ಜಪಿಸುತಿಹಳು ರಾಧೆ .......................

ಜಪಿಸುತಿಹಳು ರಾಧೆ .......................

ಕವನ

ನನ್ನ ಪ್ರಕಾರ ರಾಧೆ ಕೃಷ್ಣನನ್ನು ಜಪಿಸಿದ್ದು ಈ ರೀತಿ......ರಾಗ ಹಾಕಿ ಭಜನೆಯ ರೂಪದಲ್ಲೂ ಇದನ್ನು ಹಾಡಬಹುದು.

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| ಪ||

 

ಮನವೆಂಬ ಮಡಕೆಯಲ್ಲಿ ಮಮತೆಯೆಂಬ ಮೊಸರನಿರಿಸಿ

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 1||

 

ತನುವೆಂಬ ತಂಬಿಗೆಯಲಿ ತನ್ಮಯತೆಯ ತುಪ್ಪವಿರಿಸಿ

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 2||

 

ಬದುಕೆಂಬ ಭಾಂಡದಲ್ಲಿ ಭಕ್ತಿಯೆಂಬ ಬೆಣ್ಣೆಯಿರಿಸಿ

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 3||

 

ಹೃದಯವೆಂಬ ಹಣತೆಯಲ್ಲಿ ಹಂಬಲತೆಯ ಹಾಲನಿರಿಸಿ

ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 4||

                                                                  ಗೀತಾ ಪ್ರದೀಪ್