ತನ್ನ ತಾ ತಿಳಿಯುವಿಕೆ

ತನ್ನ ತಾ ತಿಳಿಯುವಿಕೆ

ಕವನ

 

 ತನ್ನ ತಾ ತಿಳಿಯುವಿಕೆ 

 

ಮೂರ್ತೆತೆಯನ್ನು ತೆಗೆದು ಹಾಕೆ

ಶೇಷವಾಗುಳಿಯುವುದೆ ಅಮೂರ್ತತೆ

ಅನುಭೂತಿ ಆಕಾರವೆಂಬಾವರಣಗಳ

ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ

ರೂಪವನು ಹರಿಯಬಿಟ್ಟಾಗ ಜೀವನ ನೌಕೆ

ತಲುಪಬಲ್ಲದು  ' ಅರೂಪ ಸಾಗರ ' 

 

ಸೀಮಾನೆಲೆಯಿಂದ ನೌಕೆ ಮುಕ್ತವಾದಾಗ 

ಅಸೀಮತೆಯಲಿ ಲೀನ ಸಾಧ್ಯ

ಮೂರ್ತತೆಯಿಂದ ಮುಕ್ತವಾದಾಗ

ಅಮೂರ್ತತೆಯ ದರ್ಶನ ಲಭ್ಯ

 

ಆಕಾರದೆಡೆಗೆ ನಿಷ್ಟೆಯನು ನೆಟ್ಟು 

ನಿರಾಕಾರದೆಡೆ ಪಯಣ ಹೇಗೆ ಸಾಧ್ಯ? 

ಮೂರ್ತಿ ಪೂಜೆಯುಲಿ ವ್ಯಸ್ತನಾದವ 

ತನ್ನ ತಾ ತಿಳಿಯಲದ್ಹೇಗೆ ಸಾಧ್ಯ?

 

Comments