ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 80 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”
uday_itagi's picture
ಉದಯ್ ಇಟಗಿ
24
Dec
2009
ಪುಟ

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ...

ಪ್ರತಿಕ್ರಿಯೆಗಳು: 30
ಹಿಟ್ಸ್ : 1,428
ಸಜ್ಜನರ ಸಂಗದೊಳು ಇರಿಸೆನ್ನ ರಂಗ
nagarathnavinayakajoshi's picture
nagarathna vinayaka joshi
19
Feb
2011
ಲೇಖನ

 ಸಜ್ಜನರ ಸಂಗದೊಳು ಇರಿಸೆನ್ನ ರಂಗ

ದುರ್ಜನರ ಸಂಗನಾನೊಲ್ಲೆ ಮಂಗಳಾಂಗ
 
ಎಂಬ  ದಾಸಶ್ರೇಷ್ಠರಾದ ಕನಕದಾಸರ ನುಡಿಗಳನ್ನು...
ಪ್ರತಿಕ್ರಿಯೆಗಳು: 25
ಹಿಟ್ಸ್ : 790
ಬರೆಯಲು ಏನೋ ಬೇಜಾರು
uniquesupri's picture
ಸುಪ್ರೀತ್.ಕೆ.ಎಸ್
11
Aug
2011
ಬ್ಲಾಗ್ ಬರಹ

facebook dangerಫೇಸ್...

ಪ್ರತಿಕ್ರಿಯೆಗಳು: 6
ಹಿಟ್ಸ್ : 581
ಸೆಲೆಬ್ರಿಟಿ ಅಂತರಂಗದ ತಳಮಳ
uniquesupri's picture
ಸುಪ್ರೀತ್.ಕೆ.ಎಸ್
07
Dec
2011
ಲೇಖನ

(ಈ ಬರಹ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಸೆಲೆಬ್ರಿಟಿಗಳು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆಂದರೆ ಅವರಿಗೆ ಖಾಸಗಿಯಾಗಿ ಮಾಡಲು...

ಪ್ರತಿಕ್ರಿಯೆಗಳು: 8
ಹಿಟ್ಸ್ : 315
ವಿಷಾತಿ ಮಳೆ
malleshgowda's picture
ಮಲ್ಲೇಶ್ ಗೌಡ
25
Nov
2009
ಪುಟ

ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,377
ಮನದ ನುಡಿ
modmani's picture
ಮೊದ್ಮಣಿ
09
Nov
2009
ಬ್ಲಾಗ್ ಬರಹ

ಕೇಳೆ   ನೀನು
 ನನ್ನ ಮನದ
 ನುಡಿಯ ಮೆಲ್ಲಗೆ
ಬಾಳ ಸೊಲ್ಲಿಗೆ
 ಭಾವ ಅರಳಿದ
 ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,006
ವಿಜ್ಞಾನಿ ಸ್ಟೀಫನ್ ಹಾಕಿಂಗ್
abdul's picture
ಅಬ್ದುಲ್ ಲತೀಫ್ ಸಯ್ಯದ್
10
Jan
2012
ಬ್ಲಾಗ್ ಬರಹ
ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ, ಮತ್ತು cosmologist ಸ್ಟೀಫನ್...
ಪ್ರತಿಕ್ರಿಯೆಗಳು: 7
ಹಿಟ್ಸ್ : 152
ಅಭಿಮನ್ಯು ಮತ್ತೆ ಹತನಾದ
uniquesupri's picture
ಸುಪ್ರೀತ್.ಕೆ.ಎಸ್
29
Jul
2010
ಬ್ಲಾಗ್ ಬರಹ

 

...

ಪ್ರತಿಕ್ರಿಯೆಗಳು: 26
ಹಿಟ್ಸ್ : 1,357
ಗಾಲ್ಫ್ ಚೆಂಡಿನ ಜೀವನ ಸಿದ್ಧಾಂತ
makara's picture
ಶ್ರೀಧರ್ ಬಂಡ್ರಿ
01
Apr
2012
ಬ್ಲಾಗ್ ಬರಹ

    ಗಾಲ್ಫ್ ಆಟಗಾರನಾದ KNSK ತನ್ನ ಹೃದಯಕ್ಕೆ ಹತ್ತಿರವಾದ ಈ  ಪ್ರಸಂಗವನ್ನು ಮುಂದಿಡುತ್ತಾನೆ. ನಿಮ್ಮ ಜೀವನವು ಇನ್ನು ಭರಿಸಲಾಗದಷ್ಟು ಜಿಗುಪ್ಸೆಯೆನಿಸಿ...

ಪ್ರತಿಕ್ರಿಯೆಗಳು: 23
ಹಿಟ್ಸ್ : 330
ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ
abdul's picture
ಅಬ್ದುಲ್ ಲತೀಫ್ ಸಯ್ಯದ್
20
Apr
2010
ಪುಟ

ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ...

ಪ್ರತಿಕ್ರಿಯೆಗಳು: 68
ಹಿಟ್ಸ್ : 2,545

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !

ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !

 

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು

ತಲೆಗೆ ಬಂದಿರಲಿಲ್ಲ. ಹಾಡುಗಳನ್ನು ಹಾಡಿಕೊಂಡು ಪದರಂಗ ಮಾಡಿದ್ದಾಯಿತು ... ಸಾಮಾಜಿಕ ಮತ್ತು ಪೌರಾಣಿಕ ಚಿತ್ರಗಳ ಎರಡು ರೀತಿಯ ಪದರಂಗ ರಚಿಸಿದ್ದಾಯಿತು. ಮುಂದೇನು?

 

ನಾನ್ನಾಕೆ ಕೊಟ್ಟ ಸಲಹೆ "ಡೈಲಾಗ್ಸ್" ಎಂದು.

 

ಡಾ|ರಾಜ್ ಸಂಭಾಷಣೆಗಳನ್ನು ಆಧರಿಸಿ ಒಂದು ರಸಪ್ರಶ್ನೆ ತಯಾರಿಸಿಯೇಬಿಟ್ಟೇ ನೋಡಿ. ಹೆಚ್ಚು ಕಷ್ಟವಾಗಲಿಲ್ಲ ... ಯಾಕೆ ಅಂದಿರಾ? ಅವರ ಸಂಭಾಷಣೆಯ ವೈಖರಿಯೇ ಹಾಗೆ. ಅಷ್ಟರಮಟ್ಟಿಗೆ ನಮ್ಮಲ್ಲಿ ಬೆರೆತು ಹೋಗಿದೆ !! ಅವರ ಇಪ್ಪತ್ತು ನಾಲ್ಕು ಚಿತ್ರಗಳಿಂದ ಆಯ್ದ ಸಂಭಾಷಣೆಯ ತುಣುಕುಗಳನ್ನು ಇಲ್ಲಿ ಕೊಟ್ಟಿದ್ದೇನೆ. ನಿಮ್ಮ ಕೆಲಸ ಏನು ಅಂದರೇ .....

 

ಮೊದಲು ಸಾಲುಗಳನ್ನು ಓದಿ ... ಯಾವ ಚಿತ್ರದ್ದು ಎಂದು ಯೋಚಿಸಿ ... ಸನ್ನಿವೇಶ ನೆನಪಿಸಿಕೊಳ್ಳಿ ... ಸನ್ನಿವೇಶದ ಭಾವುಕತೆಯನ್ನು ಅನುಭವಿಸಿಕೊಂಡು ಮತ್ತೊಮ್ಮೆ ಓದಿ ... ಚಿತ್ರದ ಹೆಸರನ್ನು ಪ್ರತಿಕ್ರಿಯೆಯಲ್ಲಿ ಹಾಕಿ ... ಪ್ರಶ್ನೆಗಳೆಲ್ಲ ಉತ್ತರಿಸಿದ ಮೇಲೆ, ನಿಮ್ಮ ಮನದಲ್ಲಿ ಮೂಡಿ ಬಂದ ಇನ್ಯಾವುದೇ ಸಂಭಾಷಣೆಗಳನ್ನೂ ಬರೆದರೆ ಇನ್ನೂ ಚೆನ್ನ ... ಮಾತು ಜಾಸ್ತಿ ಆಯ್ತು ... ಈಗ ಕೆಲ್ಸಕ್ಕೆ ಬರೋಣ ...

 

ರಸಪ್ರಶ್ನೆಯ ಪ್ರಶ್ನೆಗಳು :-

 

೦೧. ಬ್ಯಾಂಗಳೂರ್ !! ಬೆಂಗಳೂರಿನಲ್ಲಿ ಇದ್ಗೊಂಡ್ ಕನ್ನಡ ಮಾತಾಡೊಕ್ಕೆ ಬರೋಲ್ವಾ? ಕರ್ನಾಟಕದಲ್ಲಿರೋ ಎಲ್ಲರೂ ಕನ್ನಡ ಕಲೀಬೇಕು ಅನ್ನೋದೇ ನನ್ನಾಸೆ ...

 

೦೨. ನೀಲ ನನ್ನನ್ನ ಏನೋ ಕೇಳೋಕ್ಕೆ ಬಂದಿದ್ದಾಳೆ. ಅವಳು ಏನೇ ಕೇಳಿದರೂ, ನನ್ನಲ್ಲಿ ಇರೋದನ್ನ ಮಾತ್ರ ಕೇಳೋ ಹಾಗೆ ಮಾಡು ಪ್ರಭು.

 

೦೩. ಈ ಬಂಗ್ಲೇ ಮನೇನ ಗ್ರಾಮಕ್ಕೆ ಬೇಕಾದ ಆಸ್ಪತ್ರೆಗೋ, ಇಲ್ಲಾ ಮಕ್ಕಳ ಶಾಲೆಗೋ, ಯಾವುದಕ್ಕೆ ಬೇಕಾದರೂ ಸದುಪಯೋಗ ಪಡಿಸಿಕೊಳ್ಳಿ

 

೦೪. ಒಬ್ಬಟ್ಟ್ನಾಗೆ ಊರಣ ತುಂಬ್ದಂಗೆ ತಲೇನಾಗೆ ಬುದ್ದಿ ತುಂಬಿರ್ತಾನೆ ದೇವರು. ಕುರಿಗೆ ಕುರಿ ಬುದ್ದಿ, ನರಿಗೆ ನರಿ ಬುದ್ದಿ.

 

೦೫. ಯಾವ ಮನೆಯಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನೆಡೆಯುತ್ತಿತ್ತೋ, ಯಾವ ಮನೆ ದೇವರ ಗುಡೀನೇ ಆಗಿತ್ತೋ, ಆ ಮನೆಯಲ್ಲಿ ಇವತ್ತು ಕುಡುಕರು ಕುಣಿತ, ಕುಡುಕರ ಸಂತೆ ..

 

೦೬. ಏನಣ್ಣ? ಟೀ’ನಾ? ನೀ ಹಾಕ್ಕೊಂಡ್ ಬಂದಿದ್ದೀಯಲ್ಲ ಆ ಎಣ್ಣೇನ್ನ ಬೆರೆಸಿದ್ದೀಯೇನೋ ಅಂತ ಅಂದ್ಕೊಂಡೆ. ಅದೆಲ್ಲ ಚೆನ್ನಾಗಿರಲ್ಲ. ನೀನು ಕುಡೀಬೇಡ... ಬಿಟ್ಬಿಡು

 

೦೭. ದೇವರೇ, ನಾ ಕಟ್ಟಿದ ಆಶೋಗೋಪುರ ಕಳಚಿದ ಮೇಲೆ ಸಾಕಷ್ಟು ನೋವು ಅನುಭವಿಸಿದ್ದೀನಿ. ಇನ್ನೊಂದು ಕನಸನ್ನೂ ಹಾಗೇ ಮಾಡಿಬಿಡಬೇಡಪ್ಪ.

 

೦೮. ನನ್ನ ಜಾತಕದಲ್ಲಿ ಕುಜ ದೋಷ ಇದೆಯಂತೆ. ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿ ಸತ್ ಹೋಗ್ತಾಳಂತೆ!

 

೦೯. ಚೆನ್ನಜ್ಜ ಇದ್ದಾನಲ್ಲ ಚೆನ್ನಜ್ಜ, ಅವನಿಗೆ ವಿಪರೀತ ಜ್ವರ ... ಪಾಪ ಕೊಡ್ಲೀನೇ ಎತ್ತಕ್ಕೆ ಆಗ್ತಿರ್ಲಿಲ್ಲ ಆತನಿಗೆ

 

೧೦. ಅಪ್ಪಾ?? ಮನೆ ಕೆಲಸ ಮಾಡೊಕ್ಕೆ ಬಂದಿರೋ ಆಳು .. ಅಪ್ಪ ಹೇಗಾಗ್ತಾನೆ ಯಜಮಾನ್ರೇ? ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ, ಮನೆ ಆಳು ಕೋಪಿಸಿಕೊಂಡರೆ ಯಜಮಾನನಿಗೆ ಏನು ನಷ್ಟ? ನೀನು ಯಜಮಾನ ... ನಾನು ಜವಾನ.

 

೧೧. ಕಂದಾ, ಏಕಪ್ಪ ನಿನಗೆ ಈ ಹಠ. ಯಾವ ನಿನ್ನ ತಂದೆಯ ಹೆಸರನ್ನು ಕೇಳಿದರೆ ತ್ರಿಮೂರ್ತಿಗಳು ಗಡಗಡನೆ ನಡುಗುವರೋ ....

 

೧೨. ತುಂಬಿದ ಸಭೆಯಲ್ಲಿ ನಮ್ಮವರ ಮುಂದೆ ನೀನು ಏನು ಹೇಳಿದೆ? ನಿನ್ನಾ ಚಿಕ್ಕಪ್ಪ ಚಿಕ್ಕ ಅಪ್ಪನೇ ಹೊರತು ಇಲ್ಲಾರಿಗೂ ದೊಡ್ಡ ಅಪ್ಪನಲ್ಲವೆಂದು ಹೇಳಿ, ಬಾಯಿಗೆ ಬಂದಂತೆ ಹರಟಿದ ನೀನು, ಈಗ ಶರಣಾರ್ಥಿಯಾಗಿ ಬಂದಿರೋದನ್ನ ನೋಡಿದರೆ, ನಮಗೆ ಕನಿಕರವಾಗ್ತಾ ಇದೆ.

 

೧೩. ಹಿಡಿದು ಬಿಡ್ತಾರಂತೆ ಹಿಡಿದ್ಬಿಡ್ತಾರೆ ... ನಾನೇನು ಕುರಿಮರೀನ ಹಿಡಿಯೋಕ್ಕೆ? ... ನಾನು ಮನಸ್ಸು ಮಾಡಿದರೆ, ಒಬ್ಬೊಬ್ಬ್ರನ್ನೂ ನೇಣು ಹಾಕಿಸಬಲ್ಲೆ ... ಮೊದಲು ನಾನು ಉಳ್ಕೊಂಡ್ರೆ ಅಲ್ವೇ? ... ಏ ರುಕ್ಕೂ ... ಏನದೃಷ್ಟಾನೆ ನಿಂದು? ಹೋಗೀ ಹೋಗೀ ಈ ಕಳ್ಳನ್ನ ಕಟ್ಕೋಬೇಕೂ ಅಂತ ಆಸೆ ಪಟ್ಯಲ್ಲೇ?

 

೧೪. ಜ್ಞ್ನಾಪಿಸ್ಕೋ ... ಇನ್ನೂರು ವರ್ಷಗಳ ಹಿಂದೆ ನಾವು ಸಂಧಿಸಿದ್ದು, ನೋಡಿದ್ದು, ಮಾತಾಡಿದ್ದು, ಪ್ರೀತಿಸಿದ್ದು ... ಒಬ್ಬರಿಗೊಬ್ಬರು ಪ್ರಾಣ ಕೊಡೋಕ್ಕೂ ಸಿದ್ದವಾಗಿದ್ವಿ

 

೧೫. ಬೇಡ ಪಾರ್ವತಿ ... ನೀನು ನನ್ನಿಂದ ದೂರ ಆದ್ರೆ, ಖಂಡಿತ ನಾನು ಬದುಕಿರೋದಿಲ್ಲ .... ರಾಮೂ ... ಹೋಗಪ್ಪ ... ಬೇಗ ಕಾರ್ ತೊಗೊಂಡ್ ಹೋಗಿ ಡಾಕ್ಟರ್’ನ ಕರ್ಕೊಂಡ್ ಬಾ ..... 

 

೧೬. ನಡಿ ಉಷಾ ... ಯಾವ ಜಾಗದಲ್ಲಿ ನಮ್ಮ ಪ್ರೀತಿಗೆ ಬೆಲೆ ಇಲ್ಲವೋ ಆ ಜಾಗದಲ್ಲಿ ನಾವು ಇರಬಾರದು ...

 

೧೭. ಶಂಕ್ರೂ ಅಲ್ಲ ... ಶಂಕ್ರು ತಂದೆ ರಾಜಶೇಖರ್ ಮಾತಾಡ್ತಿರೋದು ... ರಾಜಶೇಖರ್ ... ನಿನ್ನ ರಾಜಶೇಖರ್ ಸುಮತಿ ಮಾತಾಡ್ತಿರೋದು ...

 

೧೮. ಅಮ್ಮಾ ... ತಾಯಿ ... ಮುರಿದು ಬೀಳ್ತಾ ಇದ್ದ ಸಂಸಾರಕ್ಕೆ ಹೊಟ್ಟೆ ತುಂಬ ಅನ್ನ ಕೊಟ್ಟು ಕಾಪಾಡಿದ್ದೀಯ. ಈಗ ನಿನ್ನ ಸೇವೆ ಬಿಟ್ಟು ದೂರ, ಬಹುದೂರ ಹೋಗ್ತಾ ಇದ್ದೀನಿ.

 

೧೯. ಈ ಮಣಿ ಕಿರೀಟ ನಿನಗೆ ಬೇಡವೆ? ಈ ಸಾಮ್ರಾಜ್ಯ ನಿನಗೆ ಬೇಡವೇ ಎಂದು ಕೇಳುತ್ತಿದ್ದವಳು ನೀನೇನೇ ಅಮ್ಮ?

 

೨೦. ಇನ್ನೊಂದು ಸಲ ಆ ಶಬ್ದ ನಿನ್ ಬಾಯಲ್ಲಿ ಬಂದರೆ ಹೂತು ಹಾಕ್ಬಿಡ್ತೀನಿ ಭಡವ !! ಹೆಣ್ಣು ಜನ್ಮ ಕೊಡೋ ತಾಯಿ ಕಣೋ. ಮೊದಲು ಅವಳಿಗೆ ಮರ್ಯಾದೆ ಕೊಡಿ. ಉದ್ದಾರ ಆಗ್ತೀರ.

 

೨೧. ನಿನ್ನನ್ನ ಏನಂತ ಕರೀಲಿ? ಸ್ನೇಹಿತ ಅನ್ನಲೇ? ಸಹಾಯಕ್ಕೆ ಬಂದಿರೋ ಪುಣ್ಯಾತ್ಮ ಅಂತ ಕರೀಲೇ? ಅಪ್ಪಾ ಅಂತ ಕರೀಲೆ? ಅಥವಾ ಕೈ ತುತ್ತು ತಿನ್ನಿಸ್ತ ಕಾಪಾಡೊ ಹೆತ್ತ ತಾಯಿ ಅಂತ ಕರೀಲೆ?

 

೨೨. ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕೂ ಅನ್ನೋ ಹಾಗೆ ನಾನೂ ನಮ್ಮಕ್ಕನಂತೇ ನೆಡೆದುಕೊಂಡೆ. ಇಲ್ದೆ ಇದ್ದಿದ್ರೆ ನಿನಗೆ ಕೊಳೆ ಬಟ್ಟೆ ಒಗೆಯೋದ್ ತಪ್ತಾ ಇರ್ಲಿಲ್ಲ, ಚಳೀಲಿ ನಡುಗೋದ್ ತಪ್ತಿರ್ಲಿಲ್ಲ, ನಿನ್ನಿಷ್ಟದಂತೆ ಕಾಲೇಜ್’ಗೆ ಹೋಗೋದಕ್ಕೂ ಆಗ್ತಿರ್ಲಿಲ್ಲ ...

 

೨೩. ನೀ ಯಾರು ಅಂತ ನನಗೆ ಗೊತ್ತಿಲ್ವ? ನಿಮ್ಮಜ್ಜಿ ಪುಟ್ನಂಜಿ, ಕೆನ್ನೆ ಗುಲಗಂಜಿ, ಬಣ್ಣ ಅಪರಂಜಿ, ಕೆರಳಿದ್ರೆ ಕಾರಂಜಿ

 

೨೪. ನಮ್ ಮೈಲಾರಿ ಒಮ್ಮೆ ಗುದ್ದ ನೋಡು, ಹಾಗೇ ನೆಗೆದು ಬಿಟ್ಟ .. ಮೇಲೆ .. ಬೊಮ್ಮ

 

 

{ಹುಟ್ಟು ಹಬ್ಬದ ಶುಭಾಶಯಗಳು .. ರಾಜ್ ನೆನಪು ನೂರಾರು ವರ್ಷ ಹಸಿರಾಗಿರಲಿ}

 

No votes yet
782 ಹಿಟ್ಸ್

ಪ್ರತಿಕ್ರಿಯೆಗಳು

Sunil Jayaprakash's picture
25
Apr
2011
10:21

೦೫.ಜೀವನಚೈತ್ರ
೧೧. ಭಕ್ತ ಪ್ರಹ್ಲಾದ
೧೨. ಬಬ್ರುವಾಹನ
೧೯. ಮಯೂರ

bhalle's picture
26
Apr
2011
1:45

ಧನ್ಯವಾದಗಳು ಸುನಿಲ್

ನಾಲ್ಕೂ ಉತ್ತರ ಸರಿಯಾಗಿದೆ ... ಮಿಕ್ಕವು?

Jayanth Ramachar's picture
25
Apr
2011
10:55

೦೧.ಶಭ್ದವೇದಿ
೦೩.ಬಂಗಾರದ ಮನುಷ್ಯ
೦೫.ಜೀವನ ಚೈತ್ರ
೧೨.ಬಭ್ರು ವಾಹನ
೧೪. ಶ್ರಾವಣ ಬಂತು
೧೫. ಭಾಗ್ಯವಂತರು
೨೨. ಹೊಸ ಬೆಳಕು
೨೪. ಕವಿರತ್ನ ಕಾಳಿದಾಸ
(ಎಲ್ಲ ಉತ್ತರಗಳು ಊಹಿಸಿದ್ದು)

bhalle's picture
26
Apr
2011
1:47

ಜಯಂತ್

ಸ್ವಲ್ಪ ಊಹೆ ಜಾಸ್ತಿ ಆಯ್ತೇನೋ ಅನ್ನಿಸುತ್ತಿದೆ ... ಎರಡು ಮೂರು ಉತ್ತರ ಮಾತ್ರ ಸರಿಯಾಗಿದೆ ಅಷ್ಟೇ ....

ಪ್ರತಿಕ್ರಿಯೆಗೆ ಧನ್ಯವಾದಗಳು

shashikiran.m's picture
25
Apr
2011
11:33

Idu nanna snehita Manju idanna odi koTTa uttaragaLu.
1. Chalisuva Modagalu
2. Kasturi Nivasa
3. Jeevana Chaitra
4. Kaviratna Kalidaasa
5. Jeevana Chaitra
6. Shabdavedi
7. Eradu Kanasu
8. Haalu Jeanu
9. ?????
10. Sanadi Appanna
11. Baktha Prahalada
12. Babruvahana
13. Naanobba Kalla
14. Raja nanna Raja
15. Bhagyavantharu
16. Naaninna Mareyalaare
17. Shankar Guru
18. Bangarada Manushya
19. Mayoora
20. Aaksmika
21. Baktha Kumbara
22. Hosa Belaku
23. ???????
24. Bangarada Panjara

ಶ್ರೀನಿವಾಸ ವೀ. ಬ೦ಗೋಡಿ's picture
25
Apr
2011
2:10

ನಿಮ್ಮ ಸ್ನೇಹಿತ ಹೇಳದೇ ಬಿಟ್ಟ ಹೆಸರುಗಳು.

೯. ಸಂಪತ್ತಿಗೆ ಸವಾಲ್
೨೩. ರವಿ ಚಂದ್ರ

bhalle's picture
26
Apr
2011
1:53

ಶ್ರೀನಿವಾಸ ಅವರಿಗೆ ಧನ್ಯವಾದಗಳು

ಒಂಬತ್ತು ಸರಿ ....

bhalle's picture
26
Apr
2011
1:51

ಮೂರು. ಒಂಬತ್ತು, ಇಪ್ಪತ್ತಮೂರು ಬಿಟ್ಟರೆ ಮಿಕ್ಕೆಲ್ಲ ಸರಿ

ನಿಮ್ಮ ಸ್ನೇಹಿತ ಮಂಜು ಇನ್ನೂ ಸಂಪದಕ್ಕೆ ಕಾಲಿಡದಿದ್ದಲ್ಲಿ ದಯವಿಟ್ಟು ಆಹ್ವಾನಿಸಿ

ಮಂಜು ಮತ್ತು ನಿಮಗೂ ಅನಂತ ಧನ್ಯವಾದಗಳು

RAMAMOHANA's picture
25
Apr
2011
1:18

೧-ಮೇಯರ್ ಮುತ್ತಣ್ಣ ೨-ಕಸ್ತೂರಿನಿವಾಸ ೩-ಜೀವನ ಚೈತ್ರ(+/-.......?)
೪-ಕವಿರತ್ನಕಾಳಿದಾಸ ೫-ಜೀವನಚೈತ್ರ ೬-ಹಾವಿನಹೆಡೆ ೭-ಎರಡುಕನಸು
೮-ಹಾಲುಜೇನು ೯-ಸಂಪತ್ತಿಗೆಸವಾಲ್ ೧೦-ಸನಾದಿಅಪ್ಪಣ್ಣ ೧೧-ಭಕ್ತಪ್ರಹ್ಲಾದ
೧೨-ಬಬ್ರುವಾಹನ ೧೩-ನಾನೊಬ್ಬಕಳ್ಳ ೧೪-ರಾಜನನ್ನರಾಜ ೧೫-ಭಾಗ್ಯವಂತರು
೧೬-ನಾನಿನ್ನಮರೆಯಲಾರೆ ೧೭-ಶಂಕರ್ ಗುರು ೧೮-ಬಂಗಾರದಮನುಷ್ಯ ೧೯-ಮಯೂರ ೨೦-ಶಬ್ದವೇದಿ ೨೧-ಭಕ್ತಕುಂಬಾರ ೨೨-ಹೊಸಬೆಳಕು ೨೩-ಗಿರಿಕನ್ಯೆ (+/-....?)
೨೪-ಬಂಗಾರದಪಂಜರ.

‘ ಹಾಗಂತ ಅವ್ನು ನಿಮಗೆ ಕಂಪ್ಲೇಂಟ್ ಕೊಟ್ಟಿದ್ದನಾ, ಕಂಪ್ಲೇಂಟ್ ಕೊಟ್ಟಿದ್ದನಾ? ‘- ಇದು ಯಾವಚಿತ್ರದ್ದು ಸಾರ್
-ರಾಮಮೋಹನ

shashikiran.m's picture
25
Apr
2011
1:59

Idu Parashuram chitraddu

bhalle's picture
26
Apr
2011
2:00

+1

bhalle's picture
26
Apr
2011
1:59

1,3,6,20, ತಪ್ಪಾಗಿದೆ ...
ಧನ್ಯವಾದಗಳು ರಾಮಮೋಹನ್

ನಂದೀಶ್ ಬಂಕೇನಹಳ್ಳಿ's picture
25
Apr
2011
3:28

೨.ಕಸ್ತೂರಿ ನಿವಾಸ.
೫.ಕಸ್ತೂರಿ ನಿವಾಸ.
೭.ಎರಡು ಕನಸು.
೧೦.ಸನಾದಿ ಅಪ್ಪಣ್ಣ.
೧೧.ಭಕ್ತ ಪ್ರಹ್ಲಾದ.
೧೨.ಬಬ್ರುವಾಹನ.
೧೪.ರಾಜಾ ನನ್ನ ರಾಜಾ.
೧೫.ಭಾಗ್ಯವಂತರು.
೧೮.ಬಂಗಾರದ ಮನುಷ್ಯ.
೧೯.ಮಯೂರ.
೨೨.ಹೊಸಬೆಳಕು.
೨೩.ಬಂಗಾರದ ಪಂಜರ.

bhalle's picture
26
Apr
2011
2:02

ಐದನೆಯ ಉತ್ತರ ತಪ್ಪಾಗಿದೆ...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಂದೀಶ್

bhalle's picture
29
Apr
2011
6:35

ರಸಪ್ರಶ್ನೆಯಲ್ಲಿ ಭಾಗವಹಿಸಿದ ಹಾಗೂ ಪ್ರತಿಕ್ರಯಿಸಿದ ಸಕಲ ಸಂಪದಿಗರಿಗೂ ಅನಂತ ಧನ್ಯವಾದಗಳು ... ಎಲ್ಲ ಉತ್ತರಗಳನ್ನು ನೋಡುವಾಗ ಒಂದು ಪ್ರಶ್ನೆಯನ್ನುಳಿದು ಮಿಕ್ಕೆಲ್ಲಕ್ಕೂ ಉತ್ತರ ನಿಮಗೆ ದೊರಕಿದೆ ... ತಿಳಿಯದೇ ಇದ್ದದ್ದು ಎಂದರೆ ಪ್ರಶ್ನೆ ೦೩ -> ’ಸಾಕ್ಷಾತ್ಕಾರ’

ಮತ್ತೊಮ್ಮೆ ಪ್ರಶ್ನೆಗಳ ಉತ್ತರಗಳು ಹೀಗಿವೆ:

೦೧. ಚಲಿಸುವ ಮೋಡಗಳು

೦೨. ಕಸ್ತೂರಿ ನಿವಾಸ

೦೩. ಸಾಕ್ಶಾತ್ಕಾರ

೦೪. ಕವಿರತ್ನ ಕಾಳಿದಾಸ

೦೫. ಜೀವನ ಚೈತ್ರ

೦೬. ಶಬ್ದವೇಧಿ

೦೭. ಎರಡು ಕನಸು

೦೮. ಹಾಲು ಜೇನು

೦೯. ಸಂಪತ್ತಿಗೆ ಸವಾಲ್

೧೦. ಸನಾದಿ ಅಪ್ಪಣ್ಣ

೧೧. ಭಕ್ತ ಪ್ರಹ್ಲಾದ

೧೨. ಬಭ್ರುವಾಹನ

೧೩. ನಾನೊಬ್ಬ ಕಳ್ಳ

೧೪. ರಾಜ ನನ್ನ ರಾಜ

೧೫. ಭಾಗ್ಯವಂತರು

೧೬. ನಾ ನಿನ್ನ ಮರೆಯಲಾರೆ

೧೭. ಶಂಕರ್ ಗುರು

೧೮. ಬಂಗಾರದ ಮನುಷ್ಯ

೧೯. ಮಯೂರ

೨೦. ಆಕಸ್ಮಿಕ

೨೧. ಭಕ್ತ ಕುಂಬಾರ

೨೨. ಹೊಸ ಬೆಳಕು

೨೩. ಗಿರಿಕನ್ಯೆ

೨೪. ಬಂಗಾರದ ಪಂಜರ