೦ದಾಗಿ ಬದುಕ ಕಟ್ಟೋಣ. =========================== ಸಖತ್... ಸೌಮ್ಯ ಅವ್ರೆ- ನಿಮ್ಮ ಆಶಯ ಚೆನ್ನಾಗಿದೆ... ಕವನ ಅರ್ಥಪೂರ್ಣವಾಗಿದೆ... ಶುಭವಾಗಲಿ... \|/

Submitted by Soumya Bhat on
ಸಪ್ತಗಿರಿ ಅವ್ರೆ ಪ್ರತಿಕ್ರಿಯೆಗೆ ಧನ್ಯವಾದಗಳು. ಸೌಮ್ಯ

Submitted by ಗಣೇಶ on
ಸೌಮ್ಯ ಅವರೆ, ಕವನ ಚೆನ್ನಾಗಿದೆ. -ಗಣೇಶ.

Submitted by Soumya Bhat on
ಧನ್ಯವಾದಗಳು ಗಣೇಶರವರೆ...:-)