ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ

ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ

ಕವನ
ದಶರಥ ತನಯ ದಶಾನನಹನನ ದಿಶೆ ದಶದಲ್ಲೂ ಕೀರ್ತಿಯುತ
ಮಾನುಷಕ್ಲೇಶ ದೋಷ ವಿವರ್ಜಿತ ಮೂರ್ಜಗವಂದಿತ ಸತ್ವಯುತ |
ಭಜಕರ ರಂಜಕ ರಕ್ಕಸ ಭಂಜಕ ನೇಸರಸಮ ರವಿಕುಲ ತಿಲಕ
ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ ||1||
 
ಕೌಶಿಕಶಿಕ್ಷಿತÀ ಮಾರಿಚಮರ್ದನ ತಾಟಿಕಸೂದನ ದನುಜಾರಿ
ದಂಡಕವನದಿ ಮಂಡಿತನಾಗಿ ದಂಡಿಸಿ ಡೊಂಬರ ಶಿರ ಚಂಡಾಡಿ |
ವಿಭೀಷಣಸಖ ಸುಲಕ್ಷಣಮುಖ ಸಂರಕ್ಷಣ ಧ್ಯೇಯದ ಧೀಪುರುಷ
ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ ||2||
 
ವಾಲಿಯ ವಧಿಸಿ ವಾನರ ಬಳಸಿ ಸೇನೆಯ ಕಟ್ಟಿದ ಮಹಾವೀರ
ಶರಧಿಯ ಲಂಘಿಸಿ ಲಂಕೆಯ ಸೋಲಿಸಿ ಬಿಂಕದಿ ಸೀತೆಯ ಕರೆತಂದ |
ಜನಕಜಾಮಾತ ಜಾನಕಿನಾಥ ಮಹತಿಗೆ ನಿಲುಕ ಹನುಮಸಖ
ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ ||3||