ಮುಲ್ಲಾನ ಬಳಿ ಒಂದು ಪ್ರೆಶ್ನೆ ಬರುತ್ತದೆ. ಪ್ರಪಂಚದಲ್ಲಿ ಯಾರು ನರಕಕ್ಕೆ ಹೋಗುತ್ತಾರೆ. ಯಾರು ಸ್ವರ್ಗಕ್ಕೆ ಹೋಗುತ್ತಾರೆಂದು ಕೇಳುತ್ತಾರೆ, ಆಗ ಆ ಮುಲ್ಲನೂ ನೀವೂ ನನ್ನೊಡನೆ ಬನ್ನಿ ಅವರನ್ನೇ ತೋರಿಸುತ್ತೇನೆ. ಎಂದೂ ಅವರನ್ನು ತನ್ನ ಮಹಡಿಯ ತಾರಸಿಯ ತೆರಸ್ಸ್ ಮೇಲೆ ಕರೆದುಕೊಂಡು ಹೋಗಿ ಎರಡು ಹೆಣಗಳನ್ನು ತೋರಿಸುತ್ತಾನೆ. ಇದರಲ್ಲಿ ಕೆಲವೇ ಜನ ಹೊತ್ತುಕೊಂಡು ಹೋಗುವ ದೃಷ್ಯ, ಆ ಮನುಷ್ಯ ನರಕಕ್ಕೆ ಹೋಗುತ್ತಾನೆ ಎನ್ನುತ್ತಾನೆ . ಮತ್ತೊಂದು ಬಹು ಜನರು ಆ ಹೆಣದ ಹೋಗುತ್ತಿದ್ದಾರೆಯೇ ಆತ ಸ್ವರ್ಗಕ್ಕೆ ಹೋಗುತ್ತಾನೆ. ಇದನ್ನು ನೀವು ನಂಬಬೇಕಲ್ಲ ಅದು ಹೇಗೆಂದರೆ, ಅವನ ಹಿಂದೆ ಅವನ ಸ್ನೇಹಿತರು ಬಂಧು ಬಾಂಧವರುಗಳು ನೆರೆಹೊರ ಜನರು ಅಂದರೆ ಆ ಧರ್ಮವಲ್ಲದ ಜನರು ಹೀಗೆ ಅನೇಕರಿದ್ದಾರೆ ಅವನೂ ಜನರನ್ನೂ ಸಂಪಾದಿಸಿದ್ದಾನೆ ಅಲ್ಲವೇ. ಅವನು ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾನೆ ಆದರೆ, ಮುಂದೆ ಹೋದ ಹೆಣದ ಹಿಂದೆ ಯಾವಜನರಿಲ್ಲ ಇಷ್ಟಕ್ಕೂ ಆತ ಶ್ರೀಮಂತ ಅವನು ಒಳ್ಳೆಯದನ್ನು ಮಾಡಿಲ್ಲ ಅದರಿಂದ ಜನರು ಬರಲಿಲ್ಲ.
ನೀವು ಎರಡನೇಯವನಂತೆ ಜನರನ್ನು ಸಂಪಾದಿಸಲು ಕಲಿಯಿರಿ ಎಂದು ಉತ್ತರ ಕೊಡುತ್ತಾನೆ.
ಆದರೆ, ಇಂದು ರೌಡಿಗಳ ಮಂತ್ರೀಗಳ ಮೋಸಗಾರರ ಲಂಚಕೊರರ ಕಳ್ಳರ ಹಿಂದೆ ಬಹು ಜನರಿರುತ್ತಾರೆ ಅದು ಮುಟ್ಟಾಳರ ಸಮಾಜ ಅದು ಬೇರೆ ಮಾತು ಅದ ಬಿಟ್ಟುಬಿಡಿ.
ಧಾರ್ಮಿಕ ಚಿಂತನೆಗಾಗಿ ಬಹುಜನರು ಬಹುಭಾಗಗಳಲಿ ಹುಡುಕುತ್ತಾರೆ. ನಿಜವಾದ ಧಾರ್ಮಿಕತೆ ಎಲ್ಲಿದೆಯೆಂದರೆ, ನಾವು ಬಾಳುವ ಬಾಳಿನಲ್ಲಿದೆ ಅದು ಹೇಗೆಂದರೆ, ತನ್ನ ತಂದೆತಾಯಿಯಿಂದ ಒಳ್ಳೆಯ ಮಗಳು ಮಗನೆಂದು ಶಿಪಾರಸ್ಸು ಪಡೆದರೆ, ತನ್ನ ಹೆಂಡತಿಗೆ ಒಬ್ಬ ಒಳ್ಳೆಗಂಡನಾಗಿರಬೇಕು ಹೆಂಡತಿ ಗಂಡನಿಗೆ ಒಳ್ಳೆ ಹೆಂಡತಿಯಾಗಿರಬೇಕು ಮಕ್ಕಳಿಗೆ ಒಳ್ಳೆ ಅಮ್ಮ ಅಪ್ಪನೆಂದೂ, ಸೋದರಿಸೋದರಲ್ಲಿ ಒಳ್ಳೆ ಸೋದರಿ ಸೋದರನೆಂದು, ನೆಂಟರಿಷ್ಟರಲ್ಲಿ ಒಳ್ಳೆಮನುಷ್ಯರೆಂದು, ಸೋಸೆ ಅಥವಾ ಅಳಿಯನಿಗೆ ಒಳ್ಳೆ ಅತ್ತೆ ಮಾವನಾಗಿಯು ನೆರೆಹೊರೆಯಲ್ಲಿ ಒಬ್ಬ ಒಳ್ಳೆವ್ಯೆಕ್ತಿಯಾಗಿ ಆ ಜನರು ಭಾವಿಸಿದಲ್ಲಿ ನೀವಿದ್ದಲ್ಲಿ ನಿಮಗೆ ಆ ಸ್ವರ್ಗವಿದ್ದರೆ..........? ಅದು ಸಿಗುವುದು ನಿಶ್ಚಯ ನಿಶ್ಚಯ ನಿಶ್ಚಯ ನಿಶ್ಚಯ.
ಧಾರ್ಮಿಕ ಚಿಂತನೆ
August 9, 2012 - 5:28pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಧಾರ್ಮಿಕ ಚಿಂತನೆ dhArmika ciMtane
ಒಳ್ಳೆಯ ವಿಷಯವನ್ನು ಸರಳವಾಗಿ ತಿಳಿಸಿಕೊಟ್ಟಿದ್ದೀರ ಗುಣಶೇಖರ ಮೂರ್ತಿಗಳೆ, ಅಭಿನಂದನೆಗಳು.
ಉ: ಧಾರ್ಮಿಕ ಚಿಂತನೆ dhArmika ciMtane
ಆತ್ಮೀಯರಾದ ಶ್ರೀಧರ್ ಬಂಡ್ರಿಯವರೇ,
ನಿಮ್ಮ ಈ ಪ್ರತಿಕ್ರಿಯೆಗೆ ನಾನು ಏಂದೂ ಚಿರಋಣಿ.
ಧನ್ಯವಾದಗಳು
ಉ: ಧಾರ್ಮಿಕ ಚಿಂತನೆ dhArmika ciMtane
ಕತೆಯಲ್ಲಿ ಹೇಳಿರುವ ನೀತಿ ಸತ್ಯ
.
ಹಳೆಯದೊಂದು ಸಿನಿಮಾದ ದೃಷ್ಯ ನೆನಪಿಗೆ ಬಂದಿತು. ಗೊರೂರು ಬರೆದ ಕತೆಯ ಆದಾರದ 'ಭೂತಯ್ಯನ ಮಗ ಅಯ್ಯು'
ಗುಳ್ಳನ ಅಪ್ಪ ಸತ್ತಾಗ ಹಳ್ಳಿಗೆ ಹಳ್ಳಿಯೆ ಹಿಂದೆ ಇರುತ್ತದೆ.
ಭೂತಯ್ಯ ಸತ್ತಾಗ , ಹೆಣ ಹೊರುವರು ಇಲ್ಲದೆ ಹೆಣವನ್ನು ಗಾಡಿಯಲ್ಲಿ ಹಾಕಿ ಅವನ ಮಗನೊಬ್ಬನೆ ಸಾಗುತ್ತಾನೆ
ಪಾರ್ಥಸಾರಥಿ
ಉ: ಧಾರ್ಮಿಕ ಚಿಂತನೆ dhArmika ciMtane
ಮೂರ್ತಿಯವರೆ ತು0ಬಾ ಚೆನ್ನಾಗಿ ಬರೆದಿದ್ದೀರಿ.
ಉ: ಧಾರ್ಮಿಕ ಚಿಂತನೆ dhArmika ciMtane
ಆತ್ಮೀಯರಾದ Shreenivas Hegde ಯವರೇ,
ನಿಮ್ಮ ಈ ಪ್ರತಿಕ್ರಿಯೆಗೆ ನಾನು ಏಂದೂ ಚಿರಋಣಿ.
ಧನ್ಯವಾದಗಳು
ಉ: ಧಾರ್ಮಿಕ ಚಿಂತನೆ dhArmika ciMtane
ಆತ್ಮೀಯರಾದ pArthasArati ಯವರೇ,
ನಿಮ್ಮ ಈ ಪ್ರತಿಕ್ರಿಯೆಗೆ ನಾನು ಏಂದೂ ಚಿರಋಣಿ.
ಧನ್ಯವಾದಗಳು