ನೀನಿರದೆ ನಾನಿರುವೆನೇ?

ನೀನಿರದೆ ನಾನಿರುವೆನೇ?

ಕವನ

ನಿನ್ನ ನೋಡದೆ ಒಂದರೆಕ್ಷಣವೂ ನಾನಿರಲಾರೆ
ಕಳೆದಾಜನ್ಮಕೂ ಇದೀಜನ್ಮಕೂ  ಮುನ್ನಾಜನ್ಮಾಕೂ
ನಿನ್ನ ಜೊತೆಯದು ಬಯಸುತಿರುವೆ ಮತ್ತೆಲ್ಲಾಜನ್ಮಕೂ
ನಿನ್ನಗಲಿರಲಾರೆ ಅಗಲಿ ಜೀವಿಸಲಾರೆ ಮತ್ತಾವಜನ್ಮಕೂ

ಕಂಗೊಳಿಸುವ ಕಾಮನಬಿಲ್ಲೆನಿಸಿದೆ ನಿನ್ನ ನಗುಮೊಗವು
ನಿನ್ನ ಗೆಜ್ಜೆನಾದವ ಆಲಿಸುತಿಹೆ ತಂಗಾಳಿಯಲಿ
ಚಂದ್ರಿಕೆಯ ಚೆಲುವನುಣಿಸಿದೆ ನಿನ್ನೊಡನಿರುವ ಪ್ರತಿಕ್ಷಣದಿ
ನಮ್ಮೊಲವ ಸಂಗಮವೆನಿದೆ ಅತೀವ ಹೃದಯಂಗಮವು

ಉಕ್ಕೇಳುವಲೆಯು ಕಡಲ ತೊರೆಯಲು ಸಾಧ್ಯವೆ?
ವರ್ಷಾಧಾರೆಯು ಧರೆಯನಲ್ಲದೆ ಮತ್ತೇನನೋ ಸೇರೀತೆ?
ನಿನ್ನನಲ್ಲದೆ ಬಯಸೀತೇ ಮನವಿದು ಬೇರಾರನೋ?
ನಿನ್ನನಗಲಿ ಬಾಳಲಾದೀತೆ ಜೀವವಿದಕೆ ಅದಾವಜನ್ಮಕೂ?

                   © ರಾಘವ ಹರಿವಾಣಂ