June 25, 2012 - 9:55pm
ನಾನು ನಂಬುವುದಿಲ್ಲ
ಯಾರಿಗೂ ಸೋಲದ ರಾವಣ
ಸೀತೆಗೆ ಸೋತನೆಂದರೆ..
ರಾವಣನಿಗೂ ಮುರಿಯದ ಧನಸ್ಸು
ರಾಮನಿಗೆ ಬಗ್ಗಿತೆಂದರೆ..
ನಾನು ನಂಬುವುದಿಲ್ಲ
ಬಸ್ಮಾಸುರನಿಗೆ ಹೆದರಿದ ಶಿವ
ಕಾಮನನ್ನು ಸುಟ್ಟನೆಂದರೆ,
ತನ್ನ ಮಗಳನ್ನೆ ಬೊಮ್ಮ
ಮದುವೆಯಾದನೆಂದರೆ..
ನಾನು ನಂಬುವುದಿಲ್ಲ
ಇಷ್ಟೆಲ್ಲ ನಾನು ಹೇಳಿದ ಮೇಲೂ
ನೀವು ಸುಮ್ಮನೆ ಇರುತ್ತೇನೆಂದರೆ
ನಾನು ನಂಬುವುದಿಲ್ಲ..
ಶಿವಪ್ರಸಾದ್ ಎಸ್.ಪಿ.ಎಸ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








