ನಮ್ಮೂರು

ನಮ್ಮೂರು

ಕವನ

ಕಣ್ಣು ತೆರೆದು ಗೊಣ್ಣೆ ಸುರಿಸಿದ ಊರೂ ನಮ್ಮೂರೆ

ಬೆಣ್ಣೆ ತಿಂದು ಗಿಣ್ಣು ಸವಿದ ಊರೂ ನಮ್ಮೂರೆ

ಹೆಣ್ಣು ಹುಡುಕಿ ಕಣ್ಣು ಪಡೆದ ಊರೂ ನಮ್ಮೂರೆ

ಝಣ ಝಣ ಹಣವೆಣಿಸಿದ ಊರೂ ನಮ್ಮೂರೆ

ಬಣ್ಣಿಸಲಿ ಹೇಗೆ ತಣಿಯಲಿ ಹೇಗೆ ಇದೇ ನಮ್ಮೂರೆಂದು

 

ಗಂಡು ಮೆಟ್ಟಿನ ನಾಡು, ಕೋಟೆ ಕೊತ್ತಲಗಳಿಗೆ  ಚಿತ್ರದುರ್ಗ

ದೇವನಗರಿ, ಬೆಣ್ಣೆ ದೋಸೆಗಳಿಗೆ ದಾವಣಗೆರೆ

ಮಳೆಯ ಮಾಂತ್ರಿಕ ಸ್ಪಷ೯ಕೆ, ಹೆಣ್ಣ ಹೊಂಬಣ್ಣಕೆ  ಶಿವಮೊಗ್ಗ

ತಂಪು ಗಾಳಿಗೆ, IT ಮೇಳಕೆ ಬೆಂಗಳೂರು

ನೋಡು ಬಾರಾ ನೋಡು ಬಾರಾ ಇದು ನಮ್ಮೂರ

 

ಮೈಸೂರ ಮಲ್ಲಿಗೆಯ ಘಮ - ಹಟ್ಟಿ ಚಿನ್ನದ ಗಣಿಯ ಸಂಭ್ರಮ

ಜೋಗ ಜಲಪಾತದ ಸಿರಿ - ದೂಧ್ ಸಾಗರದ ಐಸಿರಿ

ದಾಂಡೇಲಿಯ ಸೊಬಗು - ಸಹ್ಯಾದ್ರಿಯ ಬೆಡಗು

ಕಾಳಿ ಕಾವೇರಿಯರ ನೋಟ  - ಕೃಷ್ಣ ಭೀಮೆಯರ ತಟ

ನೋಡು ಬಾರಾ ನೋಡು ಬಾರಾ ಇದು ನಮ್ಮೂರ

 

ಗೊಮ್ಮಟೇಶ್ವರನ ನಿಲುವು - ಶ್ರೀರಂಗನ ಚೆಲುವು

ಉಗ್ರನರಸಿಂಹನ ಕೋಪ  - ತಲಕಾಡಿನ ಶಾಪ

ಓಂ ಕರಣಗೊಂಡ ಕಾರವಾದರ ತೀರ - ಚೆನ್ನಕೇಶವನ ಬೇಲೂರ

ತುಳು ಕೊಂಕಣಿ ಕೊಡವ - ಎಲ್ಲರೂ ಕೂಡಿ ಹಾಡುವ 

ನೋಡು ಬಾರಾ ನೋಡು ಬಾರಾ ಇದು ನಮ್ಮೂರ

 

ಬನವಾಸಿಯಿಂದ ಬೆಳಗಾವಿಯವರೆಗೆ

ಮೂಡಬಾಗಿಲಿನಿಂದ ಮಂಗಳೂರಿನವರೆಗೆ

ನೋಡು ಬಾರಾ ನೋಡು ಬಾರಾ ಇದು ನಮ್ಮೂರ