ನಡೆ

ನಡೆ

ಕವನ

ನಡೆ

ಮರಗಿಡದ ಹಾಗೇಕೆ ಬೇರ್ಬಿಟ್ಟು ನಿಂತಿರುವೆ
ಅಡಿಕಿತ್ತು ನಡೆದಾಡು ನಿಲ್ಲದಿರು ಎಂದಿಗೂ
ಬೇರಲ್ಲ ಕಾಲುಗಳು ನಿಂತಿರಲು ಒಂದುಕಡೆ
ಕಾಲು ಬೇರಾದಾಗ ಬೇರೆಲ್ಲಾ ಬರಿದಾಯ್ತು.
ಬೆಳೆದ ಬೇರ್ಕತ್ತರಿಸು ಬೇರ್ಪಡಿಸು ಕಾಲುಗಳ
ನಿಲ್ಲದಿರು ಓಡುತಿರು ಬೆಳೆಸದಿರು ಬೇರುಗಳ
ನಿಲ್ಲಲ್ಯಾತಕೆ ಸಾಲ ನಿನ್ದಿಲ್ಲಿ ಏನಿಲ್ಲ
ಓಡಲೋಡುತ ಬರುವುವೆಲ್ಲ ಸುಖವು
ಕಣ್ಣಿರಲಿ ಕಾಲ್ಗಳಿಗೆ ಕಿವಿಯುನಡೆಯುತಲಿರಲಿ
ನುಡಿದಂತೆ ನಡೆದಾಗ ಪರಿಮಳವು ಪಸರಿಸಿತು
ನಡೆಯುನಡೆಸುತ್ತಣ್ಣ ಹೊಟ್ಟೆಪಾಡು
ಕುಂತಿರುವ ಸಂತನಲು ಮನಸ್ಸು ನಡೆಯುತಲಿಹುದು
ನಡೆದಾಡೊ ವಿಗ್ರಹಕೆ ಉತ್ಸವವು ನಡೆಯುವುದು
ನಡೆಯ ನಿಲುಗಡೆ ಸಮಯನಿಂತ ಘಳಿಗೆ.
-: ಅಹೋರಾತ್ರ.