19
June
2013

ನಾನು ಮತ್ತು ನನ್ನ ನೆರಳು

August 20, 2012 - 7:02pm
ku.sa.madhusudan

ಅನುಮಾನ ನನಗೆ

ಈ ನೆರಳು ನನ್ನದೋ

ಇಲ್ಲಾ

ಆ ನೆರಳೇ ನಾನೋ?

 

ಮಾತಾಡುತ್ತೇನೆ ನಾನು

ಮಾತಾಡುವುದಿಲ್ಲ ನೆರಳು

ನರಳುವುದು ನನ್ನಾತ್ಮ

ಮಾತಾಡಿದಾಗೆಲ್ಲ ನೆರಳು

 

ಅನಿವಾರ್ಯ  ನನಗೆ

ನೆರಳ ಇರುವಿಕೆ

ಅದು ಉಳಿದಿರಬಹುದಾದ ನನ್ನ

ಆತ್ಮಸಾಕ್ಷಿಯ ಪ್ರತೀಕ

 

ನಾನು ಸತ್ಯ

ನೆರಳು ಮಿಥ್ಯ

ನಾವಿಬ್ಬರು  ಯಾವಾಗಲೂ

ಜೊತೆಯಿರುವಂತದ್ದೇನು ಅಗತ್ಯ?

-------------------------------

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on
"ನಾನು ಸತ್ಯ ನೆರಳು ಮಿಥ್ಯ ನಾವಿಬ್ಬರು ಯಾವಾಗಲೂ ಜೊತೆಯಿರುವಂತದ್ದೇನು ಅಗತ್ಯ?" ಕವನ ಒಮ್ಮೆ ನೆರಳ ಅವಶ್ಯಕತೆ ಬಗ್ಗೆ ಯೋಚ್ಹೀಸುವಂತೆ ಮಾಡಿತು... ಉತ್ತರ ನನಗೂ ಸಿಗಲಿಲ್ಲ... ಆದರೆ ನೆರಳು ನಮ್ಮನ್ನ್ ಬಿಡಲಿಕ್ಕಿಲ್ಲ...!! ಒಳಿತಾಗ್ಲಿ.. \|/

Submitted by makara on
ನಾನು ನಿನ್ನ ದೇಹದ ನೆರಳು ಮಿಥ್ಯ, ನಿನ್ನ ದೇಹವೂ ಆತ್ಮದ ನೆರಳು ಅದೂ ಮಿಥ್ಯ, ಇದನು ನೆನಪಿಸಲೋಸುಗವೇ ನಾನಿರುವುದು ಸತ್ಯ. ಹೀಗಿರಬಹುದೇ ಮಧುಸೂದನ್ ಅವರೆ?

Submitted by venkatb83 on
ಮಧುಸೂಧನ್ ಅವ್ರೆ ನಿಮ್ಮ ಬ್ಲಾಗ್ ಗೆ ಭೇಟಿ ಇತ್ತು ಎಲ್ಲವನ್ನು ಓದಿದೆ... ಅಬ್ಬಬ.. ಎಸ್ತೆಲ್ಲ ವಿಷಯಗಳ ಬಗ್ಗೆ ಬರೆದಿರುವಿರಿ... ಕೆಲವೊಂದು ಚುರುಕು ಮುಟ್ಟಿಸುತ್ತವೆ... ಕೆಲವೊಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ... ನಿಮ್ಮ ಬ್ಲಾಗ್ ಗೆ ಸದಸ್ಯನಾಗಿರುವೆ... ಎಲ್ಲವೂ ಸಖತ್.. ಶುಭವಾಗಲಿ.. \|/

Submitted by harishsharma.k on
ನನ್ನ ನೆರಳಿನ ಅಗತ್ಯ ನನಗೆ ತಿಳಿದಾಗ ನಿಮ್ಮ ನೆರೆಳಿನ ಬಗ್ಗೆ ತಿಳ್ಸುತ್ತೇನೆ ಅಲ್ಲಿವರೆವಿಗು ನಗುವಿರಲಿ. ಕವನ ಬಹಳ ಅರ್ಥಪೂರ್ಣವಾಗಿದೆ. ನಗುವಿನಿಂದ. ಹರೀಶ್ ಶರ್ಮ.