ನೆನಪು ತಂದವಳ‌ ಬಗ್ಗೆ......

ನೆನಪು ತಂದವಳ‌ ಬಗ್ಗೆ......

ಕವನ

ಇಳಿ ಸಂಜೆ ಹೊತ್ತು

ಮಳಲು ದಂಡೆಯ ಮೇಲೆ ನಿಂತ‌

ಅವಳ ಸುಂದರ ಮೊಗದಲ್ಲಿ

ನಗೆಯ ಹೊನಲು ಚಿಮ್ಮಿ

ತುಂಟ ಕೆನ್ನೆಗೆ ಮುಂಗುರುಳು

ಮುತ್ತಿಡುವ ಸಮಯಯದಲಿ

ಜಾರುವ ಮುತ್ತುಗಳು

ಕೆಳಗುರುಳಿ ಪುಟಿಯುತ್ತಿವೆ.

 

ಬದುಕಿರದ‌ , ಬದುಕುವ‌

ಬಯಲಿನ ಆಳದಲ್ಲಿ

ಬಂದು ನಿಂತವಳು

ಬಾನಾಕಾಶದಲ್ಲಿ ಹಕ್ಕಿಯಂತೆ

ರೆಕ್ಕೆ ಬಿಚ್ಚಿ ಹಾರುವ ಮನಸ್ಸು....!

 

ಚಿತ್ತ ಚಿತ್ತಾರದ ಬಣ್ಣ ಬಳಿದು

ಕಮರಿದ ಬದುಕಿನಲಿ

ಪುಟಿದೇಳುವ ತುಡಿತಕ್ಕೆ

ಲಗ್ಗೆ ಇಟ್ಟು 

ಹುಚ್ಚು ಕನಸುಗಳ‌

ಭೇಕರ ಸೆಳೆತದೊಳಗೆ

ಮಿಂಚು ಸಂಚರಿಸಿದಂತಾಗಿ

ನರನಾಡಿಗಳ‌ , ಮೈಮನಗಳ‌

ಸುಳಿದಾಟದಲಿ........

ಅವಳ ಬಗ್ಗೆ ತಿಳಿದವರಾರು....?

ಬದುಕು ಧ್ವನಿಸುತ್ತಿದೆ ಮತ್ತೆ ಮತ್ತೆ......

ಮೌನ‌ ,

ಕನಸು ಸುಂದರಗೊಳಿಸಿ

ನೆನಪು ತಂದವಳ ಬಗ್ಗೆ.......