ಧರೆ ಧರೆಯಲ್ಲಿ ಈ ವಸುಂಧರೆ

ಧರೆ ಧರೆಯಲ್ಲಿ ಈ ವಸುಂಧರೆ

ಕವನ

ಧರೆ ಧರೆಯಲ್ಲಿ ಈ ವಸುಂಧರೆ


ಧರತಿ ಅಮ್ಮನ ಮನದಾಳದ ಕರೆಯೊಲೆ


ಅನು ಅನುವು ಕನ್ನಡವಾಗಿ ಮೊಳಗಲಿ


ಕಸ್ತೂರಿ ಕಂಪಿನ ನಗುವು ನಮ್ಮೆಲ್ಲರ ಮೊಗದಲಿ


 


ಜ್ಯೋತಿ ಜ್ಯೋತಿಯಾಗಿ ಬೆಳಗಿದರೆ ಸಾಲದು


ಮನದ ಜ್ಯೋತಿ ಕನ್ನಡತಿ ಮೂಕಾಗಿ ಮಂಕಾಗಿರಲು


ಮನದ ಮೂಲೆ ಮೂಲೆಯ ಪರಭಾಷೆಯ ಅಂಧಕಾರ


ತೊಲಗಿ,ಕನ್ನಡತನವೇ ಉಸಿರಾಗಿ ಬೆಳಗಲಿ ಸದಾಕಾಲ


 


ಜನ್ಮ ಜನ್ಮಗಳ ಪುಣ್ಯವೋ ,ಪೂರ್ವ ಜನ್ಮದ ತಪಸ್ಸಿನ ಫಲವೊ


ಕಂದಮ್ಮಗಳಾಗಿ ಜನಿಸಿರುವೆವು ಕನ್ನಡಾಂಬೆಯ ಮಡಿಲಲ್ಲಿ


ಕನ್ನಡತನವೆ ನಮಗಿರದಿರಲು ನಮ್ಮ ಸ್ವಾಭಿಮಾನಕೆ ಬೆಲೆ ಇನ್ನೆಲ್ಲಿ?


ಭಾವನೆ ಭವ್ಯತೆಯ ಮಹಲಿನಲಿ,ಅನಾಥ ಮಗುವಾಗದಿರಲಿ ಕನ್ನಡತನ


 


ಕಾವ್ಯ -ಕವಿಗಳ,ಸಾಹಿತ್ಯ-ಸುಸಂಸ್ಕೃತರ ಆಲದ ಮರವಿದು ಕರ್ನಾಟಕ


ಪ್ರತಿ ಮಣ್ಣಿನ ಕಣ ಕಣದಲಿ ಹಸಿರು ಹಸಿರಾಗಿ ಹೊಮ್ಮಲಿ ಕನ್ನಡ


ಲೋಕದ ಮೂಲೆ ಮೂಲೆಯ ಜನರು ಆಧರಿಸುತ್ತಿರಲು ಕನ್ನಡ


ಕನ್ನಡಿಗರಾಗಿ ತಲೆಯೆತ್ತಿ ಬಾಳೋಣ ಅನ್ನುವದಾಗಲಿ ನಮ್ಮ ಹಠ


 

Comments