ನಮ್ಮೊಳಗೇ

ನಮ್ಮೊಳಗೇ

ಕವನ

Copyright © Mahesh Kumar KS 2016
https://maheshkumarks.wordpress.com/
ತನಗೆ ಬೇಕಾದ ಅಗತ್ಯ ಮತ್ತು ಅನಗತ್ಯಗಳನ್ನು ಬೇಡುತ್ತಾ, ಕಾಡುತ್ತಾ ಇದ್ದ ಮನುಷ್ಯರಿಂದ ತಪ್ಪಿಸಿಕೊಳ್ಳಲು ದೇವರು ಅವರ ಮನಸಿನಲ್ಲೇ ನೆಲೆಯಾಗಲು ನಿರ್ಧರಿಸಿಧ. ನಾ ಮಾಡುವುದೆಲ್ಲ ಸರಿ ಎಂದುಕೊಳ್ಳುವ ನಾವು ಎಂದಿಗೂ ನಮ್ಮ ನಡೆಯ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದಿಲ್ಲ. ಎಲ್ಲವೂ ದೇವರ ಆಟ ಎನ್ನುವ ನಾವು, ಒಳ್ಳೆಯ ಕೆಲಸ ಮಾಡುವವನನ್ನು ದೇವರು ಎಂದರೆ ಕೆಟ್ಟವನನ್ನು ರಾಕ್ಷಸ, ದೆವ್ವ ಎಂದೆಲ್ಲ ವರ್ಣನೆ ಮಾಡುತ್ತೇವೆ. ಆದರೆ ಮನುಷ್ಯ ಕೆಟ್ಟವನಲ್ಲ ಅವನನ್ನು ಹೊಕ್ಕ ಕೆಟ್ಟ ಯೋಚನೆಗಳು ದೆವ್ವದಂತೆ ಒಳಗೆ ಕುಳಿತಿರುತ್ತವೆ. ಅವು ಮಾತ್ರ ಕೆಟ್ಟವು. ಆತನ ವರ್ತನೆಯನ್ನು ದ್ವೇಷಿಸಬೇಕು. ಆತನನ್ನೇ ಅಲ್ಲ.
ಹೀಗೊಂದು ಸ್ವರಚಿತ ಕವನ –
ಎಲ್ಲಿಯೂ ಬಿಡದೆ ಕಾಡುವ ಮನುಜರ
ತಪ್ಪಿಸಿಕೊಳ್ಳಲು ಹೊಕ್ಕನು ದೇವರು ಅವರ ಒಳಗೇ,
ಕಾಣದ ದೇವರ ಹುಡುಕುತಾ ನಾ
ಹೊರಟೆ ಎಲ್ಲ ಮನುಜರ ಒಳಗೆ,
ದೇವರು ಕಾಣುವನೆಂದು ಹೊರಟೆನಗೆ
ಕಂಡೆನು ದೆವ್ವವನು ಹಲವರೊಳಗೆ,
ದೆವ್ವವೋ ದೇಹವಿಲ್ಲದ ಆತ್ಮ ಆದರೂ
ಮಾಡುತಲಿತ್ತು ಸಂಚು ಒಳಗೊಳಗೇ,
ಮತ್ತೊ ಬಿಡದೆ ಹುಡುಕಿದೆ ದೇವರ
ದೆವ್ವ ಎಂದಿತು ನನ್ನದೇ ಅಟ್ಟಹಾಸ ಇವರೊಳಗೆ,
ಹುಡುಕಿದೆ ದೇವರ ನನ್ನೊಳಗೆ ಅದಾಗಲೇ
ದೆವ್ವ ಹಾಳು ಮಾಡ ಹತ್ತಿತ್ತು ನನ್ನೊಳಗೆ,
ರಾತ್ರಿ ನಿದ್ದೆ ಕದ್ದಿತ್ತು, ಹಗಲಿನ ನೆಮ್ಮದಿ ಸತ್ತಿತ್ತು
ಬದುಕು ಎಲ್ಲಿದೆ ಭುವಿಯೊಳಗೆ,
ಏನೇನೋ ಇದೆಯಂತೆ ಅದಿನ್ನೇನೂ ನೋಡಬೇಕಂತೆ
ಮಾಡಬೇಕಂತೆ ಭುವಿಯೊಳಗೆ,
ಅಮ್ಮ ಅಂದಳು ನಾನೆಲ್ಲಾ ನೋಡಿರುವೆ,
ಅಮ್ಮ ಅಂದಳು ನಾನೆಲ್ಲಾ ನೋಡಿರುವೆ ನಿನ್ನೊಳಗೆ,
ಆಕೆಗೆ ಪ್ರಪಂಚವೇ ನನ್ನೊಳಗೆ
ನನ್ನ ನಗುವಿನೊಳಗೆ,
ನನ್ನ ನೆಮ್ಮದಿಯೊಳಗೆ
ನನ್ನ ಗೆಲುವಿನೂಳಗೆ,
ಅದ ಕೇಳಿ ಸತ್ತಿತ್ತು ದೆವ್ವ ಒಳಗೇ
-ಧನ್ಯವಾದ