23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾನೂ ಅಮ್ಮನಾದೆ!!!

August 18, 2012 - 4:42pm
veena wadki

ನಿನ್ನೆ- ಮೊನ್ನೆಯವರೆಗೆ  ಆಡುತಾಡುತಲೇ ಬೆಳೆದೆ

ಇಂಧ್ಹೇಗೋ  ನಾಕಾಣೆ ನಾನೂ ಅಮ್ಮನಾದೆ!!

 

ಹೊರುವ ಭಾರವು ಇಲ್ಲ, ಹೆರುವ ನೋವೆನಗಿಲ್ಲ

ಮಾತಾಡಿಸಿ- ನಗಿಸುವ ಖುಷಿಯೊಂದೆ ನನಗೆ.

ಮಗು ಎಡವೀತೇಂಬ ಆತಂಕವಿಲ್ಲ, ಕಳೆದುಹೋದೀತೆಂಬ ಭಯವೆನಗಿಲ್ಲ

ನಾಜೂಕು  ಮನದ ನಾರಿಯ  ಮಡಿಲುಂಟು ನನಗೆ.

 

ಚಂದಿರನ  ತೋರಿಸಿ ತುತ್ತಿಟ್ಟ ಕೈಗೆ

ತುಪ್ಪ- ಸಕ್ಕರೆ ಕಲಿಸಿದ  ತಟ್ಟೆಯಿಡುವ  ತವಕ.

ಅಡುಗೆಯೆಂದೇನೋ  ಮಾಡಿ, ಕೆಡಿಸಿ  ಹಲುಬಿದಾಗ

ಮಗುವೇ ರಮಿಸುವುದು ಇದೆಲ್ಲ  ಸಹಜ  ಕಲಿಯುವ  ತನಕ.

 

ಕಾಡಿಸುವುದಿಲ್ಲ - ಪೀಡಿಸುವುದಿಲ್ಲ, ರಚ್ಚೆ ಹಿಡಿದಳುವುದಿಲ್ಲ

ಹೆಚ್ಹಾಗಿ ಹೇಳಬೇಕೆಂದರೆ ಪದಗಳೇ  ಉಳಿಯುತ್ತಿಲ್ಲ.

ಕಣ್ರೆಪ್ಪೆಯಂತೆ  ಕನಸುಗಳಿಗೆಲ್ಲ  ಕಾವಲಾಗಿರುವ  ಕೂಸು

ತನ್ನ  ಮಗುವಿಗಾಗಿ , ಮಗುವಾಗಿ ಬಯಸುವುದೆಲ್ಲರ ಲೇಸು.

 

ನಿನ್ನೆ- ಮೊನ್ನೆಯವರೆಗೆ  ಆಡುತಾಡುತಲೇ ಬೆಳೆದೆ

ಇಂಧ್ಹೇಗೋ ನಾಕಾಣೆ ನಾನೂ  ಅಮ್ಮನಾದೆ.

ಎರಡೇ ದಿನದೊಳಗೆ  ಮಗು ಹೆತ್ತು ಬೆಳೆಸಿದೆನು

ಮೂರನೇ  ದಿನ  ಕಳೆಯುತ್ತಲೇ  ಮತ್ತೆ ಮಗುವಾದೆ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಆತ್ಮೀಯ ವೀಣಾ ಅವರೆ, ಕವನ ಬಹಳ ಸುಂದರ ಮತ್ತು ಭಾವುಕವಾಗಿದೆ. ಹಂಚಿಕೊಂಡಿದಕ್ಕಾಗಿ ಧನ್ಯವಾದಗಳು.

Submitted by makara on
ವೀಣಾ ಅವರೆ, ಚೆನ್ನಾಗಿದೆ ನೀವು ಕವಿತೆಗೆ ಜನ್ಮ ಕೊಟ್ಟು ಅದನ್ನು ಬೆಳೆಸಿ ಮತ್ತೆ ನೀವು ಮಗುವಾದದ್ದು :)

Submitted by venkatb83 on
+1(ಶ್ರೀಧರ್ ಜೀ ಅವರ) "ನಿನ್ನೆ- ಮೊನ್ನೆಯವರೆಗೆ ಆಡುತಾಡುತಲೇ ಬೆಳೆದೆ ಇಂಧ್ಹೇಗೋ ನಾಕಾಣೆ ನಾನೂ ಅಮ್ಮನಾದೆ. ಎರಡೇ ದಿನದೊಳಗೆ ಮಗು ಹೆತ್ತು ಬೆಳೆಸಿದೆನು ಮೂರನೇ ದಿನ ಕಳೆಯುತ್ತಲೇ ಮತ್ತೆ ಮಗುವಾದೆ." ಸಖತ್... ಶುಭವಾಗಲಿ... \|/

Submitted by veena wadki on
ರಾಜೇಂದ್ರ ಕುಮಾರ, ಶ್ರೀಧರ್ ಸರ್, ಸಪ್ತಗಿರಿವಾಸಿ ಮತ್ತು ವಿರುಪಾಕ್ಷಪ್ಪ ಅವ್ರೆ , ನಿಮ್ಮೆಲ್ಲರ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

Submitted by gurudutt_r on
ಸೃಷ್ಟಿ ಒಂದು ವಿಸ್ಮಯ, ನಿಮ್ಮ ಕವನದ ಸಾಲುಗಳು ತುಂಬಾ ಹಿಡಿಸಿದವು. ತಾಯಿಯ ಬಗ್ಗೆ ಬಹಳಷ್ಟು ಕವನಗಳನ್ನು ಓದಿದ್ದೇನೆ, ಆದರೇ ತಂದೆಯ ಮೇಲಿನ ಕವನಗಳು ತೀರ ಕಡಿಮೆ. ದಯವಿಟ್ಟು ಯಾರಾದರೂ ಒಂದು ಪ್ರಯತ್ನ ಮಾಡುವಿರಾ? ವೀಣಾ, ರಾಜೇಂದ್ರಕುಮರ್ ರಾಯ್ಕೋಡಿ, ಮಧುಸೂಧನ್, ಸಂತೋಶ್ ಕುಮಾರ್, ರಾಬಿ, ಜಯಂತ್ ರಮಾಚಾರ್ ಹಾಗು ಗೊಪಾಲ ಕೃಷ್ಣ ಭಟ್ರೆ...ಏನಂತೀರಾ?

Submitted by mouna on
ವೀಣಾ ಅವರೆ ನಿಮ್ಮ ಕವನ ತುಂಬಾ ಭಾವನಾತ್ಮಕವಾಗಿ ಮನಸ್ಸಿಗೆ ಇಡಿಸಿದೆ. ‍ ‍‍‍‍‍‍‍‍ ‍ ಕೆ.ಆರ್.ಮೌನೇಶ‌