ತೂಕ ಬೇಡ ಮನಸೇ

ತೂಕ ಬೇಡ ಮನಸೇ

ಕವನ

ಆಗಲೇ ಈಗಲೇ
ಮತ್ತಷ್ಟು ಮೀನಾಮೇಷ.
ಮಾಡುವುದೇ ಬಿಡುವುದೇ
ಕೊನೆಯಿಲ್ಲದ ಪೀಕಲಾಟ.
ಅನಿಸಿದಾಗ ಬೇಡವೆಂದ ಬುದ್ಧಿ
ಆಲೋಚಿಸಿದಾಗ ನಿರಾಕರಿಸಿದ ಮನ
ಏನೀ ಪರಿ ಯಾವುದು ಸರಿ.
ಬೇಡ ಈ ಮಾಪನ.
ಇಲ್ಲವೆಂದರೆ ಬೇಸರ
ಬೇಕೆಂದರೆ ಜಾಗರಣೆ
ಯಾರ ಕೈ ಮೇಲು
ಅಳೆಯಲೊಲ್ಲದ ಆಯಾಸ.
ವಿಶ್ರಮ ಕೇಳುವ ಅರಿವು
ಸುಖ ಬಯಸುವ ಮೈ.
ಇರುವುದೇ ಯಾ ಇಲ್ಲವಾಗುವುದೇ
ಆ ರಾಜಕುಮಾರನ ಸ್ಥಿತಿ.
ಹೆಚ್ಚೇನಿಲ್ಲ, ಕಡಿಮೆಯೂ ಇಲ್ಲ
ಎಷ್ಟು ಬೇಕೆನ್ನೆವುದು ಸ್ವನಿರ್ಧರಿತ.
ಮೆಟ್ಟಿಲಿಳಿದು ನಡೆದು
ಒಂದಷ್ಟು ನೀರು ಕುಡಿದು ಬರಲು
ಇಷ್ಟೇ ರಾದ್ಧಾಂತ!

ವಿನತೆ ಶರ್ಮ