ತುಕಾಲಿ ಬಾಳು

ತುಕಾಲಿ ಬಾಳು

ಕವನ

ನನ್ನದು ತುಕ್ಕು ಹಿಡಿದ‌ ತುಕಾಲಿ ಬಾಳು

ಎಣ್ಣೆ ಸವರೋಕ್ಕಿಂತ‌ ಬಿಸಾಡೋದೆ ಮೇಲು

 

ಅನ್ನ‌ ಭಾಗ್ಯ‌ ಬಂದಾಯ್ತು

ನನ್ನ‌ ಭಾಗ್ಯ‌ ಯಾವತ್ತು?

ನನ್ನ‌ ಜಾತಕ ನೋ ಡೋಕ್ಕೋಗಿ ಗಿಳೀನೆ ಸತ್ತೋಯ್ತು.

ಮದುವೆಯಾದ‌ ಗಂಡಸಿನ‌ ಬಾಳಲಿ

ಹುಚ್ಚು ಹಿಡಿದ‌ ನಾಯಿ ಪಾಡು ಮಾಮೂಲಿ

 

ನಾನು ತಾಳಿ ಕಟ್ಟೋಹೊತ್ತು

ನಾದಸ್ವರ‌ ಊದುವವನಿಗೆ ಲಕ್ವಾ ಹೊಡೀತು

ಆವತ್ತೇ ಗೊತ್ತಾಯ್ತು, ಮದುವೆಗಿರೋ ತಾಕತ್ತು.

ಉಪ್ಪುಖಾರ‌ ರುಚಿ ಕಾಣದ‌ ಬಾಯಲಿ

ನನ್ನ‌ ಬಿಕಾರಿ ಗೀತೆ ಏನೆಂದು ಹಾಡಲಿ

 

ಅಣ್ಣ‍‍‍‍‍‍ ತಮ್ಮ‌ ದಾಯಾದಿ

ಹೆಂಡತಿ ಮಕ್ಕಳು ಇತ್ಯಾದಿ

ಕಾಡೋಕೆ ನಿಂತುಬಿಟ್ಟರೆ ಒಮ್ಮೆಲೆ

ಅಂತ‌ ಬಾಳು ಯಾಕ್ ಬಾಳ್ತೀಯ‌ ಹೋಗಿ ಸಾಯೋಲೆ.

ಸಾಯೋಕೆ ಮನಸ್ಸಾಗ್ತಿಲ್ಲ‌ ನಾನೇನು ಮಾಡಲಿ?

ಹೆಂಡತಿ ಮೇಲೆ ಕಡಿಮೆಯಾಗ್ಲಿಲ್ಲ‌ ಖಯಾಲಿ

 

ನನ್ನದು ತೂತು ಬಿದ್ದ‌ ಮಡಿಕೆಯಂತ‌ ಬಾಳು

ಎಷ್ಟು ಎಣ್ಣೆ ಕುಡಿಯುವುದು ನೀನೇ ಹೇಳು.

 

ಚಿತ್ರ್