ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 79 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ
guruve's picture
Guruprasad D N
01
Sep
2011
ಲೇಖನ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ 

...
ಪ್ರತಿಕ್ರಿಯೆಗಳು: 2
ಹಿಟ್ಸ್ : 339
ನಮ್ಮ ಮೆಟ್ರೋ
bhaashapriya's picture
bhaashapriya CS
29
Nov
2010
ಲೇಖನ

ಚಿತ್ರ :Clickindia

ಬಹಳಾ ವರ್ಷಗಳಾಗಿತ್ತು...

ಪ್ರತಿಕ್ರಿಯೆಗಳು: 8
ಹಿಟ್ಸ್ : 976
ದೇಹವೆಂಬ ದೇವಾಲಯ
ramaswamy's picture
ಡಿ.ಎಸ್.ರಾಮಸ್ವಾಮಿ
16
Apr
2010
ಪುಟ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’


ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು...

ಪ್ರತಿಕ್ರಿಯೆಗಳು: 3
ಹಿಟ್ಸ್ : 978
ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
07
Feb
2006
ಪುಟ

ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,538
ವ್ಯವಹಾರ ಚತುರರಿಗೆ ಮಾತೇ ಭಂಡವಾಳ
addoor's picture
ಅಡ್ಡೂರು ಕೃಷ್ಣ ರಾವ್
26
Dec
2011
ಲೇಖನ

ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 212
ದಲ್ಲಾಳಿ
uday_itagi's picture
ಉದಯ್ ಇಟಗಿ
09
Apr
2010
ಪುಟ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ...

ಪ್ರತಿಕ್ರಿಯೆಗಳು: 6
ಹಿಟ್ಸ್ : 969
ಅಂತರಜಾಲಕ್ಕೆ ಅಂಕುಶದ ವಿರುದ್ಧ ವಿಕಿಪೀಡಿಯ ಪ್ರತಿಭಟನೆ
uniquesupri's picture
ಸುಪ್ರೀತ್.ಕೆ.ಎಸ್
18
Jan
2012
ಲೇಖನ

ಅಂತರಜಾಲವನ್ನು ಪ್ರಬುದ್ಧ ಹಾಗೂ ಪರಿಣಾಮಕಾರಿ ಸುದ್ದಿ ಮಾಧ್ಯಮವಾಗಿ ಸರಕಾರಗಳು ಗುರುತಿಸಲು ಶುರುಮಾಡಿದ್ದು ಇತ್ತೀಚೆಗಷ್ಟೇ. ಅರಬ್ ಸ್ಪ್ರಿಂಗ್ ಎಂದು ಖ್ಯಾತವಾದ ಅರಬರ ನಾಡಿನ...

ಪ್ರತಿಕ್ರಿಯೆಗಳು: 8
ಹಿಟ್ಸ್ : 296
ಪ್ರಶ್ನೆ ಉತ್ತರಗಳೆಂಬ ಬಿಂಬ ಪ್ರತಿಬಿಂಬ!
uniquesupri's picture
ಸುಪ್ರೀತ್.ಕೆ.ಎಸ್
25
Nov
2009
ಪುಟ

ಸ್ವಘಟ್ಟಿ ಯಾರು, ಸ್ವಘಟ್ಟಿ ಇರುವುದು ಯಾವ ರೂಪದಲ್ಲಿ, ಸ್ವಘಟ್ಟಿ ಹೆಣ್ಣೋ ಗಂಡೋ, ಊಟವಾದ ಮೇಲೆ ಎಲೆಅಡಿಕೆ ಹಾಕುವ ಅಭ್ಯಾಸವಿದೆಯೇ,  ಸ್ವಘಟ್ಟಿಯ ಲೈಂಗಿಕ ಆಸಕ್ತಿಗಳು ಎಂಥವು...

ಪ್ರತಿಕ್ರಿಯೆಗಳು: 29
ಹಿಟ್ಸ್ : 1,605
ಸಂಗೀತಗಾರರು ಹಾಗೂ ಹಸುವು.
naasomeswara's picture
ನಾ.ಸೋಮೇಶ್ವರ
11
May
2010
ಬ್ಲಾಗ್ ಬರಹ

ವಿಷ್ಣುಶರ್ಮ ಹಾಗೂ ಶಂಕರಭಟ್ಟ ಇಬ್ಬರು ಸಂಗೀತಗಾರರು. ಇವರಿಬ್ಬರು ಒಬ್ಬರನ್ನೊಬ್ಬರು ಮೀರಿಸುವ ಸಂಗೀತಗಾರರು. ಹಾಗಾಗಿ ಇವರಿಬ್ಬರ ನಡುವೆ ಯಾವಾಗಲೂ ಸ್ಪರ್ಧೆಯಿರುತಿತ್ತು. ೧೫...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,062

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ !

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ !

ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು.
ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ.
ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ,ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ,ಎಲ್ಲಿಂದೆಲ್ಲಿಗೋ
ಲಿಂಕ್ ಕೊಟ್ಟು ಇನ್ನೆಲ್ಲೋ ಶಾಕ್ ಕೊಟ್ಟು ಕೊನೆಗೆ ಅದು ಹ್ಯಾಗೋ circuit complete ಮಾಡೇ ಬಿಡುತ್ತಾರೆ!
ನಾನು ಕತೆಗಾರನಲ್ಲ.
***
ನಾನಾಗ ಐದನೇ ಕ್ಲಾಸು.ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ರ ವಿದ್ಯಾರ್ಥಿ.
ಸದರಿ ಶಾಲೆಯ system ಸ್ವಲ್ಪ ವಿಚಿತ್ರ ಇತ್ತು.ನಾಲ್ಕನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ತರಗತಿಗಳಿದ್ದ
ಈ ಶಾಲೆ ಬೆಳಿಗ್ಗೆ ಏಳರಿಂದ ಮಧ್ಯಾನ್ಹ ಹನ್ನೆರಡರವರೆಗೂ "ಶಾಲೆ ನಂ.2" ಎಂದು ಕರೆಸಿಕೊಳ್ಳುತ್ತಿತ್ತು.
ಮಧ್ಯಾನ್ಹ ಹನ್ನೆರಡರಿಂದ ಸಂಜೆ ಆರರವರೆಗೂ ಇದೇ ಸ್ಕೂಲು "ಶಾಲೆ ನಂ.14" ಎಂದು
ಗುರುತಿಸಲ್ಪಡುತ್ತಿತ್ತು.ಆಗ ಒಂದರಿಂದ ಮೂರನೇ ತರಗತಿಗಳು ನಡೆಯುತ್ತಿದ್ದವು.

ಇಂಥ ಶಾಲೆ ನಂ.2 ರಲ್ಲಿ ನಾನಾಗ ಐದನೇ ಕ್ಲಾಸಿನಲ್ಲಿದ್ದೆ.ಖಡಕ್ ಮೇಷ್ಟ್ರು.ಗಾಂಧೀ ಟೋಪಿ ಮತ್ತು ಪಂಜೆ
ಧರಿಸುತ್ತಿದ್ದ ಅವರು ನಮ್ಮಷ್ಟೇ ಎತ್ತರವಿದ್ದರೂ ಕೂಡ ನಮ್ಮಲ್ಲೊಂದು ವಿಚಿತ್ರ ಭಯ ಮೂಡಿಸಿದ್ದರು.
ಆಗಷ್ಟೇ ನಮಗೆ ಇಂಗ್ಲೀಶ್ syllabus ಶುರುವಾಗಿತ್ತು.ಮನೆಯಲ್ಲಿ ಅಕ್ಕ ನನ್ನ ಒಂದನೇ ಕ್ಲಾಸಿನಿಂದಲೇ ಇಂಗ್ಲೀಶ್
ಪಾಠ ಶುರು ಮಾಡಿಬಿಟ್ಟಿದ್ದರಿಂದ ಐದನೇ ಕ್ಲಾಸಿನ ಇಂಗ್ಲೀಷಿನ ಬಗ್ಗೆ ನನಗೊಂಥರಾ ತಾತ್ಸಾರ ಬಂದಂತಿತ್ತು.
ಆದರೆ ಪಾಪ,ಮೇಷ್ಟ್ರು ಅತ್ಯಂತ ಶ್ರದ್ಧೆಯಿಂದ ನಮಗೆಲ್ಲ ಇಂಗ್ಲೀಶ್ ಕಲಿಸುತ್ತಿದ್ದರು. ಬೆಳಿಗ್ಗೆ ಮೊದಲನೇ
period ನಿಂದಲೇ "ದಿ ವಿಂಡೋ,ದಿ ಡೋರ್.." ಎಂದು ಆಂಗಿಕವಾಗಿ ತೋರಿಸುತ್ತಲೂ,
ಜೊತೆಗೆ ನಿಜವಾದ ಕಿಟಕಿ,ಬಾಗಿಲುಗಳನ್ನು ದರುಶನ ಮಾಡಿಸುತ್ತಲೂ ಇಂಗ್ಲೀಷನ್ನು ಕಲಿಸುತ್ತಿದ್ದರು.

ಇಲ್ಲೊಂದು ವಿಷಯ ಹೇಳಲೇಬೇಕು:ಮುಂದೆ ಹೈಸ್ಕೂಲ್,ಕಾಲೇಜಿಗೆ ಹೋದಂತೆಲ್ಲ ಪ್ರತಿಯೊಂದು ವಿಷಯಕ್ಕೂ
ಬೇರೆ ಬೇರೆ ಮೇಷ್ಟ್ರು,ಬೇರೆ ಬೇರೆ periodಗಳು ಬದಲಾಗುತ್ತಿದ್ದುದನ್ನು ನೋಡಿದ ಬಳಿಕ ನಮ್ಮ ಹಳೆಯ ಪ್ರೈಮರಿ
ಸ್ಕೂಲ್ ಮೇಷ್ಟ್ರುಗಳ ಆಲ್ ರೌಂಡರ್ ಆಟ ನೋಡಿ ಬೆರಗಾಗಿದ್ದೂ ಉಂಟು.ಯಾಕೆಂದರೆ ನಮಗೆಲ್ಲ ಪ್ರೈಮರಿಯಲ್ಲಿ
ಒಂದು ಕ್ಲಾಸಿಗೆ ಒಬ್ಬರೇ ಮೇಷ್ಟ್ರು.ಅವರೇ ಕನ್ನಡ ಕಲಿಸಬೇಕು.ಅವರೇ ಭೂಗೋಳ ಕಲಿಸಬೇಕು.
ಅವರೇ ದಿ ವಿಂಡೋ,ದಿ ಡೋರ್ ಅನ್ನಬೇಕು.ಅವರೇ ವಿಜ್ಞಾನದ ಸೂತ್ರ ಕಲಿಸಬೇಕು ಮತ್ತು ಅವರೇ
ಕೈಯಲ್ಲೊಂದು ಮರದ ಕೋನಮಾಪಕ ಹಿಡಿದು ಲಂಬಕೋನ-ವಿಶಾಲಕೋನ ಅಂತ ರೇಖಾಗಣಿತ ಕಲಿಸಬೇಕು..
ಬಹುಶಃ ಇದೇ ಕಾರಣಕ್ಕೆ ಏನೋ,ಒಂದರಿಂದ ಏಳನೇ ಕ್ಲಾಸಿನವರೆಗೆ ನನಗೆ ಕಲಿಸಿದ ಎಲ್ಲ ಮೇಷ್ಟ್ರು,
ಮಿಸ್ಸುಗಳ ಹೆಸರುಗಳನ್ನು ನಾನಿನ್ನೂ ಮರೆತಿಲ್ಲ.
ಆದರೆ ಬಹುತೇಕ ಹೈಸ್ಕೂಲು-ಕಾಲೇಜುಗಳ ಮೇಷ್ಟ್ರುಗಳ ಹೆಸರು ನೆನಪಿಲ್ಲ..

ಹೀಗಿದ್ದ ನಮ್ಮ ಪ್ರೈಮರಿ ಮೇಷ್ಟ್ರುಗಳ ತರಹೇವಾರಿ ಕೆಲಸದ ಮಧ್ಯೆ ಅವರಿಗೆ ಮತ್ತೊಂದು ಕೆಲಸವೂ ಇತ್ತು.
ಆಗಾಗ ನಮಗೆಲ್ಲ ಅವರು ನೀತಿಪಾಠ ಹೇಳಿಕೊಡಬೇಕಿತ್ತು.ಸಾಲದೆಂಬಂತೆ ನಮ್ಮ ಇನ್ನಿತರ extra curriculum
activities ಬಗ್ಗೆ ಗಮನ ಕೊಡಬೇಕಾಗಿತ್ತು. ಅಂಥ activities ನ ಮುಂದುವರೆದ ಭಾಗವೆಂದರೆ ಡೈರಿ!
ಆಗ ನಾವೆಲ್ಲಾ ಒಂದು ಡೈರಿ maintainಮಾಡಬೇಕಾಗಿತ್ತು.
ಅದರ ಹೆಸರು 'ದಿನಕ್ಕೊಂದು ಒಳ್ಳೆಯ ಕೆಲಸ' ಅಂತ.ಅದರಲ್ಲಿ ಪ್ರತಿದಿನ ನಾವೇನು ಒಳ್ಳೆಯ ಕೆಲಸ
ಮಾಡಿದೆವು ಅಂತ ಬರೆದು ಮೇಷ್ಟ್ರಿಗೆ report ಮಾಡಬೇಕಾಗಿತ್ತು ಮತ್ತು ಪ್ರತಿದಿನ ಮೇಷ್ಟ್ರು ಅದನ್ನು
ನೋಡಿ ಸಹಿ ಮಾಡಬೇಕಾಗುತ್ತಿತ್ತು.

ಆದರೆ ಮೇಷ್ಟ್ರಿಗೆ ತಮ್ಮದೇ ಆದ ನಾನಾ ರೀತಿಯ ಕೆಲಸ,ಜಂಜಡಗಳಿದ್ದವಲ್ಲ? ಹೀಗಾಗಿ ಅವರು ನಮ್ಮಂಥ ಪಿಳ್ಳೆಗಳ
ಒಳ್ಳೊಳ್ಳೆಯ (?) ಕೆಲಸಗಳನ್ನು ಓದುವ ಗೋಜಿಗೆ ಹೋಗದೆ ಕಣ್ಣುಮುಚ್ಚಿ ಸಹಿ ಗೀಚುತ್ತಿದ್ದರು.ಇದೆಲ್ಲದರ ಮಧ್ಯೆ ಡೈರಿ
maintain ಮಾಡುವದುನನಗೆ ಭಯಂಕರ ಕಿರಿಕಿರಿ ಅನಿಸುತ್ತಿತ್ತು.ಮಾಡಲಿಕ್ಕೆ ಯಾವುದೂ ಒಳ್ಳೆಯ ಕೆಲಸ ಸಿಗದೇ ಕಂಗಾಲಾಗುತ್ತಿದ್ದೆ.ಇಷ್ಟಕ್ಕೂ ಏನು ಬರೆಯಬೇಕೆಂದು ನಮಗೂ ಗೊತ್ತಿರಲಿಲ್ಲ.ಹೋಗಲಿ,ಯಾವದು ಒಳ್ಳೆಯ ಕೆಲಸ,
ಯಾವುದು ಕೆಟ್ಟ ಕೆಲಸ ಎನ್ನುವದೂ ನಮಗೆ ಆಗ ಗೊತ್ತಿತ್ತೋ ಇಲ್ಲವೋ,ಒಟ್ಟಿನಲ್ಲಿ ನಾವು ಡೈರಿ ಬರೆಯುತ್ತಿದ್ದೆವು
ಮತ್ತು ಅವರು ಸೈನು ಗೀಚುತ್ತಿದ್ದರು.

ಒಂದುದಿನ, ಮೇಷ್ಟ್ರು ಮೂಡು ಚೆನ್ನಾಗಿತ್ತೋ ಅಥವಾ ನನ್ನ ಗ್ರಹಚಾರ ಕೆಟ್ಟಿತ್ತೋ ಗೊತ್ತಿಲ್ಲ; ಆವತ್ತು ಮೇಷ್ಟ್ರಿಗೆ
ನನ್ನ ಮೇಲೆ ಕೊಂಚ ಜಾಸ್ತಿಯೇ ಪ್ರೀತಿ ಉಕ್ಕಿ ಹರಿಯಿತು.ಪರಿಣಾಮವಾಗಿ ನನ್ನ ಡೈರಿಯ ಪುಟಗಳನ್ನು
random ಆಗಿ ಚೆಕ್ ಮಾಡುತ್ತಬಂದರು.ಆಮೇಲೆ ಕಣ್ಣು ಕಿರಿದು ಮಾಡಿಕೊಂಡು ಪ್ರತಿ ಪುಟವನ್ನೂ ಬಿಡದೇ
ಓದುತ್ತ ಬಂದರು.ತಿರುಗಿ ತಿರುಗಿ ಮತ್ತೇ ಮತ್ತೇ ನಸುನಗುತ್ತ ಓದಿದರೂ,ಓದಿದರೂ,ಓದಿದರೂ..
ನಂತರ ರಪರಪನೆ ಬೆನ್ನಿಗೆ ಬಾರಿಸತೊಡಗಿದರು..
"ಲೇ ಭಟ್ಟ! ನಿಮ್ಮ ಮನೇಲಿ ಊಟಕ್ಕೇನು ನೀವು ತಿನ್ನೋದಿಲ್ಲೇನು? ಬರೇ ಬಾಳೆಹಣ್ಣು ತಿಂದು
ಚಹಾ ಕುಡೀತಿರೇನು..?" ಅನ್ನುತ್ತ ಮತ್ತೆರೆಡು ಬೆನ್ನಿಗೆ ಬಿಟ್ಟರು!

ಆಗಿದ್ದಿಷ್ಟೆ: ಮಾಡಲು ಯಾವದೇ ಒಳ್ಳೆಯ ಕೆಲಸ ಸಿಗದೇ ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ alternate
ದಿನಕ್ಕೊಮ್ಮೆ ಎರಡೇ ಕೆಲಸ ಮಾಡುತ್ತಿದ್ದೆನೆಂದು ಡೈರಿ ಹೇಳುತ್ತಿತ್ತು.ಅದೇನೆಂದರೆ:
1. ಇವತ್ತು ಮನೆಗೆ ಚಹಾಪುಡಿ ತಂದೆ.
2. ದಾರಿಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಕಸದ ತೊಟ್ಟಿಯಲ್ಲಿ ಹಾಕಿದೆ.

ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳಿಗೇ ಯಾಕೆ ಜಾಸ್ತಿ option ಗಳಿವೆ ಅಂತ ಇವತ್ತಿಗೂ ಗೊತ್ತಾಗಿಲ್ಲ.

***
ವಾರ್ಷಿಕ ಪರೀಕ್ಷೆಯೆಂದರೆ ನನಗೆ ಯಾವಾಗಲೂ ಭಯ.ಸಾಮಾನ್ಯವಾಗಿ ಎಲ್ಲರೂ ಒಂದೇ ಸಲ ಪರೀಕ್ಷೆ ಬರೆದರೆ
ನಾನು ಒಂದೇ question ಪೇಪರಿಗೆ ಎರೆಡೆರಡು ಸಲ ಬರೀಬೇಕಿತ್ತು.ಒಮ್ಮೆ ಶಾಲೆಯಲ್ಲಿ ಮತ್ತೊಮ್ಮೆ ಮನೆಯಲ್ಲಿ!
ಪರೀಕ್ಷೆಯಲ್ಲಿನ ಉಳಿದ ವಿಷಯಗಳನ್ನು ಅಕ್ಕ ನೋಡಿಕೊಂಡರೆ ಗಣಿತ ವಿಷಯವನ್ನು ಮಾತ್ರ ತಂದೆ
ನೋಡಿಕೊಳ್ಳುತ್ತಿದ್ದರು.ಅಕ್ಕನದೇನೋ ಕಿರಿಕಿರಿಯಿರಲಿಲ್ಲ.
"ಪರೀಕ್ಷೆಯಲ್ಲಿ ಸರಿಯಾಗೇ ಬರ್ದಿದೀನಿ,ಇಲ್ಲಿ ಮಾತ್ರ ಏನೋ ಯಡವಟ್ಟು ಆಯಿತು.." ಅಂತ ಅಳುತ್ತ ಹೇಳಿದ
ಕೂಡಲೇ ಅಕ್ಕ ಸುಮ್ಮನಾಗುತ್ತಿದ್ದಳು.ಆದರೆ ತಂದೆಯ ಹತ್ತಿರ ಇದ್ಯಾವುದೂ ನಡೆಯುತ್ತಿರಲಿಲ್ಲ.
ಯಾಕೆಂದರೆ ಅದು ಗಣಿತ.ಅಲ್ಲಿ end result ಮಾತ್ರ ಮುಖ್ಯ! ಇಷ್ಟಕ್ಕೆ ಅಷ್ಟಾದರೆ ಅಷ್ಟಕ್ಕೆ ಎಷ್ಟು? ಎಂಬ
ಧಾಟಿಯ ಪ್ರಶ್ನೆಗಳಿಗೆ ನಾನು academic formula ಗಳಿಗೆ ಜೋತುಬಿದ್ದು ಲೆಕ್ಕ ಬಿಡಿಸುತ್ತಿದ್ದರೆ,ಅವರು
ತಮ್ಮದೇ ಆದ ಇನ್ಯಾವುದೋ street formula ಉಪಯೋಗಿಸಿ ವೇಗವಾಗಿ ಉತ್ತರ ತರುತ್ತಿದ್ದರು.
ಕೊನೆಗೆ ನೋಡಿದರೆ ಇಬ್ಬರ ಉತ್ತರವೂ ಒಂದೇ ಆಗಿರುತ್ತಿತ್ತು.ನಾನು ಪರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ
academic ಫಾರ್ಮುಲಾ ಉಪಯೋಗಿಸಬೇಕೋ ಅಥವಾ ತಂದೆಯ street ಫಾರ್ಮುಲಾ
ಉಪಯೋಗಿಸಬೇಕೋ ಎಂದು ತಿಳಿಯದೆ ಗೊಂದಲಕ್ಕೀಡಾಗಿ ಕಣ್ ಕಣ್ ಬಿಡುತ್ತಿದ್ದೆ.

ಹೀಗೆ ನನ್ನ ಒಂದನೇ ಕ್ಲಾಸಿನಿಂದ ಶುರುವಾದ ಈ ಪರೀಕ್ಷೆ ಎಂಬ ಗುಮ್ಮ ಅಕ್ಕ ಮದುವೆಯಾಗಿ ಅತ್ತೆ ಮನೆ
ಸೇರುವವರೆಗೂ- ಅಂದರೆ ತೀರ ನನ್ನ ಒಂಭತ್ತನೇ ಕ್ಲಾಸಿನವರೆಗೂ ಕಾಡಿತು.ಆದರೆ ಅದೇಕೋ ಗೊತ್ತಿಲ್ಲ,
ಇವತ್ತಿಗೂ ನನಗೊಂದು ವಿಚಿತ್ರ ಕನಸು ಬೀಳುತ್ತದೆ:
ನಾಳೆ ಕಾಲೇಜಿನಲ್ಲಿ digital electronics lab exam ಇದೆ ಅಂತ ಗೊತ್ತಿದ್ದರೂ ಹಿಂದಿನ ರಾತ್ರಿಯ ವರೆಗೂ
ನಾನು lab journals ಬರೆದಿರುವದಿಲ್ಲ!
ಇಂಥದೊಂದು ಕನಸು ಏನಿಲ್ಲವೆಂದರೂ ನೂರಾರು ಸಲ ಬಿದ್ದಿದೆ.ನಿದ್ರೆಯಲ್ಲೇ ಬೆವತಿದ್ದಿದೆ.ಇದೇ ಕಾರಣಕ್ಕೆ
ತೀರ ಒಮ್ಮೊಮ್ಮೆ ತಲೆಕೆಡಿಸಿಕೊಂಡು psychiatrist ನನ್ನು ಭೇಟಿ ಮಾಡುವ ಹಂತಕ್ಕೂ ಹೋಗಿ ನಿರ್ಧಾರ ಬದಲಿಸಿದ್ದೇನೆ.

ಸರಿ,ಪರಿಸ್ಥಿತಿ ಹೀಗಿದ್ದ ಸಂದರ್ಭದಲ್ಲಿ ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ವಾರ್ಷಿಕ ಪರೀಕ್ಷೆ ಬಂತು.
ತಗೊಳ್ರಪ,dual duty ಶುರು!ಮೊದಲನೇ ಎರಡು ದಿವಸ ಶಾಲೆಯಲ್ಲೂ,ಮನೆಯಲ್ಲೂ exam ಎದುರಿಸಿದ್ದಾಯ್ತು.
ಮೂರನೇ ದಿನ ಅದೇನು ತಲೆ ಕೆಟ್ಟಿತೋ ಏನೋ,ಶಾಲೆಯಲ್ಲಿ ಪೇಪರ್ ಬರೆದವನೇ ಸೀದಾ ಮನೆಗೆ ಬಂದು ಅಕ್ಕನ
ಮುಖಕ್ಕೆ answer sheet ಬೀಸಾಕಿ ಭಂಡ ಧೈರ್ಯದಿಂದ ಹೇಳಿದೆ:
"ಅದೇನು ಚೆಕ್ ಮಾಡ್ಕೋತೀಯೋ ಮಾಡ್ಕ! ಇನ್ನೊಂದು ಸಲ ಮತ್ತೇ ಮನೇಲಿ answer ಬರಿಯೋದಿಲ್ಲ .."
ಅಕ್ಕನಿಗೆ ಒಂದೆಡೆ ಗಾಭರಿ.ಇನ್ನೊಂದೆಡೆ ನಗು.
ಕ್ಲಾಸಿನಲ್ಲಿ ಟೀಚರ್ ಗೆ ಕೊಡಬೇಕಾಗಿದ್ದ answer sheet ನೇರವಾಗಿ ಮನೆಗೇತಂದು ಅಕ್ಕನ ಮುಖಕ್ಕೆ ಹಿಡಿದಿದ್ದೆ..

***
ಅದಾಗಿ-ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಕ್ಲೈಂಟು,ಪ್ರತಿದಿನ ಕಾನ್ ಕಾಲ್ಸು,ಪ್ರತಿದಿನ ಶೇವಿಂಗು,ಅದೇ
ಲ್ಯಾಪ್ ಟಾಪು,ಅದೇ ಆಪರೇಟಿಂಗ್ ಸಿಸ್ಟಮ್ಮು,ಅದೇ ಸರ್ವರ್ರು,ಅದೇ ಶೇರು,ಅವೆರಡರ ಕ್ರ್ಯಾಶು,
ಅವರು ಯಾಕೆ ಮಾತು ಬಿಟ್ಟರು,ಇವರು ಯಾಕೆ ಮರೆತು ಬಿಟ್ರು ಅಂತೆಲ್ಲ ತಲೆಚಿಟ್ಟು ಹಿಡಿದು ಕೊನೆಗೊಮ್ಮೆ
ಮನಸು ಮಾಲಿಂಗ,ಮಿದುಳು ಶಂಭುಲಿಂಗ ಅಂತ ಪರಸ್ಪರ ಮುನಿಸಿಕೊಂಡು ಮೈಮನವೆಲ್ಲ ಜರ್ಜರಿತಗೊಂಡಾಗ-
ಹೃದಯ ಮಾತ್ರ ಮೆಲ್ಲಗೇ ಸಂತೈಸತೊಡಗುತ್ತದೆ:

ಮುನಿಸೇಕೆ ಮಿತ್ರ? ಬಿಟ್ಟಾಕು ಎಲ್ಲ.. ಅಲ್ಲಿದೆ ನೋಡು ಬಾಂಬೆ ಮಿಠಾಯಿ. ಕೆಂಪು ಬಣ್ಣದ ಈ ಬಾಂಬೆ ಮಿಠಾಯಿಗೆ
ಶೇವಿಂಗೇ ಬೇಡ! ಬೇಕಾದರೆ ಮೀಸೆ ಹಚ್ಚಿಕೋ.ಮೀಸೆ ಬೇಸರವಾದರೆ ಅದನ್ನೇ ವಾಚು ಮಾಡಿಕೋ.
ಇನ್ನೂ ಬೇಸರವಾದರೆ ಮಿಠಾಯಿಯನ್ನೇ ಚಪ್ಪರಿಸು.ತಲ್ಲಣಿಸದಿರು ಮಿತ್ರ,ಕೊಂಚ ಹಿಂತಿರುಗಿ ನೋಡು.
ಇನ್ನೂ ಅಲ್ಲೇ ಇದೆ ನಮ್ಮೆಲ್ಲರ ಮಾಯಾಲಾಂದ್ರ;
ಜೊತೆಗೆ ಅದರ ಬೆಳಕೂ!

ಹಾಗೆ ಕಂಡ ಬೆಳಕಿನಲ್ಲಿ ಮಿದುಳು ಮತ್ತೇ ಕಾಗದದ ದೋಣಿಯಾದಂತೆ,ಮನಸು ಮಳೆನೀರಾದಂತೆ...

*********

Average: 4.6 (5 votes)
80 ಹಿಟ್ಸ್

ಪ್ರತಿಕ್ರಿಯೆಗಳು

venkatb83's picture
01
Mar
2012
1:10

.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ.
ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ,ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ,ಎಲ್ಲಿಂದೆಲ್ಲಿಗೋ
ಲಿಂಕ್ ಕೊಟ್ಟು ಇನ್ನೆಲ್ಲೋ ಶಾಕ್ ಕೊಟ್ಟು ಕೊನೆಗೆ ಅದು ಹ್ಯಾಗೋ circuit complete ಮಾಡೇ ಬಿಡುತ್ತಾರೆ!
:()))))))))

--------------------------------------------------------------------------
ನನಗೆ ಸುಂದರವಾದ ಭಯವಿದೆ.:))))))

ಈ ಮೇಲಿನ ಸಾಲುಗಳು ನಂಗೆ ಅತಿ ಹೆಚ್ ಸೂಟ್ ಆಗುತ್ತವೆ!

ನನ್ ಬರಹಗಳ ಹಿನ್ನೆಲೆ ಗಮನಿಸಿದವರಿಗೆ ಅದು ನಿಜ ಅನ್ನಿಸುತ್ತೆ... :(((

ರಾಘವೇಂದ್ರ ಅವ್ರೆ

ಈ ಬರಹವನ್ಣ ನಾ ರಾತ್ರಿಯೆ ಓದಿದೆ ಆಗಲೇ ಪ್ರತಿಕ್ರಿಯಿಸಬೇಕಿತ್ತು ಆದರೆ ತಡ ಆಗಿದ್ದರಿಂದ ಈಗ ನನ್ ಪ್ರತಿಕ್ರಿಯೆ ದಾಖಲಿಸುತ್ತಿರುವೆ...
ಈ ಬರಹ ಅದರ ಶೀರ್ಷಿಕೆ ಮಾತ್ರದಿಂದಲೇ ನನ ಗಮನ ಸೆಳೆಯಿತು..
ಚೆನ್ನಾಗಿ ಬರ್ದಿದೀರಾ, ನನಗ್ ಬಹು ಹಿಡಿಸಿತು...

ನಿಮ್ಮ ಬಾಲ್ಯದ ಅನುಬಹವವನ್ಣ ಅದರಲ್ಲೂ ಎರಡು ಪರೀಕ್ಷೆ!
ನನಗೆ ನನ್ ಅದೇ ತರಹದ ಪಜೀತಿ ನೆನಪಿಸಿತು..
ನಮ್ಮಣ್ಣ ನನಗೂ ಮನೇಲಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದ...
ಶಾಲೇಲೂ ಬರೆಯಬೇಕಿತ್ತು:)))

ನಿಮ್ಮ ಕೆಲ ಅನುಭವಗಳು ನನ್ನವೇ ಎನ್ನುವಸ್ತು ಅಚ್ಚರಿ ಉಂಟುಮಾಡಿದವು......

ಮುನಿಸೇಕೆ ಮಿತ್ರ?
ಬಿಟ್ಟಾಕು ಎಲ್ಲ..

ಅಲ್ಲಿದೆ ನೋಡು ಬಾಂಬೆ ಮಿಠಾಯಿ. ಕೆಂಪು ಬಣ್ಣದ ಈ ಬಾಂಬೆ ಮಿಠಾಯಿಗೆ
ಶೇವಿಂಗೇ ಬೇಡ! ಬೇಕಾದರೆ ಮೀಸೆ ಹಚ್ಚಿಕೋ.ಮೀಸೆ ಬೇಸರವಾದರೆ ಅದನ್ನೇ ವಾಚು ಮಾಡಿಕೋ.
ಇನ್ನೂ ಬೇಸರವಾದರೆ ಮಿಠಾಯಿಯನ್ನೇ ಚಪ್ಪರಿಸು.ತಲ್ಲಣಿಸದಿರು ಮಿತ್ರ,ಕೊಂಚ ಹಿಂತಿರುಗಿ ನೋಡು.
ಇನ್ನೂ ಅಲ್ಲೇ ಇದೆ ನಮ್ಮೆಲ್ಲರ ಮಾಯಾಲಾಂದ್ರ;
ಜೊತೆಗೆ ಅದರ ಬೆಳಕೂ!

ಹಾಗೆ ಕಂಡ ಬೆಳಕಿನಲ್ಲಿ ಮಿದುಳು ಮತ್ತೇ ಕಾಗದದ ದೋಣಿಯಾದಂತೆ,ಮನಸು ಮಳೆನೀರಾದಂತೆ...
-----------------------------------------------------------------------------------------------------

+೧

ಬಾಂಬಾಯ್ (ನಂ ಕಡೆ ಅದನ್ನ ಹಾಗೆ ಕರೆವುದು) ಮಿಠಾಯಿ ನೆನಪಿಸಿ ನಮ್ಮ ಬಾಯ್ ನೀರೂರುತ್ತಿದೆ...

ಅದನ್ನು ನೆನಪಿಸಿದ ಕಾರಣಕ್ಕಾಗಿ ನನಗೆ ಒಂದು ಲೋಡು ಕಳಿಸಿ:)))

RaghavendraJoshi's picture
01
Mar
2012
5:38

ಸಪ್ತಗಿರಿವಾಸಿಗಳೇ,
ನಿಮ್ಮ ಈ ಪ್ರತಿಕ್ರಿಯೆ ನನಗೆ ತುಂಬ ಖುಷಿ ಕೊಟ್ಟಿದೆ.
ನಿಜ.ಇದು ಎಲ್ಲರ ಅನುಭವವೂ ಹೌದು.
ಎಲ್ಲರ ಬಾಲ್ಯದ ಸೊಲ್ಲೂ ಹೌದು..
ಧನ್ಯವಾದಗಳು. :-)