ನಮಗೆ ಎರಡನೇಯ ಹೆಣ್ಣು ಮಗು ಹುಟ್ಟಿದ ಸಂತೋಷದಲ್ಲಿ ನನ್ನ ಪತ್ನಿಗೆ ಬರೆದ ಗೀತೆ

ನಮಗೆ ಎರಡನೇಯ ಹೆಣ್ಣು ಮಗು ಹುಟ್ಟಿದ ಸಂತೋಷದಲ್ಲಿ ನನ್ನ ಪತ್ನಿಗೆ ಬರೆದ ಗೀತೆ

ಕವನ

 

ಸಿರಿಯಾಗಮನ ನಮಗಾಯಿತು ಕೇಳೆ ಸಿರಿರಮಣನ ಕರುಣೆ 
ಹರಿವಾಯುಗುರುಗಳೇ ಹರಸಿದರೆಮಗೆ ಹಸನಾಗಲಿ ಬವಣೆ |ಪ|
 
ಹೊಸ ಹೊಸ ಸಾಹಸ ದಿನ ದಿನ ಸಂತಸ ಅವನೊಬ್ಬನ ಕರುಣೆ
ಮಬ್ಬು ಬಿಡಿಸಿ ಹಿರಿ ಹಿಗ್ಗು ತಂದಿಹನು ಚಿಂತಿಸದಿರು ಜಾಣೆ|
ಹೆತ್ತ ತಾಯಿ ಹೊತ್ತ ಭೂಮಿ ತುತ್ತಿನ ಸಸಿ ನೀರು ನೀರೆಯೇ ತಾನೆ
ನಾವರಿತಿರೆ ಜನ ಜಗವೂ ಶೂನ್ಯ ಈ ಸಂತಸ ಮತ್ತೆಲ್ಲಿಯೂ ಕಾಣೆ ||1||
 
ಮಾನವತನವನು ಮರೆತರೆ ಪತನವು ತನುವಿನ ತನನವ ಮೆರೆ
ಅರಿವು ಹೊರಟರೆ ಮರಣ ಕರೆದಂತೆ ಮರುಳಾದರೆ ಮನೆ ಸೆರೆ
ಸರಿತಪ್ಪು ಗೊತ್ತಿಹುದು ಸರಿಪಡಿಸಬಹುದು ಇದೆಲ್ಲವೂ ಆದಿ ಲಿಖಿತ
ಸತತ ಅಚ್ಯುತನ ಮೆಚ್ಚಿ ಭಜಿಸುತಿರೆ ಈವ ಭಾಗ್ಯ ಭವನಾಶ ನಿಶ್ಚಿತ ||2||
 
                                                                   -ಜನಮೇಜಯ ಉಮ್ಮರ್ಜಿ