June 18, 2012 - 2:26pm
ನಿತ್ಯಾನ೦ದನ ಕತೆ ಹೆಚ್ಚು ಕಡಿಮೆ ಮುಗಿದ೦ತಾಗಿದೆ(ಹಾಗೆನ್ನಬಹುದಾ..?).ಆದರೆ ನಿತ್ಯಾನ೦ದನ ಕತೆಯ ಜೋತೆಗೆ ಮಾಧ್ಯಮಗಳ ಸಾಚಾತನ ಪ್ರಶ್ನೆಯೂ ಏಳುತ್ತಿದೆ.ಇದಕ್ಕೆ ಪೂರಕವೆ೦ಬ೦ತೇ ಅತ್ರಾಡಿ ಸುರೇಶ್ ಹೆಗಡೆಯವರು ನಿತ್ಯಾನ೦ದನ ಪ್ರಸ೦ಗಕ್ಕೆ ಕಾರಣವಾದ ಆರತಿ ರಾವ್ ಬರಿ ಒ೦ದೇ ಕಣ್ಣಲ್ಲಿ ಆಳುವುದೇಕೆ ಎ೦ದು ಪ್ರಶ್ನೆ ಎತ್ತಿದ್ದಾರೆ.ತಮಾಷೆಯೆನಿಸಿದರೂ ಇದು ನಿಜವೇ!!!!
ಆದರೆ ಮುಖ್ಯ ಪ್ರಶ್ನೆ ಅದಲ್ಲ.ಇಷ್ಟು ದಿನ ಈ ಆರತಿ ರಾವ್ ಎಲ್ಲಿದ್ದರು..? ಸುವರ್ಣ ಟಿವಿವಾಹಿನಿಗೆ ಅವರು ಸಿಕ್ಕಿದ್ದಾದರೂ ಎಲ್ಲಿ..? ಈ ಹಿ೦ದೆ ನಿತ್ಯಾ ರ೦ಜಿತಾ ಪ್ರಕರಣವಾದಾಗಲೇ ಏಕೆ ಆರತಿ ರಾವ್ ಮು೦ದೆ ಬರಲಿಲ್ಲ..? ಎ೦ಬಿತ್ಯಾದಿ ಪ್ರಶ್ನೆ ಕೊರೆಯುತ್ತದೆ.ಇನ್ನು ಮಾಧ್ಯಮಗಳ ಸಾಚಾತನವೂ ಪ್ರಶ್ನಾರ್ಹವೇ.”ನಿತ್ಯಾನ ಗೂ೦ಡಾ ಶಿಷ್ಯನ ದಾಳಿಯಿ೦ದ ಗಾಯಗೂ೦ಡ ಪತ್ರಕರ್ತ/ಕನ್ನಡ ಸ೦ಘದ ಸದಸ್ಯರು’ ಎ೦ದು ಸುವರ್ಣ ಟಿವಿ ತೋರಿಸಿದರೇ,ಇನ್ನೊ೦ದು ಕನ್ನಡ ಸುದ್ದಿ ಮಾಧ್ಯಮದಲ್ಲಿ ’ಗೇಟಿನ ಮೇಲಿನಿ೦ದ ಹಾರಿ ಗಾಯಗೊ೦ಡವರು ಈ ಪತ್ರಕರ್ತರು ಮತ್ತು ಸ೦ಘದ ಸದಸ್ಯರು’ಎ೦ದು ವಿಡಿಯೋ ಸಹಿತ ತೋರಿಸಲಾಗುತ್ತಿದೆ.ಯಾರನ್ನು ನ೦ಬುವುದು..? ಕೇವಲ ಇಷ್ಟು ಮಾತ್ರವಲ್ಲ,’ನಿತ್ಯಾನ ಶಿಷ್ಯ೦ದಿರ ಗೂ೦ಡಾಗಿರಿ’ಎ೦ದು ಸುವರ್ಣ ವಾಹಿನಿಯವರು ತೋರಿಸುತ್ತಿದ್ದಾಗ ಹೆಚ್ಚಿನೆಡೆ ಪತ್ರಕರ್ತರ ಗೂ೦ಡಾಗಿರಿಯೇ ಕ೦ಡುಬರುತ್ತಿದ್ದುದು ಆಶ್ಚರ್ಯವೇ.
ನಿತ್ಯಾನ೦ದ ಮೋಸಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ ಇತ್ತೀಚೆಗೆ ಮಾಧ್ಯಮಗಳ ನಿಷ್ಠೆ ಕೂಡಾ ಪ್ರಶ್ನಾರ್ಹವೇ.ಏಕಪಕ್ಷಿಯ ವಿವರಣೆ ಕೊಡುವುದು ,ತಮ್ಮದೇ ಆದ ತೀರ್ಪು ಕೊಟ್ಟು ಬಿಡುವುದು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಿಗೆ ಸರ್ವೇ ಸಾಮಾನ್ಯ ಎನಿಸುವ೦ತಾಗಿದೆ.ಈ ಹಿ೦ದೆ ವಕೀಲರಿ೦ದ ಪತ್ರಕರ್ತರ ಮೇಲಿನ ಸ೦ದರ್ಭ ಇದಕ್ಕೆ ಉತ್ತಮ ಉದಾಹರಣೆ.ನಿತ್ಯಾನ೦ದನನ್ನು ನ೦ಬುವುದು ಕಷ್ಟವಾದರೇ ,ಮಾಧ್ಯಮಗಳ ವಿವರಣೆಯನ್ನೂ ಕೂಡಾ ಪೂರ್ತಿಯಾಗಿ ನ೦ಬುವುದೂ ಕಷ್ಟವೇ . ’ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು’ ಎ೦ಬ ಗಾದೆ ಸಾರ್ವಕಾಲಿಕ ಸತ್ಯ ಎನಿಸುತ್ತದೆ ಅಲ್ಲವೇ../
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ನಿತ್ಯಾ ಮತ್ತು ಮಾಧ್ಯಮ
ನಿಮ್ಮ ಮಾತು ನಿಜ ಈಗ ಯಾರನ್ನು ನಂಬುವಂತಿಲ್ಲ ಹಾಗಿದೆ ಇಂದಿನ ಪರಿಸ್ಥಿತಿ.
...ಸತೀಶ್
ಉ: ನಿತ್ಯಾ ಮತ್ತು ಮಾಧ್ಯಮ
ಇಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರತಿಯೊಂದು ಪಕ್ಷಕ್ಕೂ ತಮ್ಮದೇ ಆದ ಒಂದೊಂದು ವಾರ್ತಾ ವಾಹಿನಿಗಳಿವೆ ಮತ್ತು ವಾರ್ತಾಪತ್ರಿಕೆಗಳು ಕೂಡ. ಹಾಗಾಗಿ ಯಾವುದೇ ಒಂದು ವಿಷಯವನ್ನು ನಾವು ಅರ್ಥಮಾಡಿಕೊಳ್ಳ ಬೇಕಾದರೆ ವಿಷಯವನ್ನು ಮೊದಲು ಪ್ರಕಟಿಸಿದ ಪತ್ರಿಕೆಯವರ ವಿರೋಧಿ ಪತ್ರಿಕೆಯವರು ಮರುದಿನ ಏನು ಬರೆಯುತ್ತಾರೋ ನೋಡಿ ಅದನ್ನು ನ್ಯಾಯಾಧೀಶರಂತೆ ನಾವು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ.
ಉ: ನಿತ್ಯಾ ಮತ್ತು ಮಾಧ್ಯಮ
ಬೆಳೆಗಿನಿಂದ ಸಂಜೆಯವರೆಗೆ ತೋರಿಸಿದ್ದನ್ನೇ ತೋರಿಸುತ್ತಾ, ಒಂದು ಚಿಕ್ಕ ಘಟನೆಯನ್ನು ರಬ್ಬರ್ರಿನಂತೆ ಎಳೆದು ಎಳೆದೊ ಕೊನೆಗೆ ಇವರು ಹೇಳೋದೆಲ್ಲ ಸತ್ಯ ಎಂದು ನಂಬಿ ಬಿಡಬೇಕೆಂದು ಹಠ ಹಿಡಿದು ಕೂರುವ ಈ ಪ್ರಸಾರ ಮಾಧ್ಯಮವನ್ನು ಜನ ನೋಡುವುದನ್ನು ಕಡಿಮೆ ಮಾಡುವವರೆಗೂ ಇವರ ಹಾವಳಿ ತಪ್ಪದು. ಜನ ಬೇಸರಹತ್ತಿ ತಿರಸ್ಕರಿಸುವ ಕಾಲ ದೂರ ಉಳಿದಿಲ್ಲ.
ಪ್ರಕಾಶ್
ಉ: ನಿತ್ಯಾ ಮತ್ತು ಮಾಧ್ಯಮ
ಮಾಧ್ಯಮವು ಒಂದು ಕನ್ನಡಿಯಂಕೆ ಕಾರ್ಯ ನಿರ್ವಯಿಸಬೇಕು.ಆದರೆ ತಾವು ಕೊಟ್ಟಿದ್ದೇ ತೀರ್ಪು ಅನ್ನುವಂತೆ ಜನರನ್ನು ತಪ್ಪು ದಾರಿಗೆಳೆಯುತಿದ್ದಾರೆ.ಇದನ್ನು ಫೋನ್ ಕಾರ್ಯಕ್ರಮದಲ್ಲಿ ಪ್ರಶ್ನಿಸಲು ಹೋದರೆ.
ತಾಂತ್ರಿಕ ಕಾರಣಗಳಿಂದ ಕರೆ ಕಟ್ ಆಯ್ತು ಎನ್ನುವ ವಿವರಣೆ..
ನಿಮ್ಮ ಲೇಖನ ಸಾರ್ವಕಾಲಿಕ ಸತ್ಯ.ಚೆನ್ನಾಗಿ ಬರೆದಿದ್ದೀರಿ.
ಉ: ನಿತ್ಯಾ ಮತ್ತು ಮಾಧ್ಯಮ
ನಿತ್ಯಾನ೦ದ ಮೋಸಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ?! ಹೇಗೆ ನಿರ್ಧರಿಸಿದಿರಿ ಸ್ವಾಮಿ ? ನನ್ನ ಅನುಭವದಲ್ಲಿ ಪತ್ರಕರ್ತರೆಂದರೆ ಪಕ್ಕಾ ಬ್ಲಾಕ್ ಮೇಲರ್ಸ್ !ಟಿವಿ ನ್ಯೂಸ್ ಚಾನಲ್ ಗಳ ವರದಿಗಳೆಂದರೆ ಒಂದು ಚೆನ್ನಾದ ಹಾಸ್ಯ ಕಾರ್ಯಕ್ರಮ ಅಷ್ಟೇ !
ಉ: ನಿತ್ಯಾ ಮತ್ತು ಮಾಧ್ಯಮ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ಮಾಧ್ಯಮದ ಬಗ್ಗೆ ಖ೦ಡಿತ ಎಚ್ಚರ ವಹಿಸುವ ಕಾಲವಿದು